ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ Moschino ಇತ್ತೀಚೆಗೆ ತನ್ನ ಹೊಸ ವಿನ್ಯಾಸದ ಬ್ಯಾಗ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸಾಮಾನ್ಯವಾಗಿ ಈ ಬ್ಯಾಗ್ ನೋಡಿದಾಗ ಕೊತ್ತಂಬರಿ ಸೊಪ್ಪಿನ ರೀತಿಯಲ್ಲಿ ಕಾಣಿಸಬಹುದು. ಆದರೆ ಇದರ ಬೆಲೆ ಕೇಳಿದರೆ ನೀವು ಒಂದು ಕ್ಷಣ ದಂಗಾಗುವುದಂತೂ ಖಂಡಿತಾ. ಸದ್ಯ Moschino ಬ್ರ್ಯಾಂಡ್ ಇತ್ತೀಚಿನ ದಿನಗಳಲ್ಲಿ ತನ್ನ ಚಿತ್ರ ವಿಚಿತ್ರ ವಿನ್ಯಾಸದ ವಸ್ತುಗಳಿಂದಲೇ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
luxuriousbymm ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಹೊಸ ವಿನ್ಯಾಸದ ಬ್ಯಾಗ್ನ ಪೋಸ್ಟ್ ಹಂಚಿಕೊಳ್ಳಲಾಗಿದ್ದು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಈ Moschino ನ ಅಧಿಕೃತ ವೆಬ್ಸೈಟ್ ಪ್ರಕಾರ ಈ ಬ್ಯಾಗಿನ ಬೆಲೆ $4,470 ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸರಿಸುಮಾರು 4 ಲಕ್ಷ ರೂಪಾಯಿ.
ಇದನ್ನೂ ಓದಿ: ಹಳೆ ಕಾರನ್ನು ಗುಜರಿಗೆ ಹಾಕುವ ಬದಲು ಅದ್ಧೂರಿಯಾಗಿ ಅಂತ್ಯಸಂಸ್ಕಾರ ಮಾಡಿದ ವ್ಯಕ್ತಿ
ಕೊತ್ತಂಬರಿ ಸೊಪ್ಪು ತರ ಕಾಣುವ ಈ ಬ್ಯಾಗಿನ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. “ಈ ಬ್ಯಾಗನ್ನು ನಾನು ಕೇವಲ 10 ರೂ. ತಯಾರಿಸಬಲ್ಲೇ” ಎಂದು ಒಬ್ಬರು ಬರೆದರೆ, ಮತ್ತೊಬ್ಬರು “ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಿಚಿತ್ರ ವಿನ್ಯಾಸ ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Sun, 10 November 24