Viral: ನಿಮಗೆ ಬಾಯ್​ಫ್ರೆಂಡ್​ ಇದ್ದಾರಾ? ಡೆಲಿವರಿ ಏಜೆಂಟ್ ಗ್ರಾಹಕಿಯನ್ನು ಕೇಳಿದಾಗ…

|

Updated on: Jul 26, 2023 | 5:15 PM

Unprofessional : ನಾನಿರುವ ಸ್ಥಳ ಅವನಿಗೆ ಗೊತ್ತಾದಾಗ ಮತ್ತು ಅವನು ಹೀಗೆ ಮೆಸೇಜ್ ಮಾಡಿದಾಗ ನಾನು ಸುಮ್ಮನಿರುವುದು ಸರಿ ಅಲ್ಲ ಅಲ್ಲವೆ? ಎಂದು ಆಕೆ ಕಳವಳದಿಂದ ಈ ವಿಷಯವನ್ನು ಜಾಲತಾಣಿಗರ ಮುಂದೆ ಪ್ರಸ್ತಾಪಿಸಿದ್ದಾರೆ.

Viral: ನಿಮಗೆ ಬಾಯ್​ಫ್ರೆಂಡ್​ ಇದ್ದಾರಾ? ಡೆಲಿವರಿ ಏಜೆಂಟ್ ಗ್ರಾಹಕಿಯನ್ನು ಕೇಳಿದಾಗ...
ಡೆಲಿವರಿ ಏಜೆಂಟ್​ ಮಾಡಿದ ಮೆಸೇಜ್​ನ ಸ್ಕ್ರೀನ್ ಶಾಟ್​
Follow us on

Delivery Agent : ಡೆಲಿವರಿ ಏಜೆಂಟ್​ರೊಂದಿಗೆ ನಡೆದ ಸಂಭಾಷಣೆ, ಚಾಟ್​, ಘಟನೆಗಳ ಕುರಿತು ಈಗಾಗಲೇ ಸಾಕಷ್ಟು ಸುದ್ದಿಯನ್ನು ಓದಿದ್ದೀರಿ. ಕೆಲವು ವಿನೋದಮಯವೂ, ಇನ್ನೂ ಕೆಲವರು ಹೃದಯಸ್ಪರ್ಶಿಯೂ ಮತ್ತೂ ಕೆಲವು ಸಂಗತಿಗಳು ಆತಂಕಕ್ಕೆ ಈಡುಮಾಡುವಂಥವೂ ಆಗಿರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ಚಾಟ್​ನ ಸ್ಕ್ರೀನ್​ ಶಾಟ್ (Screen Shot) ನೋಡಿ, ಡೆಲಿವರಿ ಏಜೆಂಟ್​ನೊಬ್ಬ ತನ್ನ ಗ್ರಾಹಕರಿಗೆ ಈ ಕೆಳಗಿನಂತೆ ಚಾಟ್ ಮಾಡಿ ಆತಂಕಕ್ಕೆ ತಳ್ಳಿದ್ದಾನೆ. ಗ್ರಾಹಕರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಆತನ ಬಗ್ಗೆ ಕಿಡಿಕಾರಿದ್ಧಾರೆ.

Am I wrong to be irked?
by u/One-Boysenberry6412 in doordash

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನಿಮಗೆ ನಾನೊಂದು ಪ್ರಶ್ನೆ ಕೇಳುವುದಿದೆ, ನಿಮಗೆ ಬಾಯ್​ಫ್ರೆಂಡ್​ (Boyfriend) ಇದ್ಧಾರೆಯೇ? ಹೀಗೆ ಮೆಸೇಜ್ ಮಾಡಿದ ಡೆಲಿವರಿ ಏಜೆಂಟ್ ಬಗ್ಗೆ ನಾನು ಕೋಪಗೊಳ್ಳುವುದು ತಪ್ಪೇ? ನನ್ನ ಆರ್ಡರ್ ನನಗೆ ತಲುಪಿದ ಮೇಲೆ ಈ ವ್ಯಕ್ತಿ ಹೀಗೆ ಮೆಸೇಜ್ ಮಾಡಿದ್ದಾನೆ. ಇದನ್ನು ನಾನು ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡೆ. ವಿಷಯ ಏನೇ ಇರಲಿ, ಆದರೆ ಇದರಿಂದ ನನಗೆ ಖಂಡಿತ ಇರಿಸುಮುರುಸು ಉಂಟಾಗಿದೆ. ಇಂಥ ಸಂದರ್ಭದಲ್ಲಿ ನಾನು ವಾಸವಾಗಿರುವ ಸ್ಥಳದ ಬಗ್ಗೆ ಆತನಿಗೆ ಮಾಹಿತಿ ಇದೆ ಎಂದಾಗ ಹೇಗನ್ನಿಸಬೇಡ? ಸುಮ್ಮನಿರುವುದರಲ್ಲಿ ಅರ್ಥವಿಲ್ಲವೆಂದುಕೊಂಡು DoorDash ಕಂಪೆನಿಗೆ ಈತನ ವೃತ್ತಿಪರರಹಿತ ನಡೆಯ ಬಗ್ಗೆ ದೂರು ಕೊಟ್ಟಿದ್ದೇನೆ’ ಎಂದಿದ್ದಾರೆ ಗ್ರಾಹಕಿ.

ಇದನ್ನೂ ಓದಿ : Viral Video: ಮಗ ಪತ್ರಕರ್ತನಾದ! ಟಿವಿ ನೋಡಿ ಸಂಭ್ರಮಿಸುತ್ತಿರುವ ತಾಯಿ

ಎರಡು ದಿನಗಳ ಹಿಂದೆ ಹಂಚಿಕೊಂಡ ಈ ಪೋಸ್ಟ್​ ಅನ್ನು ಈತನಕ ಸುಮಾರು 12,000 ಜನರು ಲೈಕ್ ಮಾಡಿದ್ದಾರೆ. 2,000ಕ್ಕೂ ಹೆಚ್ಚು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ನಾನೊಬ್ಬ ಮಹಿಳೆಯಾಗಿ ಈ ಕಾರಣಕ್ಕಾಗಿಯೇ ನಾನು ಆನ್​ಲೈನ್ ಆರ್ಡರ್​ನಿಂದ ದೂರ ಎಂದಿದ್ದಾರೆ ಒಬ್ಬರು. ನಿಮ್ಮ ವಾಸಸ್ಥಳದ ಬಗ್ಗೆ ಅವನಿಗೆ ಗೊತ್ತಿರುವುದು ನಿಮಗೆ ಆತಂಕ ತರುವ ವಿಷಯವೇ, ನೀವು ಈ ಕುರಿತು ಆತನ ಕಂಪೆನಿಯವರಿಗೆ ತಿಳಿಸಿದ್ದು ಒಳ್ಳೆಯದಾಯಿತು ಎಂದಿದ್ದಾರೆ ಇನ್ನೊಬ್ಬರು. ಅದಕ್ಕೇ ನಾನು DoorDrop ಕಂಪೆನಿಯ ಸೇವೆಯನ್ನು ಇಷ್ಟಪಡುತ್ತೇನೆ. ಅದು ವೃತ್ತಿಪರತೆಯಿಂದ ಕೂಡಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 5:08 pm, Wed, 26 July 23