ವಿಡಿಯೋ ಮಾಡುತ್ತ ಸ್ಟಂಟ್ ಮಾಡಿದ ಯುವಕರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಪಾಯಕಾರಿ ಬೈಕ್ ಸ್ಟಂಟ್ ವೈರಲ್ ಆಗುತ್ತಿದ್ದಂತೆಯೇ ಮುಂಬೈ ಪೊಲೀಸರು ಟ್ವಿಟರ್ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಈ ರೀತಿಯಾದ ಸ್ಟಂಟ್ ಮಾಡದಿರುವಂತೆ ಎಚ್ಚರಿಕೆ ನೀಡಿದ್ದಾರೆ.
ಹೆಲ್ಮೆಟ್ ಇಲ್ಲದೇ ಬೈಕ್ನಲ್ಲಿ ಕುಳಿತ ಇಬ್ಬರು ಯುವಕರು ಸ್ಟಂಟ್ ಮಾಡುತ್ತಿದ್ದಾರೆ. ಹಾಡಿಗೆ ಲಿಪ್ ಸಿಂಕ್ ಮಾಡುತ್ತಾ ವಿಡಿಯೋ ಮಾಡಿದ್ದಾರೆ. ಬೈಕ್ ಚಲಿಸುತ್ತಿರುವಾಗ ಹಿಂಬದಿಯಲ್ಲಿ ಕುಳಿತ ಯುವಕ ಚಾಕುವಿನಿಂದ ಚುಚ್ಚುತ್ತಿರುವಂತೆ ನಟಿಸುತ್ತಾನೆ ಮತ್ತು ಬೈಕ್ನಿಂದ ಹಾರುತ್ತಾನೆ. ವಾಹನ ಸವಾರ ಸ್ವಲ್ಪ ಮುಂದೆ ಹೋಗಿ ಬೈಕ್ನಿಂದ ಬೀಳುತ್ತಾನೆ. ಅಪಾಯಕಾರಿಯಾದ ಸ್ಟಂಟ್ಗಳನ್ನು ಮಾಡದಿರಿ ಎಂದು ಮುನ್ನೆಚ್ಚರಿಕೆಯ ಸಂದೇಶದೊಂದಿಗೆ ಮುಂಬೈ ಪೊಲೀಸರು ವಿಡಿಯೋ ಹಂಚಿಕೊಂಡಿದ್ದಾರೆ.
ಅಪಾಯಕಾರಿ ಸ್ಟಂಟ್ ಮಾಡಿದ ಇಬ್ಬರು ಯುವಕರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ವಿಡಿಯೋ 800 ಲೈಕ್ಸ್ಗಳನ್ನು ಪಡೆದುಕೊಂಡಿದೆ. ಜತೆಗೆ 1,800ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ.
Attention barbie girl, it’s the real world
Life isn’t plastic- safety’s fantastic!Take precaution, life is your creation.
Both the accused booked under section 279 of IPC & MVA sections for dangerous & rash driving. License suspended too! #TunesOfLaw #RoadSafety pic.twitter.com/OGxYBS0XKi
— Mumbai Police (@MumbaiPolice) August 12, 2021
ಇದನ್ನೂ ಓದಿ:
ಹಾಯಾಗಿದೆ ಪ್ರಯಾಣವೆನ್ನುತ್ತಾ.. ಮೆಟ್ರೋ ರೈಲಿನಲ್ಲಿ ಮಂಗನ ಸ್ಟಂಟ್! ವಿಡಿಯೋ ನೋಡಿ
Viral Video: ಕೊಂಚ ಸ್ಲಿಪ್ ಆದ್ರೆ ಬದುಕುಳಿಯುವುದೇ ಡೌಟು! ಯುವಕನ ಸ್ಟಂಟ್ ವಿಡಿಯೋ ನೋಡಿದ್ರೆ ನೀವೂ ಬೆರಗಾಗ್ತೀರಾ