ಸಾಮಾನ್ಯವಾಗಿ ಧರಿಸುವ ಪ್ಯಾಂಟ್ ಬೆಲ್ಟ್ನ ಬೆಲೆ 200 ರಿಂದ 300ರೂಪಾಯಿ. ಹೆಚ್ಚೆಂದರೆ ಒಂದು ಸಾವಿರ ರೂಪಾಯಿ ಕೊಟ್ಟು ಬ್ರ್ಯಾಂಡೆಡ್ ಬೆಲ್ಟ್ ಖರೀದಿಸುವವರೂ ಇದ್ದಾರೆ. ಆದರೆ ಇಲ್ಲೊಂದು ಬೆಲ್ಟ್ ನೋಡಲು ತುಕ್ಕು ಹಿಡಿದಂತಿದ್ದರೂ, ಅದರ ಬೆಲೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ. ಈ ಬೆಲ್ಟ್ ನೋಡಿದಾಕ್ಷಣ ಇದ್ಯಾವುದಪ್ಪಾ ಮನೆಯ ಮೂಲೆಯಲ್ಲಿ ಎಲ್ಲೋ ಬಿದ್ದಿರುವ ಬೆಲ್ಟ್ ಅಂತ ಅನಿಸುವುದು ಸಹಜ. ಆದರೆ ಈ ಬೆಲ್ಟ್ ಸೆಲೆಬ್ರೆಟಿಸ್ಗಳಿಗೆ ಸಖತ್ ಫೇವರೇಟ್. ಯಾಕೆಂದರೆ ಇದು ಪ್ರತಿಷ್ಠಿತ ಬ್ರ್ಯಾಂಡ್ ಒಂದು ತಯಾರಿಸಿದ ಬೆಲ್ಟ್. ಏನಿದರ ವಿಶೇಷತೆ? ಇದರ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ.
ಈ ಬೆಲ್ಟ್ನ ಹೆಸರು DIESEL B-1DR-POD Belt. ಈ ಬೆಲ್ಟ್ ಅನ್ನು ಇಟಲಿಯ ಪ್ರತಿಷ್ಠಿತ ‘DIESEL’ ಬ್ರ್ಯಾಂಡ್ ತಯಾರಿಸಿದೆ. ಇದರ ನಿಖರವಾದ ಬೆಲೆ 17,999 ರೂಪಾಯಿ. ಈ ಬೆಲ್ಟ್ ಅನ್ನು ನೀವು ಖರೀದಿಸಲು ಬಯಸಿದರೆ ಆನ್ಲೈನ್ನಲ್ಲಿ ಖರೀದಿಸಬಹುದು.
ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ
ಸದ್ಯ ಈ ಬೆಲ್ಟ್ನ ಬೆಲೆ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ‘ಈ ಬೆಲ್ಟ್ಗಿಂತ ನಾನು 100 ರೂಪಾಯಿಗೆ ಖರೀದಿಸಿದ ಬೆಲ್ಟ್ ಸುಂದವಾಗಿದೆ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಸಾಕಷ್ಟು ನೆಟ್ಟಿಗರು ಹಾಸ್ಯಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ