
Virat Kohli: ತಮ್ಮ ತಮ್ಮ ಆಸಕ್ತಿಗಳಿಗೆ ತಕ್ಕಂತೆ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ತಮ್ಮ ಅಭಿವ್ಯಕ್ತಿಗಳ ಮೂಲಕ ಆರಾಧಿಸುವುದು ಸಹಜ. ತಮಗೆ ಇಷ್ಟವಾದ ವ್ಯಕ್ತಿಯ ಬಗ್ಗೆ ಕವನ ಬರೆಯುತ್ತಾರೆ. ಹಾಡು ಹಾಡುತ್ತಾರೆ. ರಂಗೋಲಿ ಬಿಡಿಸುತ್ತಾರೆ. ಪೇಂಟಿಂಗ್ ಮಾಡುತ್ತಾರೆ. ಇದೀಗ ಯುವಕನೊಬ್ಬ ತನ್ನ ನೆಚ್ಚಿನ ವಿರಾಟ ಕೊಹ್ಲಿಯ ಚಿತ್ರವನ್ನು ಪೇಂಟ್ ಮಾಡಿ ವೈರಲ್ ಆಗಿದ್ದಾನೆ. ಅಂಥದ್ದೇನು ವಿಶೇಷ ಇದೆ? ಎಂದು ನೀವು ಯೋಚಿಸುತ್ತಿದ್ದೀರಾ? ಈ ಯುವಕ ಪೇಂಟ್ ಮಾಡಲು ತನ್ನ ನಾಲಗೆಯನ್ನೇ (Tongue) ಬ್ರಷ್ ಮಾಡಿಕೊಂಡಿದ್ದಾನೆ. ನೆಟ್ಟಿಗರು ಈ ವಿಡಿಯೋ ನೋಡಿ ಇವನ ಅಭಿಮಾನವನ್ನು ಮತ್ತು ಪ್ರತಿಭೆಯನ್ನು ಶ್ಲಾಘಿಸುತ್ತಿದ್ದಾರೆ.
ಇದನ್ನೂ ಓದಿ : Viral Optical Illusion: ಇವುಗಳಲ್ಲಿ ಯಾವ ಕಪ್ ಮೊದಲು ತುಂಬುತ್ತದೆ ಎಂದು ಹೇಳಬಲ್ಲಿರಾ?
ಸೆ. 9ರಂದು Xನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 2.7 ಮಿಲಿಯನ್ ಜನರು ನೋಡಿದ್ದಾರೆ. 10,700 ಜನರು ಲೈಕ್ ಮಾಡಿದ್ದಾರೆ. ಸುಮಾರು 2 ಸಾವಿರ ಜನರು ರೀಪೋಸ್ಟ್ ಮಾಡಿದ್ದಾರೆ. 1,200 ಜನರು ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ವಿರಾಟ್ ಮೇಲಿನ ಇವರ ಪ್ರೀತಿಯನ್ನು ವಿವರಿಸಲು ಪದಗಳೇ ಇಲ್ಲ, ಈ ಯುವಕ ಅತ್ಯದ್ಭುತವಾಗಿ ಚಿತ್ರ ಬಿಡಿಸಿದ್ಧಾರೆ ಎಂದಿದ್ದಾರೆ ಅನೇಕರು.
ಈ ಮೊದಲು ಇನ್ನೊಬ್ಬ ಕಲಾವಿದರು ಭೂತಗನ್ನಡಿಯಿಂದ ಮರದ ಮೇಲ್ಮೈಯನ್ನು ಸುಡುತ್ತ ವಿರಾಟನ ಆಕೃತಿಯನ್ನು ಮೂಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಚಿತ್ರ ನಿಜಕ್ಕೂ ತುಂಬಾ ಚೆನ್ನಾಗಿದೆ. ಆದರೆ ಈ ಆಲೋಚನೆ ನಿಮಗೆ ಹೇಗೆ ಹೊಳೆಯಿತು? ಆ ಬಣ್ಣಗಳು ನಿಮ್ಮ ದೇಹ ಸೇರಿ ಹಾನಿಯುಂಟು ಮಾಡುವುದಿಲ್ಲವೆ? ಎಂದು ಕೇಳಿದ್ದಾರೆ ಒಬ್ಬರು. ಇದು ಸೂಪರ್ ಡ್ಯೂಪರ್ ಆರ್ಟ್ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಉಸಿರುಗಟ್ಟುವಿಕೆಯಿಂದ ಬಾಲಕನನ್ನು ರಕ್ಷಿಸಿದ ಮಹಿಳೆ; ಆಕೆಯನ್ನು’ಹೀರೋ’ ಎಂದ ನೆಟ್ಟಿಗರು
ಕೆಲವರು ಈ ಯುವಕನ ಬಗ್ಗೆ ತಮಾಷೆಯನ್ನೂ ಮಾಡಿದ್ದಾರೆ. ಈತನಕ ಕೈಗಳನ್ನು ಬೇರೆ ಯಾರಿಗಾದರೂ ಬೇಕಾದಲ್ಲಿ ದಾನ ಮಾಡಿ ಎಂದಿದ್ದಾರೆ ಒಬ್ಬರು. ಈತನಕ ಹೆಂಡತಿ ಬಹಳ ಸುಖಯಾಗಿರುತ್ತಾಳೆ ಎಂದಿದ್ಧಾರೆ ಇನ್ನೊಬ್ಬರು. ಇದು ಬಹಳ ಅದ್ಭುತವಾದ ರಹಸ್ಯಪ್ರತಿಭೆ, ರಹಸ್ಯವಾಗಿಯೇ ಇರಲಿ ಎಂದಿದ್ದಾರೆ ಮತ್ತೊಬ್ಬರು. ಹೀಗೆ ಪ್ರತಿಕ್ರಿಯಿಸುವ ನಿಮ್ಮ ಅಭಿರುಚಿಯನ್ನು ನೀವೇ ಕೊಂಡಾಡಿಕೊಳ್ಳಬೇಕು ಎಂದು ಪ್ರತಿಯಾಗಿ ಹೇಳಿದ್ದಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ