Yesvantpur Railway Station: ವಿಮಾನ ನಿಲ್ದಾಣದಂತೆ ಕಂಗೊಳಿಸುತ್ತಿದೆ ಯಶವಂತಪುರ ರೈಲ್ವೆ ನಿಲ್ದಾಣ; 12 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಕೆ

TV9 Digital Desk

| Edited By: Sushma Chakre

Updated on: Sep 18, 2021 | 1:08 PM

Bangalore Yeshwanthpur Railway Station | ಯಶವಂತಪುರ ರೈಲ್ವೆ ನಿಲ್ದಾಣದ ಮುಖ್ಯದ್ವಾರ ಸೇರಿದಂತೆ ಬಹುತೇಕ ಭಾಗವನ್ನು ಹೊಸದಾಗಿ ನಿರ್ಮಿಸಲಾಗಿದೆ. ವಿಮಾನ ನಿಲ್ದಾಣದ ಮಟ್ಟಕ್ಕೆ ರೈಲ್ವೆ ನಿಲ್ದಾಣವನ್ನು ಆಧುನೀಕರಣಗೊಳಿಸಲಾಗಿದೆ. ಈ ಕಾಮಗಾರಿಗಾಗಿ 12 ಕೋಟಿ ರೂ. ಖರ್ಚು ಮಾಡಲಾಗಿದೆ.

Yesvantpur Railway Station: ವಿಮಾನ ನಿಲ್ದಾಣದಂತೆ ಕಂಗೊಳಿಸುತ್ತಿದೆ ಯಶವಂತಪುರ ರೈಲ್ವೆ ನಿಲ್ದಾಣ; 12 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಕೆ
ಯಶವಂತಪುರ ರೈಲ್ವೆ ನಿಲ್ದಾಣ

ಬೆಂಗಳೂರು: ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ (Yeshwanthpur Railway Station) ಸ್ವರೂಪವೇ ಬದಲಾಗಿ ಹೋಗಿದೆ. ನೀವೇನಾದರೂ ಈಗ ಯಶವಂತಪುರ ರೈಲು ನಿಲ್ದಾಣಕ್ಕೆ ಹೋದರೆ ದಾರಿ ತಪ್ಪಿ ವಿಮಾನ ನಿಲ್ದಾಣಕ್ಕೇನಾದರೂ ಬಂದುಬಿಟ್ಟೆವಾ? ಎಂಬ ಅನುಮಾನ ಮೂಡುವುದು ಖಚಿತ. ಭಾರತೀಯ ರೈಲ್ವೆ ಇಲಾಖೆ (Indian Railways) ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ ನೀಡಿದ್ದು, 12 ಕೋಟಿ ರೂ. ವೆಚ್ಚದಲ್ಲಿ ಈ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿದೆ.

ಭಾರತೀಯ ರೈಲ್ವೆ ಇಲಾಖೆಯ ಸೌತ್ ವೆಸ್ಟರ್ನ್ ರೈಲ್ವೇಸ್ (SWR​) ವಲಯ ಯಶವಂತಪುರ ರೈಲ್ವೆ ಸ್ಟೇಷನ್​ ಅನ್ನು ಮೇಲ್ದರ್ಜೆಗೆ ಏರಿಸಿದೆ. ಯಶವಂತಪುರ ರೈಲ್ವೆ ನಿಲ್ದಾಣದ ಮುಖ್ಯದ್ವಾರ ಸೇರಿದಂತೆ ಬಹುತೇಕ ಭಾಗವನ್ನು ಹೊಸದಾಗಿ ನಿರ್ಮಿಸಲಾಗಿದೆ. ವಿಮಾನ ನಿಲ್ದಾಣದ ಮಟ್ಟಕ್ಕೆ ರೈಲ್ವೆ ನಿಲ್ದಾಣವನ್ನು ಆಧುನೀಕರಣಗೊಳಿಸಲಾಗಿದೆ. ಈ ಕಾಮಗಾರಿಗಾಗಿ 12 ಕೋಟಿ ರೂ. ಖರ್ಚು ಮಾಡಲಾಗಿದೆ.

ಆಧುನೀಕರಣಗೊಂಡಿರುವ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹೊಸ ಪ್ರವೇಶದ್ವಾರ ನಿರ್ಮಿಸಲಾಗಿದೆ. 1800 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ 13 ಮೀಟರ್ ಎತ್ತರದ ಮೇಲ್ಚಾವಣಿಯನ್ನು ನಿರ್ಮಿಸಲಾಗಿದೆ. ಇದಕ್ಕೆ 150 ವ್ಯಾಟ್​ನ ಲೈಟ್​ಗಳನ್ನು ಹಾಕಲಾಗಿದೆ. ಇದು ಇಡೀ ರೈಲ್ವೆ ನಿಲ್ದಾಣದ ಲುಕ್ ಅನ್ನೇ ಬದಲಾಯಿಸಿದೆ.

yeshwanthpur railway station 1

ಯಶವಂತಪುರ ರೈಲ್ವೆ ನಿಲ್ದಾಣ

ಇದರ ಜೊತೆಗೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹಳೆಯ ಮರದ ತುಂಡನ್ನು ವಿನ್ಯಾಸಗೊಳಿಸಲಾಗಿದೆ. ಮರುಬಳಕೆಯ ವಸ್ತುಗಳನ್ನು ಬಳಸಿ ರೈಲ್ವೆ ನಿಲ್ದಾಣವನ್ನು ಅಲಂಕಾರಗೊಳಿಸಲಾಗಿದೆ. ಈ ರೈಲ್ವೆ ನಿಲ್ದಾಣಕ್ಕೆ ಎಲ್ಇಡಿ ನಾಮಫಲಕಗಳನ್ನು ಹಾಕಲಾಗಿದೆ. ರೈಲ್ವೆ ನಿಲ್ದಾಣದ ಎದುರಿನ ಅಂಗಳವನ್ನು ಕೂಡ ಹೊಸದಾಗಿ ನಿರ್ಮಿಸಲಾಗಿದೆ. ಅಲ್ಲಿ ಮೆಟ್ರೋ ನಿಲ್ದಾಣದಿಂದ ಬರುವವರಿಗಾಗಿ ಹೊಸ ದಾರಿಯನ್ನು ನಿರ್ಮಿಸಲಾಗಿದೆ.

ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ರೈಲಿಗಾಗಿ ಕಾಯುತ್ತಾ ಕೂರುವ ಕುರ್ಚಿಗಳ ಪಕ್ಕದಲ್ಲೇ ಮೊಬೈಲ್ ಚಾರ್ಜಿಂಗ್ ಪಾಯಿಂಟ್​ಗಳು ಕೂಡ ಇವೆ. ಬಾತ್​ರೂಂಗಳಲ್ಲಿ ಗೀಸರ್, ಸಿಂಕ್ ಮುಂತಾದ ಆಧುನಿಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಂಪೂರ್ಣ ಆಧುನೀಕರಣಗೊಂಡಿರುವ ಯಶವಂತಪುರ ರೈಲ್ವೆ ನಿಲ್ದಾಣ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ: ಯಶವಂತಪುರ – ಶಿವಮೊಗ್ಗ ನಡುವೆ ಆಗಸ್ಟ್​ 10 ರಿಂದ ಹೊಸ ರೈಲು ಸಂಚಾರ; ವೇಳಾಪಟ್ಟಿ ಇಲ್ಲಿದೆ

ಬೆಂಗಳೂರಿನಲ್ಲಿ ಮನೆ ಕಟ್ಟಿಸುವವರು ಗಮನಿಸಿ: ಇನ್ಮುಂದೆ 30*40 ಸೈಟಿನಲ್ಲಿ ಮನೆ ಕಟ್ಟಲು ಮಳೆನೀರು ಕೊಯ್ಲು ಕಡ್ಡಾಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada