ಕೆಲವರಿಗೆ ಚೌಕಾಸಿ ಮಾಡುವುದೆಂದರೆ ಇನ್ನೂ ಕೆಲವೊಬ್ಬರು ತಾವು ಏನೇ ವಸ್ತುಗಳನ್ನು ಖರೀದಿ ಮಾಡಿದರೂ ಅದರಲ್ಲಿ ಚೌಕಾಸಿ ಮಾಡೋದು ಅಭ್ಯಾಸವಾಗಿಬಿಟ್ಟಿರುತ್ತದೆ. ಅದರಲ್ಲೂ ಹಣ್ಣು, ತರಕಾರಿ ಕೊಳ್ಳುವಾಗ ಸಿಕ್ಕಾಪಟ್ಟೆ ಚೌಕಾಸಿ ಮಾಡ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ ಪಾರ್ಸೆಲ್ ಕೊಡಲು ಬಂದ ಡೆಲಿವರಿ ಬಾಯ್ ಜೊತೆಗೆಯೇ ಚೌಕಾಸಿ ಮಾಡಿದ್ದಾಳೆ. ಹೌದು ತನ್ನ ಪಾರ್ಸೆಲ್‌ಗೆ 102 ರೂ. ಬಿಲ್ ಆಗಿದ್ರೂ ಕೂಡಾ ಆಕೆ ಪೂರ್ತಿ ಹಣವನ್ನು ಕೊಡದೆ ಕೇವಲ 100 ರೂ. ಕೊಟ್ಟು ಡೆಲಿವರಿ ಹುಡುಗನನ್ನು ಸತಾಯಿಸಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಮಹಿಳೆಯ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪಾರ್ಸೆಲ್ ಕೊಡಲು ಬಂದ ಡೆಲಿವಲಿ ಬಾಯ್ ಜೊತೆಗೆಯೇ ಮಹಿಳೆಯೊಬ್ಬಳು ಚೌಕಾಸಿ ಮಾಡಿದ್ದು, ಆತನಿಗೆ ಕೊಡಬೇಕಾದ ಸಂಪೂರ್ಣ ಹಣವನ್ನು ಕೊಡದೆ ಸತಾಯಿಸಿದ್ದಾಳೆ. ಈ ದೃಶ್ಯ ಡೆಲಿವರಿ ಹುಡುಗನ ಹೆಲ್ಮೆಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Kalesh b/w a Delivery Guy and Aunty over 2 Rupees
pic.twitter.com/rfQhjkx9w7— Ghar Ke Kalesh (@gharkekalesh) October 3, 2024
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಡೆಲಿವರಿ ಬಾಯ್ ಅಂಗಡಿಯೊಂದರಲ್ಲಿ ಕುಳಿತಿದ್ದ ಮಹಿಳೆಗೆ ಪಾರ್ಸೆಲ್ ಕೊಡುವ ದೃಶ್ಯವನ್ನು ಕಾಣಬಹುದು. ಪಾರ್ಸೆಲ್ ಕೊಟ್ಟು ನಿಮ್ಮ ಬಿಲ್ 102 ರೂ. ಆಯಿತು ಎಂದು ಆತ ಹೇಳಿದಾಗ, ಆ ಮಹಿಳೆ ಕೇವಲ 100 ರೂ. ಕೊಟ್ಟು ನನ್ನ ಬಳಿ ಚಿಲ್ಲರೆ ಹಣ ಇಲ್ಲ ಎಂದು ʼಉಳಿದ 2 ರೂಪಾಯಿಯನ್ನು ಕೊಡದೆ ಸತಾಯಿಸಿದ್ದಾಳೆ. ಆನ್‌ಲೈನ್ ಪೇಮೆಂಟ್ ಮಾಡಿ ಎಂದು ಹೇಳಿದರೂ, ಎಷ್ಟೇ ಕೇಳಿದರೂ ಆಕೆ ಕೊಡಬೇಕಾಗಿದ್ದ ಚಿಲ್ಲರೆ ಹಣವನ್ನು ಕೊಡದೇ ಇದ್ದಾಗ ಕೊನೆಗೆ ಆ ಡೆಲಿವರಿ ಬಾಯ್ ಅಲ್ಲಿಂದ ಹೋಗಿದ್ದಾನೆ.
ಅಕ್ಟೋಬರ್ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಮಹಿಳೆಯ ವರ್ತನೆ ನಿಜಕ್ಕೂ ಅಸಹ್ಯಕರವಾಗಿದೆ, ಆದ್ರೂ ಆ ಡೆಲಿವರಿ ಬಾಯ್ ಎಷ್ಟು ಶಾಂತ ರೀತಿಯಲ್ಲಿ ಮಾತನಾಡಿದ್ದಾನೆ ನೋಡಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಮಹಿಳೆ ನಡೆದುಕೊಂಡ ರೀತಿ ಚೂರಾ ಸರಿಯಿಲ್ಲʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ