
ಉತ್ತರಾಖಂಡ, ಜುಲೈ 15: ಫ್ರೀಯಾಗಿ ಏನಾದ್ರೂ ಸಿಗುತ್ತೆ ಅಂದ್ರೆ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬೇಕಾದ್ರೂ ಓಡಿ ಬರುತ್ತಾರೆ. ಹೀಗೆ ರಸ್ತೆಯಲ್ಲಿ ಹಣ್ಣು, ತರಕಾರಿ ತುಂಬಿದ ವಾಹನ ಪಲ್ಟಿಯಾದಾಗ (overturned truck) ಚಾಲಕನ ಸಹಾಯಕ್ಕೂ ಬಾರದೆ ಜನ ಹಣ್ಣು ತರಕಾರಿಗಳನ್ನು ದೋಚಿ ಓಡಿ ಹೋದಂತಹ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿಯೂ ಇಂತಹದ್ದೇ ಘಟನೆ ನಡೆದಿದ್ದು, ಪಲ್ಟಿಯಾದ ಟ್ರಕ್‌ನಿಂದ ಬಿದ್ದ ಮಾವಿನ ಹಣ್ಣನ್ನು ಹೆಕ್ಕಲು (Locals looting mangos) ಜನ ಮುಗಿ ಬಿದ್ದಿದ್ದಾರೆ. ಹೌದು ಚಾಲಕ ಸಹಾಯಕ್ಕೂ ಹೋಗದೆ ಜನ ಕೇವಲ ಹಣ್ಣು ಹೆಕ್ಕಲು ಮಾತ್ರ ಬಂದಿದ್ದು, ಈ ದೃಶ್ಯವನ್ನು ಕಂಡು ಇಂತಹ ಜನರಿದ್ರೆ ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಈ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದ್ದು, ಫ್ರೀಯಾಗಿ ಸಿಕ್ಕ ಮಾವಿನ ಹಣ್ಣನ್ನು ಲೂಟಿ ಮಾಡಲು ಜನ ಮುಗಿಬಿದ್ದಿದ್ದಾರೆ. ಡೆಹ್ರಾಡೂನ್‌ನ ರಿಸ್ಪಾನಾ ಸೇತುವೆ ಮೇಲೆ ಮಾವಿನ ಹಣ್ಣುಗಳನ್ನು ಸಾಗಿಸುತ್ತಿದ್ದ ಬೃಹತ್ ಟ್ರಕ್ ಪಲ್ಟಿಯಾಗಿದ್ದು, ಪರಿಣಾಮ ವಾಹನದಲ್ಲಿದ್ದ ಹಣ್ಣುಗಳೆಲ್ಲಾ ರಸ್ತೆಗೆ ಬಿದ್ದಿದೆ. ಹಣ್ಣುಗಳು ಬಿದ್ದಿದ್ದೆ ತಡ, ಅಲ್ಲಿದ್ದ ಜನರೆಲ್ಲರೂ ಓಡೋಡಿ ಬಂದು ಚೀಲ, ಬುಟ್ಟಿಗಳಲ್ಲಿ ತುಂಬಿಸಿ ಹಣ್ಣುಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ವಿಪರ್ಯಾಸ ಏನೆಂದ್ರೆ ಚಾಲಕನ ಸ್ಥಿತಿಯ ಬಗ್ಗೆ ಯಾರು ತಲೆಕೆಡಿಸಲೇ ಇಲ್ಲ.
ಇಂಡಿಯಾ ಟುಡೇ ವರದಿಯ ಪ್ರಕಾರ, ಈ ಘಟನೆಯಲ್ಲಿ ಯಾವುದೇ ಗಂಭೀರ ಗಾಯಗಳಾಗಿಲ್ಲ. ವಾಹನ ಉರುಳಿ ಬಿದ್ದ ಕಾರಣ ಸಂಚಾರ ಅಸ್ತವ್ಯಸ್ಥವಾಗಿದ್ದು, ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
देहरादून के रिस्पना पुल पर एक आम से लदा ट्रक पलट गया। हादसे में किसी को चोट नहीं आई, मगर सड़क पर बिखरे रसीले आमों ने कुछ लोगों की आँखें चमका दीं। आपदा को अवसर बनाते हुए, कई लोग टोकरी-थैले लेकर आम लूटने में जुट गए, मानो मुफ्त का मेला लग गया हो! pic.twitter.com/NTqz8n4DpR
— bhUpi Panwar (@askbhupi) July 16, 2025
ಈ ಕುರಿತ ವಿಡಿಯೋವನ್ನು bhUpi Panwar ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ರಸ್ತೆಯಲ್ಲಿ ಹೋಗಿ ಬರುವವರೆಲ್ಲರೂ ರಸ್ತೆಯಲ್ಲಿ ಬಿದ್ದ ಮಾವಿನ ಹಣ್ಣುಗಳನ್ನು ಹೆಕ್ಕುವಲ್ಲಿ ನಿರತರಾಗಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ರಸ್ತೆಬದಿಯಲ್ಲಿ ಗುಲಾಬಿ ಮಾರುತ್ತಿದ್ದ ಪುಟ್ಟ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆಟೋ ಚಾಲಕ
ಜುಲೈ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 35 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಜನರಿದ್ದರೆ ಭಾರತ ಎಂದಿಗೂ ಅಭಿವೃದ್ಧಿ ಹೊಂದಿದ ದೇಶವಾಗಲು ಸಾಧ್ಯವಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼರಸ್ತೆಯಲ್ಲಿ ಬಿದ್ದ ಹಣ್ಣುಗಳನ್ನು ಹೆಕ್ಕುವುದರಲ್ಲಿ ತಪ್ಪೇನು ಕಾಣುವುದಿಲ್ಲʼ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಮಾನವೀಯತೆಯ ಅದ್ಭುತ ಪ್ರದರ್ಶನʼ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ