Dhanashree Verma: ಸಖತ್​ ಹಾಟ್​ ಆಗಿ ಡ್ಯಾನ್ಸ್​​ ಮಾಡಿರುವ ವಿಡಿಯೊವನ್ನು ಮತ್ತೊಮ್ಮೆ ಹಂಚಿಕೊಂಡ ಚಹಾಲ್ ಪತ್ನಿ ಧನಶ್ರೀ ವರ್ಮಾ

ಧನಶ್ರೀ ಅವರು ತಮ್ಮ ಹಳೆಯ ವಿಡಿಯೋವನ್ನು ಮತ್ತೆ ಇನ್ಸ್ಟಾಗ್ರಾಮ್​​ನಲ್ಲಿ ಪಿನ್​​ ಮಾಡಿಕೊಂಡಿದ್ದಾರೆ. ಪತಿ ಯುಜ್ವೇಂದ್ರ ಚಹಾಲ್ ಜತೆಗೆ ಡಾನ್ಸ್​​ ಮಾಡಿರುವ ಮೂರು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದು, ಅವರ ಸಖತ್​ ಹಾಟ್​​ ಡ್ಯಾನ್ಸ್​​ ವಿಡಿಯೋ ಇಲ್ಲಿದೆ.

Dhanashree Verma: ಸಖತ್​ ಹಾಟ್​ ಆಗಿ ಡ್ಯಾನ್ಸ್​​ ಮಾಡಿರುವ ವಿಡಿಯೊವನ್ನು ಮತ್ತೊಮ್ಮೆ ಹಂಚಿಕೊಂಡ ಚಹಾಲ್ ಪತ್ನಿ ಧನಶ್ರೀ ವರ್ಮಾ
ಧನಶ್ರೀ ವರ್ಮಾ
Updated By: Digi Tech Desk

Updated on: Jul 24, 2023 | 4:47 PM

ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ (Yuzvendra Chahal) ಅವರು ಪತ್ನಿ ಧನಶ್ರೀ ವರ್ಮಾ (dhanashree verma) ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು. ಅನೇಕ ಫೋಟೋ ವಿಡಿಯೋಗಳನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈ ಹಿಂದೆ ಹಾಲಿವುಡ್ ಚಿತ್ರದ ‘ಬಾರ್ಬಿ’ ಸ್ಟೈಲಿನ ಸುಂದರವಾದ ಉಡುಪನ್ನು ಧರಿಸುವ ಮೂಲಕ ಭಾರೀ ವೈರಲ್​​ ಆಗಿದ್ದರು. ಇದರ ಜತೆಗೆ ಧನಶ್ರೀ ಅವರು ಹಾಟ್​​​ ಡ್ರೆಸ್​​​ ಸೇನ್ಸ್​​ ಕೂಡ ಹೊಂದಿದ್ದಾರೆ. ಯಾಕೆಂದರೆ ಅವರು ಮಾಡೆಲ್ ಕೂಡ ಹೌದು. ಇನ್ನೂ ಧನಶ್ರೀ ಅವರು ತಮ್ಮ ಹಳೆಯ ವಿಡಿಯೋವನ್ನು ಮತ್ತೆ ಇನ್ಸ್ಟಾಗ್ರಾಮ್​​ನಲ್ಲಿ ಪಿನ್​​ ಮಾಡಿಕೊಂಡಿದ್ದಾರೆ. ಪತಿ ಯುಜ್ವೇಂದ್ರ ಚಹಾಲ್ ಜತೆಗೆ ಡಾನ್ಸ್​​ ಮಾಡಿರುವ ಮೂರು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದು, ಆ ವಿಡಿಯೋಗಳು ಇಲ್ಲಿದೆ ನೋಡಿ.

ಒಂದು ವಿಡಿಯೋದಲ್ಲಿ ಧನಶ್ರೀ ಅವರು ಪತಿ ಚಹಾಲ್ ಮತ್ತು ಕ್ರಿಕೆಟಿಗ ಜಾಸ್ ಬಟ್ಲರ್ ಜತೆಗೆ ಡ್ಯಾನ್ಸ್​​ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಧನಶ್ರೀ ಸಖತ್​​ ಆಗಿ ಸ್ಟೆಪ್ ಹಾಕಿದ್ದಾರೆ, ಇದರಲ್ಲಿ ಧನಶ್ರೀ ಮತ್ತು ಜಾಸ್ ಬಟ್ಲರ್ ಸೂಪರ್​ ಆಗಿ ಡ್ಯಾನ್ಸ್​ ಮಾಡುತ್ತಿದ್ದರೆ, ಚಹಾಲ್ ಒಂದು ಕಡೆ ನಿಂತುಕೊಂಡು ಪತ್ನಿಯ ಡ್ಯಾನ್ಸ್​​ ನೋಡುತ್ತಿರುವುದನ್ನು ಇದರಲ್ಲಿ ಕಾಣಬುಹುದು. ಈ ಪೋಸ್ಟ್​​ಗೆ ದಿ ಪಿಂಕ್​​ ಬಿಟ್ವೀನ್ ದ ಆರೆಂಜ್​ ಅಂಡ್​​ ಪ್ರಫೋಲ್ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಈ ವಿಡಿಯೋ 1.6 ಲಕ್ಷ ಲೈಕ್​​ ಮತ್ತು 4, 699 ಮಂದಿ ಕಮೆಂಟ್​ ಮಾಡಿದ್ದಾರೆ. ಈ ವಿಡಿಯೋವನ್ನು ಮೇ 30 2022ಕ್ಕೆ ಹಂಚಿಕೊಂಡಿದ್ದಾರೆ, ಇದೀಗ ಇದನ್ನು ಮತ್ತೆ ಪಿನ್​​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಡ್ಯಾನ್ಸ್​​ ಮಾಡಲು ಹುಡುಗಿಯನ್ನು ಎತ್ತಲು ಹೋಗಿ ಆಯತಪ್ಪಿ ಬಿದ್ದ ವರ; ವಿಡಿಯೋ ವೈರಲ್​​

ಇನ್ನೂ ವಿಡಿಯೋದಲ್ಲಿ ಧನಶ್ರೀ ಅವರು ಡ್ಯಾನ್ಸ್​​​ ರೂಮ್​​ನಲ್ಲಿ ಡ್ಯಾನ್ಸ್​​ ಮಾಸ್ಟರ್ ರವಿಸೋನಿ​​ ಜೊತೆಗೆ ಸಖತ್​ ಆಗಿ ಡ್ಯಾನ್ಸ್​​ ಮಾಡಿದ್ದಾರೆ. ಮಾಚರ್ಲ ನಿಯೋಜಕವರ್ಗಮ್ ಎಂಬ ತೆಲುಗು ಸಿನಿಮಾದ ರಾನು ರಾನು ಅಂತೂನೆ ಚಿನ್ನದೋ ಹಾಡಿಗೆ ಹಾಟ್​​ ಹಾಟ್​ ಆಗಿ ಡ್ಯಾನ್ಸ್​​ ಮಾಡಿದ್ದಾರೆ. ಈ ವಿಡಿಯೋವನ್ನು ಕೂಡ ಮತ್ತೆ ಇನ್ಸ್ಟಾಗ್ರಾಮ್​​ನಲ್ಲಿ ಪಿನ್​​ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಆಗಸ್ಟ್​​ 7 2022ರಂದು ಹಂಚಿಕೊಂಡಿದ್ದಾರೆ.

ಇನ್ನೂ 2021, ಡಿಸೆಂಬರ್​​ 31ರಂದು ಹಂಚಿಕೊಂಡಿರುವ ಇನ್ನೊಂದು ವಿಡಿಯೋವನ್ನು ಇನ್ಸ್ಟಾಗ್ರಾಮ್ ಮತ್ತೆ ಸದ್ದು ಮಾಡಿದೆ. ಇಲ್ಲಿಯು ಕೂಡ ಧನಶ್ರೀ ಅವರು ಹಾಟ್​ ಆಗಿ ಡ್ಯಾನ್ಸ್​​ ಮಾಡಿದ್ದಾರೆ. ನಾಚ್ ನಾಚ್​​ ಮೇರಿ ರಾಣಿ ಮೇ ಎಂಬ ಹಾಡಿಗೆ ಸಖತ್​ ಡ್ಯಾನ್ಸ್​​ ಮಾಡಿದ್ದಾರೆ. ಈ ವಿಡಿಯೋ ಕೂಡ 1.3 ಲಕ್ಷ ಲೈಕ್​​ ಪಡೆದುಕೊಂಡಿದೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:24 pm, Mon, 24 July 23