ಬೆಕ್ಕುಗಳ ಜಗಳಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾಗೆ; ರೆಫರಿ ಎಂದು ಕೂಗುತ್ತಿದ್ದಾರೆ ನೆಟ್ಟಿಗರು

Cats : ಎಲ್ಲರಿಗೂ ಸಾಕಷ್ಟು ಜನ ಸ್ನೇಹಿತರಿರುತ್ತಾರೆ ನಿಜ. ಆದರೆ ಕೆಲವರು ಈ ಕಾಗೆಯಂತೆ ಕಡ್ಡಿಗೀರುತ್ತಲೇ ಇರುತ್ತಾರೆ ಎಂದಿದ್ದಾರೆ ನೆಟ್ಟಿಗರು. ನೋಡಿ ಕಾಗೆಕಾಲದಲ್ಲಿ ಈ ಮಾರ್ಜಾಲನ್ಯಾಯ.

ಬೆಕ್ಕುಗಳ ಜಗಳಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾಗೆ; ರೆಫರಿ ಎಂದು ಕೂಗುತ್ತಿದ್ದಾರೆ ನೆಟ್ಟಿಗರು
Crow incites fight between two cats in viral video Netizens say bird is referee
Updated By: ಶ್ರೀದೇವಿ ಕಳಸದ

Updated on: Nov 03, 2022 | 12:34 PM

Viral Video : ಈ ಬೆಕ್ಕುಗಳ ನಡುವೆ ಯಾಕೆ ಹೇಗೆ ಜಗಳ ಶುರುವಾಯಿತೋ ಆ ದೇವರೇ ಬಲ್ಲ. ಅಂತೂ ನಡುಬೀದಿಯಲ್ಲಿ ಶರಂಪರ ಜಗಳಕ್ಕಿಳಿದಿವೆ. ಉಪಾಯಕ್ಕೆ ಹೆಸರಾದ ಕಾಗೆ ಏನಾದರೂ ಮಾಡಿ ಜಗಳ ಬಿಡಿಸುವ ಸುಮನಸ್ಕನಾಗಬಾರದೆ? ಅವಕಾಶ ನೋಡಿಕೊಂಡು ಬೆಕ್ಕಿನ ಬೆನ್ನು ಕುಕ್ಕಿ ಜಗಳವನ್ನು ಕಾವೇರಿಸುತ್ತಾ ಹೋಗಿದೆ. ಎಂಥ ಕಾಲ ಬಂತು ಈ ಪ್ರಾಣಿ ಪಕ್ಷಿಗಳಿಗೇ…

ಈತನಕ ಈ ವಿಡಿಯೋ 3,000 ವೋಟ್​ಗಳನ್ನು ಪಡೆದುಕೊಂಡಿದೆ. ನೆಟ್ಟಿಗರಂತೂ ಈ ದೃಶ್ಯ ನೋಡಿ ಸರೀ ತಮಾಷೆ ಮಾಡುತ್ತಿದ್ದಾರೆ. ‘ನಮಗೆಲ್ಲರಿಗೂ ಗೆಳೆಯರಿದ್ದಾರೆ. ಆದರೆ ಕೆಲವರು ಮಾತ್ರ ಆಪ್ತರು. ಉಳಿದವರು ಈ ಕಾಗೆ ಮಾಡುವಂತೆ ಬೆಂಕಿ ಕಡ್ಡಿ ಗೀರುವಲ್ಲಿ ಸಿದ್ಧಹಸ್ತರು’ ಎಂದಿದ್ದಾರೆ ಒಬ್ಬರು. ‘ಆ ಕಾಗೆ ರೆಫರಿ’ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು. ‘ಈ ಕಾಗೆಗಳು ಭಾರೀ ಮಜಾ ಕೊಡುತ್ತವೆ’ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಕಾಗೆಕಾಲದಲ್ಲಿ ಮಾರ್ಜಾಲನ್ಯಾಯ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:30 pm, Thu, 3 November 22