ಬೆಂಗಳೂರಿನಲ್ಲಿ ಮತ್ತೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಆರಂಭ; ಕುಡಿದು ವಾಹನ ಚಲಾಯಿಸುವವರಿಗೆ ಕಾದಿದೆ ಆಪತ್ತು
ನಿನ್ನೆ 46 ವಾಹನ ಚಾಲಕರು ಮದ್ಯಸೇವಿಸಿ ವಾಹನ ಚಾಲನೆ ನಡೆಸಿದ್ದು ಪತ್ತೆಯಾಗಿದೆ. ಚಾಲಕರ ಚಾಲನಾ ಪರವಾನಿಗೆಯನ್ನು ಅಮಾನತ್ತುಗೊಳಿಸಲು ಆರ್ಟಿಒಗೆ ಶಿಫಾರಸು ಮಾಡಲಾಗಿದೆ. ಜತೆಗೆ ಒಟ್ಟು 1,408 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ನಡೆದ ಸರಣಿ ರಸ್ತೆ ಅಪಘಾತದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಿನ್ನೆಯಿಂದ (ಸೆಪ್ಟೆಂಬರ್ 17) ಪೊಲೀಸರು ಮತ್ತೆ ನಗರದಲ್ಲಿ ರಾತ್ರಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಲು ಆರಂಭಿಸಿದ್ದಾರೆ. ಕೊರೊನಾ ಲಾಕ್ಡೌನ್ 1 ಮತ್ತು 2ರಲ್ಲಿ ಡ್ರಂಕ್ & ಡ್ರೈವ್ ತಪಾಸಣೆಯನ್ನು ಈಮುನ್ನ ಪೊಲೀಸರು ನಿಲ್ಲಿಸಿದ್ದರು. ಆದರೆ ಈ ತಪಾಸಣೆಯನ್ನು ಮತ್ತೊಮ್ಮೆ ಆರಂಭಿಸಿದ್ದು, ನಿನ್ನೆಯಿಂದ 44 ಸಂಚಾರಿ ಠಾಣೆಗಳಲ್ಲಿ ತಪಾಸಣೆ ಪ್ರಾರಂಭಿಸಲಾಗಿದೆ.
ನಿನ್ನೆ 46 ವಾಹನ ಚಾಲಕರು ಮದ್ಯಸೇವಿಸಿ ವಾಹನ ಚಾಲನೆ ನಡೆಸಿದ್ದು ಪತ್ತೆಯಾಗಿದೆ. ಚಾಲಕರ ಚಾಲನಾ ಪರವಾನಿಗೆಯನ್ನು ಅಮಾನತ್ತುಗೊಳಿಸಲು ಆರ್ಟಿಒಗೆ ಶಿಫಾರಸು ಮಾಡಲಾಗಿದೆ. ಜತೆಗೆ ಒಟ್ಟು 1,408 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
KCET 2021 result: ಸೆ. 20ಕ್ಕೆ ಕೆಸಿಇಟಿ ಫಲಿತಾಂಶ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ
ದೇಶದಲ್ಲಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಮೊದಲ ಎಲೆಕ್ಟ್ರಿಕ್ ಹೆದ್ದಾರಿ; ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
(Bengaluru Police Started drunk and drive test again after Covid Lockdown)
Published On - 7:00 pm, Sat, 18 September 21