Viral Video : ನೀವು ಅದೆಷ್ಟೇ ಈ ಮಂಡೇ ಬ್ಲ್ಯೂಸ್ ಅನ್ನು ಮೀರುತ್ತೇನೆ ಎಂದು ಸನ್ನದ್ಧರಾಗಿ ಆಫೀಸಿಗೆ ಬಂದರೂ ಅದು ನಿಮ್ಮನ್ನು ಬಿಡುವುದೇ ಇಲ್ಲ. ಮಧ್ಯಾಹ್ನದ ತನಕವಾದರೂ ನಿಮ್ಮನ್ನು ತನ್ನ ಕೈವಶದಲ್ಲಿಯೇ ಇಟ್ಟುಕೊಂಡಿರುತ್ತದೆ. ಕಳೆದವಾರ ಈ Monday Blues ನಿಂದ ಹೊರಬರಲು ಒಂದು ಬೆಕ್ಕು ಸಿಮೆಂಟು ಗಚ್ಚನ್ನೇ ಜಾರುಬಂಡೆಯಾಗಿಸಿಕೊಂಡು ತನ್ನ ಲೋಕದಲ್ಲಿ ಮೈಮರೆತಿದ್ದ ವಿಡಿಯೋ ನೋಡಿದಿರಿ. ಈಗ ಈ ವಿಡಿಯೋ ನೋಡಿದರೆ ನಿಮ್ಮ ಮಂಡೇ ಬ್ಲ್ಯೂಸ್ ಮಂಡೆಯಿಂದ ಹಾರಿ ಹೋಗಬಹುದಾ? ಪ್ರಯತ್ನಿಸಿ.
Cow sliding down a hill.. ? pic.twitter.com/2RAB32mhY5
ಇದನ್ನೂ ಓದಿ— Buitengebieden (@buitengebieden) November 10, 2022
ಹೇಗಿದೆ ಹಸುವಿನ ಈ ಜಾರುಬಂಡೆ? ನವೆಂಬರ್ 11ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ತನಕ 2.4 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಯಾರೋ ಒಬ್ಬರು ಆನೆಯ ವಿಡಿಯೋ ಹಾಕಿ, ನೋಡಿ ಇಲ್ಲಿ ಆನೆ ಕೂಡ ಹೀಗೇ ಮಾಡುತ್ತಿದೆ ಎಂದಿದ್ದಾರೆ. ಈ ವಿಡಿಯೋ ನನ್ನ ಬಾಲ್ಯವನ್ನು ನೆನಪಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಕೆಳಗೆ ನಿಂತಿರುವುದು ಇದರ ಅಮ್ಮ ಅನ್ನಿಸುತ್ತೆ. ಮಗು ಆಟವಾಡುವುದನ್ನು ನೋಡಿ ಖುಷಿಪಟ್ಟಿರಬೇಕು ಎಂದಿದ್ದಾರೆ ಈ ಹಸುವಿನ ವಿಡಿಯೋಗೆ.
ಮತ್ತೆ ಮತ್ತೆ ಈ ವಿಡಿಯೋ ನೋಡುತ್ತ ಕುಳಿತಿದ್ದೀರಾ? ಸ್ವಲ್ಪಾದರೂ ನಿಮ್ ಮಂಡೆಯಿಂದ ಬ್ಲ್ಯೂಸ್ ಸರಿಯುತ್ತಿದೆಯಾ?
ಹೀಗೆ ಆಗಾಗ ಮಕ್ಕಳಂತೆ, ಪ್ರಾಣಿಯಂತೆ ಮೈಮರೆತು ಕ್ಷಣ ಹೊತ್ತಾದರೂ ಇರಬೇಕು ಎಂಬ ಆಸೆ ಉಂಟಾಗುತ್ತಿದೆಯಾ? ತಡ ಮಾಡಬೇಡಿ ಮತ್ತೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:39 pm, Mon, 14 November 22