Viral Video : ನಿನಗೆ ಬೇಡ ಅಂದ್ರೆ ಬೇಡ. ಆದರೆ ಒಂದು ಸಲ ನಾಲಗೆಗೆ ತಾಕಿಸಿಕೊಂಡು ನೋಡು. ಆಮೇಲೆ ತಿನ್ನು ಅಂತ ಒತ್ತಾಯ ಮಾಡುವುದೇ ಇಲ್ಲ ನಿನಗೆ. ಹೀಗಂತ ಅಮ್ಮಂದಿರು ಪ್ರೀತಿಯಿಂದ ನಂತರ ಜೋರು ಮಾಡಿ ತಮ್ಮ ತಮ್ಮ ಮಕ್ಕಳಿಗೆ ಹೊಸರುಚಿಗಳನ್ನು ತಿನ್ನಲು ಪ್ರೇರೇಪಿಸುತ್ತಾರೆ. ಏಕೆಂದರೆ ಅಮ್ಮಂದಿರಿಗೆ ಅದರ ರುಚಿ ಏನು ಅಂತ ಗೊತ್ತಿರುತ್ತೆ. ಒಮ್ಮೆ ನಾಲಗೆಗೆ ಆ ರುಚಿ ತಾಕಿದರೆ ಮಕ್ಕಳು ತಿಂದೇ ತಿಂತಾರೆ ಅನ್ನೋ ಆತ್ಮವಿಶ್ವಾಸ ಇದ್ದೇ ಇರುತ್ತೆ. ನಾವೆಲ್ಲರೂ ಈ ಹಂತವನ್ನು ಹಾಯ್ದು ಬಂದವರೇ. ಈಗಿಲ್ಲಿ ಈ ವಿಡಿಯೋದಲ್ಲಿ ಈ ಕೂಸಿಗೆ ಇದರಮ್ಮ ಮೊದಲ ಸಲ ಐಸ್ಕ್ರೀಮ್ ತಿನ್ನಿಸಲು ಪ್ರಯತ್ನಿಸುತ್ತಿದ್ದಾರೆ. ಎಂಥ ಕೆಟ್ಟ ಎಕ್ಸ್ಪ್ರೆಷನ್ ಕೊಡುತ್ತದೆ!
ಲಿಝಿ ಪಾಲ್ಮಟೇರ್ ಎನ್ನುವ ಟ್ವಿಟರ್ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಬರೆದ ಒಕ್ಕಣೆಗಳನ್ನು ಓದುವುದೇ ಒಂಥರಾ ಖುಷಿ. ನೀವೇ ಓದಿ ವಿಡಿಯೋ ನೋಡುತ್ತ.
ನಿಜ ತಾನೆ, ಅಮ್ಮ ಹೇಳುವುದು? ಇನ್ನು ಈ ಕೂಸಿಗೆ ಐಸ್ಕ್ರೀಮ್ ಎಂದರೆ ಸ್ವರ್ಗ. ಎಷ್ಟೇ ಬೇಡವೆನ್ನಿ ಅದು ಕೇಳುವುದೇ ಇಲ್ಲ. ಹೌದು ತಾನೆ? ನೆಗಡಿ, ಕೆಮ್ಮು ಬಂದಾಗಲೂ ಐಸ್ಕ್ರೀಮ್ ಕೊಡಿಸಲಿಲ್ಲ ಅಂತ ಅಮ್ಮ ಅಪ್ಪನೊಂದಿಗೆ ಜಗಳ ತೆಗೆದಿದ್ದು ನೆನಪಾಗ್ತಿದೆಯಾ? ನಾಳೆ ಈ ಮಗುವೂ ಹೀಗೇ, ಐಸ್ಕ್ರೀಮ್ಗಾಗಿ ‘ಹೋರಾಟ’ ಮಾಡುವುದೇ. ಪಾಪ ಅದರ ತಪ್ಪೇನಿದೆ? ರುಚಿ ತೋರಿಸಿದವರು ಯಾರು?
12 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಕಮೆಂಟ್ಗಳ ಮಳೆಯೇ ಸುರಿದಿದೆ.
ನಿಮಗೀಗ ಐಸ್ಕ್ರೀಮ್ ತಿನ್ನುವ ಆಸೆ ಆಗುತ್ತಿದೆಯಾ? ಹಾಗಿದ್ದರೆ ಮತ್ತೆ ಮಗುವಾಗಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:26 pm, Fri, 9 September 22