‘ದೇಶ ವಿಭಜನೆ ವೇಳೆ ನಾವು ದೂರವಾದೆವು, ಆದರೆ ಪ್ರೀತಿ ನಮ್ಮನ್ನು ಒಂದಾಗಿಸಿತು’: ಇದು ಗಡಿದಾಟಿದ ‘ಅಮರ ಪ್ರೇಮ’
Love Story: ಇತ್ತ ಆ ಹುಡುಗನೂ ತನ್ನ ಹುಡುಗಿಗಾಗಿ ಚಡಪಡಿಸುತ್ತಿದ್ದ. ಅವ ಸುಮ್ಮನೆ ಕೂರಲಿಲ್ಲ. ಪ್ರತಿ ದಿನ ಒಂದೊಂದು ಶಿಬಿರಕ್ಕೂ ಹೋಗಿ ಆಕೆ ಅಲ್ಲಿದ್ದಾಳಾ ಎಂದು ಹುಡುಕುತ್ತಿದ್ದ. ಅಂತೂ ಕೊನೆಗೆ ಬರೋಬ್ಬರಿ 90 ದಿನಗಳ ನಂತರ ಆ ಹುಡುಗನಿಗೆ ತನ್ನ ಹುಡುಗಿ ಸಿಕ್ಕಿದಳು.
‘ಗಡಿದಾಟಿದ ಪ್ರೇಮ್ ಕಹಾನಿ’ ಇದು ಎಂದರೆ ಅತಿಶಯೋಕ್ತಿ ಅಲ್ಲ . ನಿಜವಾದ ಪ್ರೀತಿಗೆ ಅಡೆತಡೆಗಳು ಸಹಜ. ಆದರೆ ಅದನ್ನು ದಾಟಿ ಪ್ರೀತಿಯಲ್ಲಿ ಒಂದಾಗುವ ಕ್ಷಣವಿದೆಯಲ್ಲ ಅದು ಬದುಕಿನ ಮಧುರ ಕ್ಷಣ. ಪ್ರೇಮಕತೆಗಳು ಹಳೆಯದ್ದಾಗಿರಬಹುದು, ಆದರೆ ಅದರ ಅನುಭವಗಳು ಸದಾ ಹೃದಯಕ್ಕೆ ಹತ್ತಿರವಾಗಿರುತ್ತವೆ. ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರದ ಹೊತ್ತಲ್ಲಿ ಹ್ಯೂಮನ್ಸ್ ಆಫ್ ಆಫ್ ಬಾಂಬೆಯು ತನ್ನ ಇನ್‌ಸ್ಟಾಗ್ರಾಮ್ ಪೇಜ್ ನಲ್ಲಿ ಪ್ರೇಮ್ ಕಹಾನಿಯೊಂದನ್ನು ಶೇರ್ ಮಾಡಿದೆ. ಹಿರಿಯ ಮಹಿಳೆಯೊಬ್ಬರು ಪ್ರೇಮಕಥೆಯನ್ನು ಹೇಳಿರುವ ವಿಡಿಯೊವನ್ನು ಹ್ಯೂಮನ್ಸ್ ಆಫ್ ಬಾಂಬೆ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಅಪ್ಲೋಡ್ ಮಾಡಿದೆ. ಮಹಿಳೆಯ ಪ್ರಕಾರ ಆಕೆ 16 ನೇ ವಯಸ್ಸಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಾಗ, ಅವಳು ತನ್ನ ನಿಶ್ಚಿತ ವರನ ಫೋಟೋಗಳನ್ನು ಮಾತ್ರ ನೋಡಿದ್ದರು. ಆದರೆ ಅವಳ ನಿಶ್ಚಿತಾರ್ಥದ ಆರು ತಿಂಗಳಲ್ಲಿ ದೇಶ ವಿಭಜನೆ ಆಯಿತು. ಹಾಗಾಗಿ ಆಕೆ ತನ್ನ ಕುಟುಂಬದೊಂದಿಗೆ ಸಿಂಧ್ ನಿಂದ ಅಮೃತಸರಕ್ಕೆ ರೈಲಿನಲ್ಲಿ ಹೋಗಬೇಕಾಗಿಬಂತು. ತನ್ನ ಹುಡುಗ ಹೇಗಿರುತ್ತಾನೋ, ಅವನು ಆರಾಮವಾಗಿರಬಹುದೇ? ಅವನನ್ನು ನೋಡದೆ ಇರಲಾಗದು ಎಂದು ಆಕೆಯ ಮನಸ್ಸು ಆತನಿಗಾಗಿ ಮಿಡಿಯುತ್ತಿತ್ತು.
ಇತ್ತ ಆ ಹುಡುಗನೂ ತನ್ನ ಹುಡುಗಿಗಾಗಿ ಚಡಪಡಿಸುತ್ತಿದ್ದ. ಅವ ಸುಮ್ಮನೆ ಕೂರಲಿಲ್ಲ. ಪ್ರತಿ ದಿನ ಒಂದೊಂದು ಶಿಬಿರಕ್ಕೂ ಹೋಗಿ ಆಕೆ ಅಲ್ಲಿದ್ದಾಳಾ ಎಂದು ಹುಡುಕುತ್ತಿದ್ದ. ಅಂತೂ ಕೊನೆಗೆ ಬರೋಬ್ಬರಿ 90 ದಿನಗಳ ನಂತರ ಆ ಹುಡುಗನಿಗೆ ತನ್ನ ಹುಡುಗಿ ಸಿಕ್ಕಿದಳು. ಅವನು ನನ್ನವನು ಮಾತ್ರ, ಅವನ ಪ್ರೀತಿ ಗಾಢವಾಗಿತ್ತು ಎಂಬುದನ್ನು ನಾನು ಕಂಡುಕೊಂಡೆ ಎಂದು ಆ ಮಹಿಳೆ ತನ್ನ ಯೌವನದ ದಿನಗಳನ್ನು ಹೇಳಿದ್ದಾರೆ.
View this post on Instagram
ವಿಭಜನೆಯಾಗಿ ಒಂದು ವರ್ಷದ ನಂತರ ಇವರಿಬ್ಬರು ವಿವಾಹವಾದರು. ಈ ದಾಂಪತ್ಯದಲ್ಲಿ ಎಂಟು ಮಕ್ಕಳಾದವು. ವರುಷಗಳು ಕಳೆದಂತೆ ಅವರ ನಡುವಿನ ಪ್ರೀತಿ ಮತ್ತಷ್ಟು ಗಟ್ಟಿಯಾಗಿತ್ತು. ನಾವಿಬ್ಬರೂ ಆಗಾಗ್ಗೆ ಚಲನಚಿತ್ರಗಳನ್ನು ನೋಡಲು ಹೋಗುತ್ತಿದ್ದೆವು. ಜತೆಯಾಗಿ ಕಾಲ ಕಳೆಯುತ್ತಿದ್ದೆವು. ನನ್ನ ಪತಿ 30 ವರ್ಷಗಳ ಹಿಂದೆ ತೀರಿಕೊಂಡಿದ್ದರೂ, ಆತನ ಮೇಲಿನ ಪ್ರೀತಿ ಜೀವಂತವಾಗಿದೆ. “ನಾನು ಇನ್ನೂ ಆ ನಷ್ಟದಿಂದ ಚೇತರಿಸಿಕೊಳ್ಳುತ್ತಿದ್ದೇನೆ” ಎಂದು ಆ ಮಹಿಳೆ ಹೇಳಿದ್ದಾರೆ.
ಪ್ರತಿ ವರ್ಷ ಇಡೀ ಕುಟುಂಬವು ಆತನ ಜನ್ಮದಿನದಂದು ನನ್ನ ಜತೆಯಾಗುತ್ತದೆ. ನನ್ನನ್ನು ಆತ ಕಂಡುಕೊಂಡಿದ್ದಕ್ಕೆ ಅಭಾರಿ. ನಾವು ಒಟ್ಟಾಗಿ ಸುಂದರ ಜೀವನವನ್ನು ಕಟ್ಟಿದ್ದೇವೆ ಎಂದು ಮಹಿಳೆ ಹೇಳುತ್ತಾರೆ.
ಇದು ನಿಜವಾದ ಪ್ರೀತಿ ಎಂದು ನೆಟ್ಟಿಗರು ಈ ಪ್ರೇಮಕತೆಯನ್ನು ಹೊಗಳಿದ್ದಾರೆ. “ಒಂದೇ ಸಮಯದಲ್ಲಿ ನಿಮ್ಮನ್ನು ಅಳವಂತೆ ಮತ್ತು ನಗುವಂತೆ ಮಾಡುವ ಕಥೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇದು made in heaven ಲವ್ ಸ್ಟೋರಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದೇಶ ವಿಭಜನೆ ವೇಳೆ ಪಾಕ್ ಪಾಲಾದ ಕುಟುಂಬದ ಮೂಲ ಅರಸಿ ಹೋದ ಭಾರತೀಯ; ಕಪ್ಪು ನವಿಲಿನ ಜಾಡು ಹಿಡಿದು ಹೊರಟ ರೋಚಕ ಕತೆ
(On Independence Day Woman recounts her story of true love which battled hardships and separation caused by Partition)