AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ‘ಲಗಣ ಲಾಗೀರೇ’; ಮತ್ತೆ ಬಂದಿದ್ದಾರೆ ‘ಡ್ಯಾನ್ಸಿಂಗ್ ದಾದೀ’

Dancing Dadi : ಹೊಸ ಉತ್ಸಾಹದೊಂದಿಗೆ ಹೊಸ ಹಾಡಿನೊಂದಿಗೆ ನೆಟ್ಟಿಗರನ್ನು ಸೆಳೆಯುತ್ತಿದ್ದಾರೆ ರವಿಬಾಲಾ ಶರ್ಮಾ ಎಂಬ 63 ವರ್ಷದ ನೃತ್ಯ ಕಲಾವಿದೆ. ನೋಡಿ ಈ ವಿಡಿಯೋ. ನಿಮಗೂ ಇಷ್ಟವಾಗಬಹುದು.

Viral Video : ‘ಲಗಣ ಲಾಗೀರೇ’; ಮತ್ತೆ ಬಂದಿದ್ದಾರೆ ‘ಡ್ಯಾನ್ಸಿಂಗ್ ದಾದೀ’
ಕಲಾವಿದೆ ರವಿಬಾಲಾ ಶರ್ಮಾ
TV9 Web
| Edited By: |

Updated on:Sep 15, 2022 | 5:28 PM

Share

Viral Video : 63 ವರ್ಷದ ರವಿಬಾಲಾ ಶರ್ಮಾ ಎನ್ನುವ ಈ ಕಲಾವಿದೆ ಇನ್​ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಅನೇಕ ಹಾಡುಗಳಿಗೆ ನೃತ್ಯಾಭಿನಯ ಮಾಡಿದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಪ್ರತೀ ಸಲ ಇವರು ಹೊಸ ವಿಡಿಯೋ ಪೋಸ್ಟ್​ ಮಾಡಿದಾಗ ನೆಟ್ಟಿಗರು ಇವರನ್ನು ಪ್ರೀತಿಯಿಂದ ಪ್ರಶಂಸಿಸುತ್ತಾರೆ. ಹೀಗಾಗಿ ನೆಟ್ಟಿಗರಿಗೆ ಇವರು  ಡ್ಯಾನ್ಸಿಂಗ್​ ದಾದೀ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇವರು ಶ್ರೇಯಾ ಘೋಷಾಲ್ ಹಾಡಿರುವ ಲಗಣ ಲಾಗೀರೇ ಹಾಡಿಗೆ ನೃತ್ಯಾಭಿನಯ ಮಾಡಿದ್ದಾರೆ. ಈ ವಿಡಿಯೋ ಅನ್ನು ಶ್ರೇಯಾ, ಕವಿತಾ ಸೇಠ್​ ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೀಗೆ ಕುಳಿತುಕೊಂಡೇ ನೃತ್ಯಾಭಿನಯ ಮಾಡುವ ಕಲಾವಿದರ ಸಂಖ್ಯೆ ಆನ್​ಲೈನ್​ನಲ್ಲಿ ಹೆಚ್ಚುತ್ತಿದೆ. ತಂತ್ರಜ್ಞಾನದ ಮಿತಿಯೊಳಗೇ, ಕಾಲಮಾನಕ್ಕೆ ತಕ್ಕಂತೆ ತಮ್ಮ ಪ್ರತಿಭಾ ಮತ್ತು ಕಲಾಪ್ರದರ್ಶನದಲ್ಲಿ ಮಾರ್ಪಾಡು ಮಾಡಿಕೊಂಡು ವಿಡಿಯೋ ಮಾಡುವ ಅನೇಕ ಕಲಾವಿದರು ಜನಪ್ರಿಯರಾಗುತ್ತಿದ್ದಾರೆ. ಈ ಪೈಕಿ ರವಿಬಾಲಾ ಶರ್ಮಾ ಕೂಡ ಒಬ್ಬರು. ಈ ಇಳಿವಯಸ್ಸಿನಲ್ಲಿಯೂ ಸುಲಲಿತವಾಗಿ ಭಾವ ಹೊಮ್ಮಿಸುವ ಇವರ ಕೌಶಲಕ್ಕೆ ಮತ್ತು ಉತ್ಸಾಹಕ್ಕೆ ನೆಟ್ಟಿಗರು ಮಾರುಹೋಗಿದ್ದಾರೆ. ಪ್ರಸ್ತುತ ಈ ವಿಡಿಯೋ ಅನ್ನು  5 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿಮ್ಮ ಈ ಪ್ರದರ್ಶನ ಪದಗಳಿಗೆ ನಿಲುಕುತ್ತಿಲ್ಲ ಎಂದು ಒಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ. ನೀವು ತುಂಬಾ ಆಕರ್ಷಕವಾಗಿದ್ದೀರಿ. ಪ್ರತೀ ಬಾರಿಯೂ ನೀವು ಪೋಸ್ಟ್ ಮಾಡಿದಾಗ ಅಚ್ಚರಿಯಿಂದ ನೋಡುತ್ತೇನೆ.’ ಎಂದಿದ್ದಾರೆ ಮತ್ತೊಬ್ಬರು.

ಯಾರಿಗೆ ಇಷ್ಟವಿಲ್ಲ ಕಲೆ ಎಂದರೆ? ಬಹುಶಃ ಕಲೆ ಎನ್ನುವುದು ಇರುವುದಕ್ಕೇ ಅಲ್ಲಲ್ಲಿ ಶಾಂತಿ ನೆಲೆಸಿರುವುದು. ಕಲೆಗೆ ನಿರಂತರ ಸಾಧನೆ ಬೇಕು. ಅದಕ್ಕಾಗಿ ಎಲ್ಲ ಜಂಜಡಗಳ ಮಧ್ಯೆಯೂ ಮನಸ್ಸನ್ನು ಕೇಂದ್ರೀಕರಿಸುವ ದೃಢಮನಸ್ಸನ್ನು ಹೊಂಚಿಕೊಳ್ಳುತ್ತಿರಬೇಕು. ನಿಮಗೆ ಈ ವಿಡಿಯೋ ಇಷ್ಟವಾಯಿತಲ್ಲವಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:25 pm, Thu, 15 September 22

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್