2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಠಾಣೆಯ ಇನ್ಸ್ಟ್​ಪೆಕ್ಟರ್​ ಎಸಿಬಿ ಬಲೆಗೆ!

ಎಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ರಾಘವೇಂದ್ರ ಹಾಗೂ ಮಧ್ಯವರ್ತಿ ರಾಘವೇಂದ್ರನನ್ನು ಟ್ರ್ಯಾಪ್ ಮಾಡಿ ರೆಡ್​​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಠಾಣೆಯ ಇನ್ಸ್ಟ್​ಪೆಕ್ಟರ್​ ಎಸಿಬಿ ಬಲೆಗೆ!
ಎಸಿಬಿ ಬಲೆಗೆ ಬಿದ್ದ ಇನ್ಸ್​ಪೆಕ್ಟರ್​ ರಾಘವೇಂದ್ರ
Follow us
TV9 Web
| Updated By: sandhya thejappa

Updated on:Sep 18, 2021 | 2:30 PM

ಬೆಂಗಳೂರು: 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಠಾಣೆಯ ಇನ್ಸ್ಪೆಕ್ಟರ್ (Inspector) ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಚಿಕ್ಕಜಾಲ ಠಾಣೆ ಇನ್ಸ್​ಪೆಕ್ಟರ್ ರಾಘವೇಂದ್ರ ಎಂಬುವವರು ಜಮೀನು ತಕರಾರು ಸಂಬಂಧ 10 ಲಕ್ಷ ರೂ. ಹಣ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಎರಡು ಬಾರಿ ತಲಾ ನಾಲ್ಕು ಲಕ್ಷ ಪಡೆದಿದ್ದರು. ಈಗಾಗಲೇ ಒಟ್ಟು 8 ಲಕ್ಷ ರೂ. ಲಂಚವನ್ನು ಇನ್ಸ್​ಪೆಕ್ಟರ್ ರಾಘವೇಂದ್ರ ಪಡೆದಿದ್ದಾರೆ. 3ನೇ ಬಾರಿ ಕೊನೆಯ ಕಂತಾಗಿ 2 ಲಕ್ಷ ರೂ. ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ರಾಘವೇಂದ್ರ ಹಾಗೂ ಮಧ್ಯವರ್ತಿ ರಾಘವೇಂದ್ರನನ್ನು ಟ್ರ್ಯಾಪ್ ಮಾಡಿ ರೆಡ್​​ ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಐದು ಎಕರೆ ಜಮೀನು ತಕರಾರು ಸಂಬಂಧ ಇನ್ಸ್​ಪೆಕ್ಟರ್ ರಾಘವೇಂದ್ರ ಸುಮಾರು 10 ಲಕ್ಷ ರೂ. ಹಣವನ್ನು ಬೇಡಿಕೆ ಇಟ್ಟಿದ್ದರು. ಶಿವಶಂಕರ್ ಎಂಬುವವರಿಗೆ ಸೇರಿದ್ದ ಲ್ಯಾಂಡ್​ಗೆ ಸಂಬಂಧಿಸಿದ ವಿಚಾರಕ್ಕೆ ಹಣ ಬೇಡುಡಿಕೆ ಇಟ್ಟಿದ್ದರು. ಬೇಡಿಕೆ ಇಟ್ಟಿದ್ದ 10 ಲಕ್ಷ ರೂ. ಹಣದಲ್ಲಿ 8 ಲಕ್ಷ ರೂ. ಪಡೆದಿದ್ದರು. ಇನ್ನು ಎರಡು ಲಕ್ಷ ಹಣ ಬಾಕಿಯಿತ್ತು. ಎರಡು ಲಕ್ಷ ರೂ.ಹಣವನ್ನು ಪಡೆಯುವ ಹೊತ್ತಿಗೆ ಎಸಿಬಿ ಅಧಿಕಾರಿಗಳು ಇನ್ಸ್ಪೆಕ್ಟರ್ ರಾಘವೇಂದ್ರನನ್ನು ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಸದ್ಯ ಎಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ರಾಘವೇಂದ್ರ ಹಾಗೂ ಮಧ್ಯವರ್ತಿ ರಾಘವೇಂದ್ರನನ್ನು ಬಂಧಿಸಿದ್ದು, ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

ಸರಗಳ್ಳರ ಬಂಧನ ಬಸವೇಶ್ವರನಗರ ಠಾಣಾ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಸರಗಳ್ಳರು ಅರೆಸ್ಟ್​ ಆಗಿದ್ದಾರೆ. ಕೋಲಾರದ ಮಂಜುನಾಥ(23), ಪ್ರಶಾಂತ(27) ಎಂಬುವವರು ಬಂಧನಕ್ಕೊಳಗಾದ ಸರಗಳ್ಳರು. ಆರೋಪಿಗಳು ಬೆಂಗಳೂರು ಹಾಗೂ ಕೋಲಾರದ ವಿವಿಧೆಡೆ ಸರ ಹಾಗೂ ಮನೆಗಳ್ಳತನ ಮಾಡಿದ್ದರು. ಆರೋಪಿಗಳ ಬಂಧನದಿಂದ 1 ಮನೆಗಳ್ಳತನ 4 ಸರಗಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಬಂಧಿತರಿಂದ 200 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ

ದೇವಸ್ಥಾನದಲ್ಲೂ ಡಿವೋರ್ಸ್​ ವಿಚಾರ; ಸಿಟ್ಟಾದ ಸಮಂತಾ ರಿಯಾಕ್ಷನ್​ ನೋಡಿ ಚಪ್ಪಾಳೆ ಹೊಡೆದ ಅಭಿಮಾನಿಗಳು

Sonu Sood: ನಟ ಸೋನು ಸೂದ್ ₹ 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ: ಆದಾಯ ತೆರಿಗೆ ಇಲಾಖೆ

(ACB officials detained a chikkajala police who was receiving Rs 2 lakh bribe in Bengaluru)

Published On - 2:23 pm, Sat, 18 September 21

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ