ಪ್ರತಿಷ್ಠಿತ ಬ್ರ್ಯಾಂಡ್‌ಗಳ ಹೆಸರಲ್ಲಿ ಬ್ಯಾಗ್ ತಯಾರಿಸಿ ಮಾರಾಟ; ನಕಲಿ ಬ್ಯಾಗ್ ಕಂಪನಿಗಳ ಮೇಲೆ ಪೊಲೀಸ್ ದಾಳಿ
ಅಂಗಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ತಯಾರಾದ ಫೇಕ್ ಪ್ರಿಂಟ್ನ 70ಕ್ಕೂ ಅಧಿಕ ಬ್ಯಾಗ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಪ್ರತಿಷ್ಠಿತ ಬ್ರ್ಯಾಂಡ್‌ಗಳ ಹೆಸರಲ್ಲಿ ನಕಲಿ ಬ್ಯಾಗ್ ತಯಾರಿಸಿ ಮಾರಾಟ ಮಾಡುತ್ತಿದ್ದ ಕಂಪನಿಗಳ ಮೇಲೆ ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಕಾಪಿರೈಟ್ ಕಾಯ್ದೆ ಉಲ್ಲಂಘಿಸಿದ್ದು, ಇದರಿಂದ ಕಂಪನಿಗೆ ನಷ್ಟವಾಗಿದೆ ಎಂಬ ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು ಸದ್ಯ ಅಂಗಡಿಗಳ ಪರಿಶೀಲನೆ ಮಾಡಿದ್ದಾರೆ.
ಟ್ರೇಡರ್ಸ್ ಅಂಗಡಿಯಲ್ಲಿ ಪೂಮಾ (Puma) ಕಂಪನಿ ಬ್ಯಾಗ್ ತಯಾರಿಸಿದ್ದು, ಅಕ್ರಮವಾಗಿ ಅಂಗಡಿ ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಆ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಮಾಡುವ ಯೋಜನೆ ಇಟ್ಟುಕೊಂಡಿದ್ದರು. ಸದ್ಯ ಅಂಗಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ತಯಾರಾದ ಫೇಕ್ ಪ್ರಿಂಟ್ನ 70ಕ್ಕೂ ಅಧಿಕ ಬ್ಯಾಗ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೃಹತ್ ಜಾಲಕ್ಕೆ ಸಹಕರಿಸ್ತಿದ್ದ ಗ್ಯಾಂಗ್ ಬಂಧಿಸಿದ ಸಿಐಡಿ ಸುಂದರ ಯುವತಿ ಸೋಗಿನಲ್ಲಿ ಪುರುಷರಿಗೆ ವಂಚನೆ ಮಾಡುತ್ತಿದ್ದ ಗುಂಪಿಗೆ ಸಹಕರಿಸುತ್ತಿದ್ದವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಂಚನೆ ಮಾಡುತ್ತಿದ್ದವರಿಗೆ ಸಿಮ್ ಪೂರೈಸುತ್ತಿದ್ದ ಹರಿಯಾಣ ಮೂಲದ ಮೊಹಮ್ಮದ್ ಮುಜಾಹಿದ್, ಆಸೀಫ್ ಮೊಹಮ್ಮದ್, ಇಕ್ಬಾಲ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 22ರಂದು ವಂಚನೆ ಸಂಬಂಧ ದೂರು ದಾಖಲಾಗಿತ್ತು. ಸಿಐಡಿ ಅಧಿಕಾರಿಗಳು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಬಳಿಕ ಹರಿಯಾಣದ ವಿವಿಧ ಕಡೆ ಹುಡುಕಾಟ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಭಾರತದಾದ್ಯಂತ 3,951 ಪ್ರಕರಣಗಳಲ್ಲಿ ಆರೋಪಿಗಳು ಭಾಗಿರುವುದು ಪತ್ತೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಈ ತಂಡ, ನಕಲಿ ಆಧಾರ್ ಕಾರ್ಡ್ ತಯಾರಿ, ಬೇರೆಯವರ ಪ್ಯಾನ್ ಕಾರ್ಡ್ಗಳ ದುರ್ಬಳಕೆ ಮಾಡುತಿದ್ದರು. ಅಕ್ರಮವಾಗಿ ಸಿಮ್ ಕಾರ್ಡ್, ಇ-ವ್ಯಾಲೆಟ್ ಆ್ಯಕ್ಟೀವ್ ಮಾಡುತಿದ್ದ ಆರೋಪಿಗಳು, ಹಣಕ್ಕಾಗಿ ವಂಚಕರಿಗೆ ಮಾರಾಟ ಮಾಡುತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಪ್ಯಾನ್ ಕಾರ್ಡ್ ಮಾಹಿತಿ ಆಧರಿಸಿ ನಕಲಿ ದಾಖಲೆ ಸೃಷ್ಟಿ ಮಾಡುತ್ತಿದ್ದ ಆರೋಪಿಗಳು, ಕೃತ್ಯದಲ್ಲಿ ತಮ್ಮದೇ ಆದ ಪಾತ್ರಗಳನ್ನು ಹೊಂದಿದ್ದಾರೆ. ಸದ್ಯ ಬಂಧಿಸಲ್ಪಟ್ಟ ಆರೋಪಿಗಳಲ್ಲಿ ಪ್ರಮುಖನಾದ ಮುಜಾಹಿದ್, ಬರೊಬ್ಬರಿ 5 ಸಾವಿರ ಸಿಮ್ಗಳ ಇ-ವ್ಯಾಲೆಟ್ ಆ್ಯಕ್ಟೀವ್ ಮಾಡಿದ್ದಾನೆ.
ಇದನ್ನೂ ಓದಿ: Cyber Crime: ಸಹಾಯ ಕೇಳಿ ರಾಜ್ಯಪಾಲರ ಹೆಸರಿನಲ್ಲಿ KSOU ಕುಲಪತಿಗೆ ನಕಲಿ ಇ-ಮೇಲ್ ರವಾನೆ
(Manufacture and sell bags in the name of reputable brands Police raid fake brand bag shops in bengaluru)
Published On - 1:02 pm, Sat, 18 September 21