Video: ದೆಹಲಿ ಮೆಟ್ರೋದಲ್ಲಿ ಪುಟಾಣಿಗಳ ಭರ್ಜರಿ ಡ್ಯಾನ್ಸ್‌, ಪ್ರಯಾಣಿಕರು ಫುಲ್‌ ಫಿದಾ

ಪುಟಾಣಿಗಳು ಮುದ್ದು ಮುದ್ದಾಗಿ ಡ್ಯಾನ್ಸ್ ಮಾಡುವುದಿದ್ದರೆ ನೋಡಲು ಕಣ್ಣು ಸಾಲದು. ಕಣ್ಣು ಮಿಟುಕಿಸದೇ ಮಕ್ಕಳ ಡ್ಯಾನ್ಸ್ ಪರ್ಫಾರ್ಮೆನ್ಸ್ ನೋಡ್ತೇವೆ. ಆದರೆ ಇದೀಗ ದೆಹಲಿ ಮೆಟ್ರೋದಲ್ಲಿ ಮೂವರು ಪುಟ್ಟ ಮಕ್ಕಳು ಪೆಹ್ಲಾ ಪೆಹ್ಲಾ ಪ್ಯಾರ್ ಹಿಂದಿ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಪುಟಾಣಿಗಳ ಡ್ಯಾನ್ಸ್ ಮೆಟ್ರೋ ಪ್ರಯಾಣಿಕರನ್ನು ರಿಲ್ಯಾಕ್ಸ್ ಆಗಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದೆಹಲಿ ಮೆಟ್ರೋದಲ್ಲಿ ಪುಟಾಣಿಗಳ ಭರ್ಜರಿ ಡ್ಯಾನ್ಸ್‌, ಪ್ರಯಾಣಿಕರು ಫುಲ್‌ ಫಿದಾ
ದೆಹಲಿ ಮೆಟ್ರೋದಲ್ಲಿ ಪುಟಾಣಿಗಳ ಭರ್ಜರಿ ಡ್ಯಾನ್ಸ್
Image Credit source: Instagram

Updated on: Oct 21, 2025 | 1:05 PM

ದೆಹಲಿ, ಅಕ್ಟೋಬರ್ 21: ದೆಹಲಿ ಮೆಟ್ರೋ ಸೀಟಿನ ವಿಚಾರವಾಗಿ ಪ್ರಯಾಣಿಕರ ನಡುವೆ ನಡೆಯುವ ಜಗಳಗಳು, ಪ್ರಯಾಣಿಕರು ಮಾಡುವಂತಹ ಕಿತಾಪತಿಗಳು ಹೀಗೆ ನಾನಾ ಕಾರಣಗಳಿಂದ ಸುದ್ದಿಯಲ್ಲಿರುತ್ತದೆ. ಆದರೆ ಇದೀಗ ಸುದ್ದಿಯಲ್ಲಿರುವುದು ಪುಟಾಣಿಗಳ (little girls) ಮುದ್ದಾದ ಡ್ಯಾನ್ಸ್ ಪರ್ಫಾರ್ಮೆನ್ಸ್ ನಿಂದ ಅಂದ್ರೆ ನೀವು ನಂಬಲೇಬೇಕು. ಹೌದು ದೆಹಲಿ ಮೆಟ್ರೋದಲ್ಲಿ (Delhi metro) ಮೂವರು ಪುಟಾಣಿಗಳು ಬಾಲಿವುಡ್‌ನ ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ಅದ್ಭುತ ಡ್ಯಾನ್ಸ್ ಪರ್ಫಾರ್ಮೆನ್ಸ್ ಕಂಡು ಮೆಟ್ರೋ ಪ್ರಯಾಣಿಕರು ಕಳೆದೇ ಹೋಗಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದೆಹಲಿ ಮೆಟ್ರೋದಲ್ಲಿ ಪುಟಾಣಿಗಳ ಭರ್ಜರಿ ಡ್ಯಾನ್ಸ್

ಜ್ಯೋತಿ ಜಿಎಸ್‌ಕೆ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ದೆಹಲಿ ಮೆಟ್ರೋದಲ್ಲಿ ಅದ್ಭುತವಾಗಿ ಸ್ಟೆಪ್ ಹಾಕಿದ ಪುಟಾಣಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್ ಕ್ಲಿಪಿಂಗ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪುಟಾಣಿಗಳು ಹರ್ಯಾನ್ವಿ ರಾಜಾಸ್ತಾನಿ ಮಿಶ್ರಿತ ಉಡುಗೆ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಮಕ್ಕಳು ಹಮ್ ಆಪ್ಕೆ ಹೈ ಕೌನ್’ ಹಿಂದಿ ಸಿನಿಮಾದ ಪೆಹ್ಲಾ ಪೆಹ್ಲಾ ಪ್ಯಾರ್ ಹಾಡಿಗೆ  ಮುದ್ದಾಗಿ ಎಕ್ಸ್‌ಪ್ರೆ಼ನ್‌ ಕೊಟ್ಟು ನೃತ್ಯ ಮಾಡುವುದನ್ನು ನೀವು ನೋಡಬಹುದು. ಪ್ರಯಾಣಿಕರು ಈ ಪುಟಾಣಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್‌ನ್ನು ಸಖತ್ ಎಂಜಾಯ್ ಮಾಡುತ್ತಿರುವುದನ್ನು ನೀವಿಲ್ಲಿ ಕಾಣಬಹುದು.

ಇದನ್ನೂ ಓದಿ
ನಾಸಾ ಪ್ರವಾಸಕ್ಕೆ ಆಯ್ಕೆಯಾದ ಹನ್ನೆರಡರ ಪೋರಿ
ಕನ್ನಡಾಕ್ಷರವನ್ನು ಜೋಡಿಸಿ ಪಟಪಟನೇ ಓದುತ್ತಿರುವ ಪುಟಾಣಿ
ಪುಟ್ಟ ಹುಡುಗಿಯ ಹೃದಯ ಸ್ಪರ್ಶಿ ಉಡುಗೊರೆ ನೋಡಿ ಖುಷಿಪಟ್ಟ ಶಿಕ್ಷಕಿ
ಪುಟ್ಟ ಹುಡುಗಿಯ ಬೇಡಿಕೆಗೆ ಸ್ಪಂದಿಸಿದ ಯುವಕ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ರೈಲು ಹತ್ತದ ಹುಡುಗಿ ವಿಮಾನ ಹತ್ತಲು ಸಜ್ಜು; ನಾಸಾ ಪ್ರವಾಸಕ್ಕೆ ಆಯ್ಕೆಯಾದ ಹನ್ನೆರಡರ ಪೋರಿ

ಈ ವಿಡಿಯೋ 5.9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರಿಂದ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿವೆ. ಒಬ್ಬ ಬಳಕೆದಾರ ಪುಟಾಣಿಗಳು ಮುದ್ದಾಗಿ ಕಾಣುತ್ತಿದ್ದು, ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆ ಎಂದಿದ್ದಾರೆ. ಮತ್ತೊಬ್ಬರು ಮೆಟ್ರೋದ ಬೆಸ್ಟ್ ವಿಡಿಯೋ ಇದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಎಷ್ಟು ಮುದ್ದಾಗಿದೆ ಈ ವಿಡಿಯೋ ಎಂದು ಹೇಳಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಪುಟಾಣಿಗಳ ಡ್ಯಾನ್ಸ್‌ನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ