
ಡೆಲಿವರಿ ಬಾಯ್ ಒಬ್ಬರು ಭಾರವಾದ ಪಾರ್ಸೆಲ್ ಹೊತ್ತು 6ನೇ ಮಹಡಿಯವರೆಗೆ ಮೆಟ್ಟಿಲುಗಳನ್ನು ಹತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದೀಗ ಈ ವಿಡಿಯೋ ನೋಡಿ ನೆಟ್ಟಿಗರು ಅಕ್ರೋಶ ವ್ಯಕ್ತಪಡಿದ್ದಾರೆ. ನಗರವೊಂದರ ವಸತಿ ಸಂಕೀರ್ಣವೊಂದರಲ್ಲಿ (Housing Society), ಡೆಲಿವರಿ ಬಾಯ್ ಒಬ್ಬರಿಗೆ ಲಿಫ್ಟ್ ಬಳಸಲು ಅಲ್ಲಿನ ಭದ್ರತಾ ಸಿಬ್ಬಂದಿ ಅನುಮತಿ ನೀಡಲಿಲ್ಲ. ಈ ಕಾರಣಕ್ಕೆ ಈ ಡೆಲಿವರಿ ಬಾಯ್ ಮೆಟ್ಟಿಲಿನಲ್ಲಿ ಹತ್ತಿಕೊಂಡೆ ಬಂದಿದ್ದಾರೆ. ಪಾರ್ಸೆಲ್ ತಲುಪಿಸುವ ಅನಿವಾರ್ಯವಾಗಿ ಅತ್ಯಂತ ಭಾರವಾದ ಪಾರ್ಸೆಲ್ ಅನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು 6ನೇ ಮಹಡಿಯವರೆಗೆ ಮೆಟ್ಟಿಲುಗಳ ಮೂಲಕ ಹೋಗಿದ್ದಾರೆ.
ಈ ವಿಡಿಯೋವನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಭಾರವಾದ ಪರ್ಸೆಲ್ಗಳನ್ನು ಬೆನ್ನು ಮೇಲೆ ಏರಿಸಿಕೊಂಡು ಮೆಟ್ಟಿಲಿನಲ್ಲಿ ಬ್ಯಾಲೇನ್ಸ್ ಮಾಡಿಕೊಂಡು ಹೋಗಿದ್ದಾರೆ. ಅವರು 6ನೇ ಮಹಡಿಯ ಫ್ಲಾಟ್‌ಗೆ ತಲುಪಿದಾಗ, ಅವರ ಸ್ಥಿತಿ ಅತ್ಯಂತ ಕೆಟ್ಟಾಗಿತ್ತು ಎಂದು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಮನೆಯ ಒಳಗಿನ ವ್ಯಕ್ತಿಯೊಬ್ಬರು “ಆರಾಮ್ ಸೇ” (ನಿಧಾನವಾಗಿ) ಎಂದು ಹೇಳುವುದು ವಿಡಿಯೋದಲ್ಲಿದೆ ನೋಡಬಹುದು. ಈ ವಿಡಿಯೋವನ್ನು ಹಂಚಿಕೊಂಡವರು ಇದನ್ನು “ಅಮಾನವೀಯ ವರ್ತನೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಅಬ್ಬಾ ! ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷ ರೂ ಗಳಿಸಬಹುದಂತೆ; ಹೇಗೆ? ಇಲ್ಲಿದೆ ವಿಡಿಯೋ
ಎಕ್ಸ್ ವಿಡಿಯೋ ಇಲ್ಲಿದೆ ನೋಡಿ:
Packers and movers not allowed to use lift by society members, ad delivery guy had to use stairs to bring heavy stuff to 6th floor. pic.twitter.com/ILAOaGNS6Q
— AbhishekkkK (@Abhishekkkk10) January 30, 2026
ಈ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, “ಡೆಲಿವರಿ ಮಾಡುವವರಿಗೆ ಲಿಫ್ಟ್ ಬಳಸಲು ಬಿಡದ ಇಂತಹ ಸೊಸೈಟಿ ನಿಯಮಗಳು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಕೆಲಸಗಾರರನ್ನು ಗೌರವದಿಂದ ಕಾಣದ ವಸತಿ ಸಂಕೀರ್ಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ. ಭಾರತದಲ್ಲಿ ಶ್ರಮ ಅಗ್ಗವಾಗಿ, ಆದರೆ ವಸ್ತುಗಳು ಅಗ್ಗವಾಗಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇಂತಹ ಕೃತ್ಯಗಳಿಗೆ ಕೆಲಸದ ಸ್ಥಳದಲ್ಲಿ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಬೆನ್ನಿನ ಮೇಲೆ ಹೊರೆ ಹೊತ್ತ ವ್ಯಕ್ತಿಯನ್ನು ಆರು ಮಹಡಿಗಳಿಗೆ ಮೆಟ್ಟಿಲುಗಳನ್ನು ಬಳಸಲು ಹೇಳಿದವರ ಯಾರೇ ಆಗಿರಲಿ, ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Mon, 2 February 26