Cyber Crime: ಸಹಾಯ ಕೇಳಿ ರಾಜ್ಯಪಾಲರ ಹೆಸರಿನಲ್ಲಿ KSOU ಕುಲಪತಿಗೆ ನಕಲಿ ಇ-ಮೇಲ್ ರವಾನೆ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೆಸರಿನಲ್ಲಿ KSOU ಕುಲಪತಿಗೆ ನಕಲಿ ಇ-ಮೇಲ್ ರವಾನಿಸಿ ಸಹಾಯ ಕೇಳಿದ ಘಟನೆ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೆಸರನ್ನು ಬಳಸಿಕೊಂಡು ದುಷ್ಕರ್ಮಿಗಳು KSOU ಕುಲಪತಿ, ಶೆಲ್ವ ಪಿಳ್ಳೆ ಅಯ್ಯಂಗಾರ್ ಸೇರಿದಂತೆ ಸಹಾಯ ಕೇಳಿ ಅನೇಕರಿಗೆ ಇ-ಮೇಲ್ ಕಳಿಸಿದ್ದಾರೆ.
ಬೆಂಗಳೂರು: ಯಾವುದಾದರೂ ಇ-ಮೇಲ್ವೊಂದನ್ನು ನಿಮಗೆ ಗೊತ್ತಿರುವ ವ್ಯಕ್ತಿಯಿಂದ ಬಂದಿದ್ದು ಅದರಲ್ಲಿ ಸ್ವಲ್ಪವಾದರೂ ಗೊಂದಲ, ಅನುಮಾನ ಕಂಡುಬಂದರೆ ಅದನ್ನು ಆದಷ್ಟು ಬೇಗ ಪರಿಶೀಲಿಸಿ ಏಕೆಂದರೆ ಇ-ಮೇಲ್ ಮೂಲಕ ಮೆಸೇಜ್ ಕಳಿಸಿ ಮೋಸ ಮಾಡುವ ಮಂದಿ ಹೆಚ್ಚಾಗುತ್ತಿದ್ದಾರೆ. ಹಣದ ಸಹಾಯಕ್ಕಾಗಿ ಇಂತಹ ಅಚಾತುರ್ಯಕ್ಕೆ ಇಳಿದು ಮೋಸ ಮಾಡುತ್ತಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೆಸರಿನಲ್ಲಿ KSOU ಕುಲಪತಿಗೆ ನಕಲಿ ಇ-ಮೇಲ್ ರವಾನಿಸಿ ಸಹಾಯ ಕೇಳಿದ ಘಟನೆ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೆಸರನ್ನು ಬಳಸಿಕೊಂಡು ದುಷ್ಕರ್ಮಿಗಳು KSOU ಕುಲಪತಿ, ಶೆಲ್ವ ಪಿಳ್ಳೆ ಅಯ್ಯಂಗಾರ್ ಸೇರಿದಂತೆ ಸಹಾಯ ಕೇಳಿ ಅನೇಕರಿಗೆ ಇ-ಮೇಲ್ ಕಳಿಸಿದ್ದಾರೆ. ದುಷ್ಕರ್ಮಿಗಳ ಇ-ಮೇಲ್ಗೆ ಪ್ರತಿಕ್ರಿಯಿಸಿದ್ದರೆ. ದುಷ್ಕರ್ಮಿಗಳು ಮತ್ತೆನ್ನನ್ನಾದರೂ ಬೇಡಿಗೆ ಇಡುವ ಸಾಧ್ಯತೆ ಹೆಚ್ಚಿದ್ದು ಇದರಿಂದ ಎಚ್ಚೆತ್ತ ಅಧಿಕಾರಿಗಳು ಈ ಮೇಲ್ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಇನ್ನು ಅಧಿಕಾರಿಗಳಿಗೆ ರವಾನಿಸಲಾಗಿರುವ ಇ-ಮೇಲ್ ನಕಲಿ ಎಂದು ರಾಜ್ಯಪಾಲರ ಕಚೇರಿಯಿಂದ ಸ್ಪಷ್ಟನೆ ಸಿಕ್ಕಿದೆ. ಇದು ನಕಲಿ ಇ-ಮೇಲ್ ಆಗಿದ್ದು ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಟಿವಿ9ಗೆ ರಾಜ್ಯಪಾಲರ ಕಚೇರಿಯಿಂದ ಸ್ಪಷ್ಟನೆ ಸಿಕ್ಕಿದೆ.
ಇದನ್ನೂ ಓದಿ: Fake App: ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇರಬಹುದು ಫೇಕ್ ಆ್ಯಪ್: ಹೇಗೆ ಕಂಡುಹಿಡಿಯುವುದು?
ಲಾಡ್ಜ್ನಲ್ಲಿ ಯುವತಿ ಜೊತೆಗಿದ್ದ ಉದ್ಯಮಿಗೆ ಬ್ಲಾಕ್ಮೇಲ್: ನಕಲಿ CCB ಇನ್ಸ್ಪೆಕ್ಟರ್ ಅರೆಸ್ಟ್