Viral Video : ಈ ಹಿಂದೆ ಬೆಂಗಳೂರಿನ ಗಲ್ಲಿ ಕ್ರಿಕೆಟ್ ಕಾಮೆಂಟರಿಯನ್ನು ಸಂಸ್ಕೃತದಲ್ಲಿ ಮಾಡಿದ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದೀರಿ. ಇದೀಗ ದೆಹಲಿಯ ಕ್ಯಾಬ್ ಡ್ರೈವರ್ ಪ್ರಯಾಣಿಕರೊಂದಿಗೆ ಸಂಸ್ಕೃತದಲ್ಲಿ ಮಾತನಾಡುವ ವಿಡಿಯೋ ಇದೀಗ ವೈರಲ್ ಆಗಿದೆ. ಕ್ಯಾಬನ್ನು ಏರಿದ ಪ್ರಯಾಣಿಕರು ಈತನ ವಿವರವನ್ನು ಸಂಸ್ಕೃತದಲ್ಲಿಯೇ ಕೇಳುತ್ತ ಹೋಗುತ್ತಾರೆ. ಆತ ಸಂಸ್ಕೃತದಲ್ಲಿಯೇ ಉತ್ತರಿಸುತ್ತ ಹೋಗುತ್ತಾನೆ. ನವೆಂಬರ್ 10ರಂದು ಈ ವಿಡಿಯೋ ಟ್ವೀಟ್ ಮಾಡಲಾಗಿದೆ. 2.6 ಲಕ್ಷಕ್ಕಿಂತಲೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. 11,000ಕ್ಕಿಂತಲೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ.
Amazing !!
This car driver in Delhi speaks Sanskrit with me this morning!! pic.twitter.com/z6XU8B9glk ಇದನ್ನೂ ಓದಿ— LAKSHMI NARAYANA B.S (BHUVANAKOTE) (@chidsamskritam) November 10, 2022
ದೆಹಲಿಯ ಇಂಡಿಯಾ ಗೇಟ್ ಬಳಿ ಹೋಗುತ್ತಿರುವಾಗ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಉತ್ತರ ಪ್ರದೇಶದ ಮೂಲದ ಅಶೋಕ ತನ್ನ ಕುಟುಂಬದ ಸದಸ್ಯರ ಬಗ್ಗೆ ಪ್ರಯಾಣಿಕನಿಗೆ ತಿಳಿಸುತ್ತಾನೆ. ಈ ವಿಡಿಯೋ ನೋಡಿದ ಅನೇಕರಿಗೆ ಸಂಸ್ಕೃತ ಕಲಿಯುವ ಉಮೇದು ಬಂದಿದೆ.
ನಾನಿನ್ನೂ ಸಂಸ್ಕೃತ ಕಲಿಯದಿರುವುದು ನನ್ನ ಬಗ್ಗೆ ನನಗೆ ಅವಮಾನ ಎನ್ನಿಸುತ್ತಿದೆ. ಸದ್ಯದಲ್ಲೇ ನಾನು ಕಲಿಯಲು ಆರಂಭಿಸುತ್ತೇನೆ ಎಂದಿದ್ದಾರೆ ಒಬ್ಬರು. ಬಹಳ ಸುಂದರವಾದ ಸಂಭಾಷಣೆ ಎಂದಿದ್ದಾರೆ ಇನ್ನೊಬ್ಬರು. ಈ ಸಾಮಾನ್ಯವಾದ ಸಂಭಾಷಣೆಯೂ ಒಂದು ಪೂಜಾ ಸಂದರ್ಭದಂತೆ ಅನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು. ಇದು ಕಿವಿಗೆ ತಂಪನ್ನೀಯುತ್ತಿದೆ ಎಂದಿದ್ದಾರೆ ಇನ್ನೊಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ