Viral Post: ಅನ್ನ ನೀರಿಲ್ಲದೇ 8 ದಿನಗಳ ವರೆಗೆ ಶಿಪ್ಪಿಂಗ್ ಕಂಟೈನರ್ನಲ್ಲಿ ಸಿಲುಕಿದ್ದ ಶ್ವಾನ
ಟೆಕ್ಸಾಸ್ ಬಂದರಿನಲ್ಲಿ ದಿನನಿತ್ಯದ ತಪಾಸಣೆಯ ಸಮಯದಲ್ಲಿ, ಮೆರೈನ್ ಅಧಿಕಾರಿಗಳ ತಂಡವು ಒಂದು ವಾರದವರೆಗೆ ಕಂಟೇನರ್‌ನಲ್ಲಿ ಸಿಕ್ಕಿಬಿದ್ದ ನಾಯಿಯನ್ನು ರಕ್ಷಿಸಿದ್ದಾರೆ. ಕಂಟೈನರ್ ಒಳಗಡೆ ಶ್ವಾನ ಹೇಗೆ ಬಂತು ಎಂದು ಅಧಿಕಾರಿಗಳಿಗೆ ಖಚಿತವಾಗಿಲ್ಲ. ಸದ್ಯ ಶ್ವಾನವನ್ನು ರಕ್ಷಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶಿಪ್ಪಿಂಗ್ ಕಂಟೈನರ್ನಲ್ಲಿ ಉಗುರಿನಿಂದ ಪರಚುವಂತಹ ಶಬ್ದ ಬರುತ್ತಿದ್ದುದನ್ನು ಗಮನಿಸಿದ ನೌಕಾ ಸಿಬ್ಬಂದಿ ಕಂಟೈನರ್ನಲ್ಲಿ ತೆರೆದು ನೋಡಿದಾಗ ಶ್ವಾನ ಒಂದು ಪತ್ತೆಯಾಗಿದೆ. 8 ದಿನಗಳಿಂದ ಅನ್ನ ನೀರಿಲ್ಲದೇ ಬದುಕುಳಿದಿದ್ದ ಶ್ವಾನಕ್ಕೆ ತಕ್ಷಣ ಆಹಾರ ನೀಡಿ ಪಶು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಶಿಪ್ಪಿಂಗ್ ನೌಕರನ ನಿರ್ಲಕ್ಷ್ಯದಿಂದ ಈ ರೀತಿ ಆಗಿದ್ದು, ಕೊನೆಗೂ ನಾಯಿ ಬದುಕುಳಿದಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮೆರೈನ್ ಅಧಿಕಾರಿಗಳು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮೂಲಕ ಈ ಕುರಿತು ಬಹಿರಂಗಪಡಿಸಿದ್ದು, ಯುಎಸ್ ಕೋಸ್ಟ್ ಗಾರ್ಡ್ ಹಾರ್ಟ್‌ಲ್ಯಾಂಡ್ ಕೂಡ ಶ್ವಾನದ ಕೆಲವು ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಇಂದು ಮುಂಜಾನೆ, US ಕೋಸ್ಟ್ ಗಾರ್ಡ್ ಸೆಕ್ಟರ್ ಹೂಸ್ಟನ್-ಗ್ಯಾಲ್ವೆಸ್ಟನ್‌ನ ಸಮುದ್ರ ತನಿಖಾಧಿಕಾರಿಗಳ ತಂಡವು ನಾಯಿಯ ಜೀವವನ್ನು ಉಳಿಸಿದೆ ಎಂದು ಬರೆದಿದ್ದಾರೆ. ಶಬ್ದ ಕೇಳಿ ಶಿಪ್ಪಿಂಗ್ ಕಂಟೈನರ್‌ಗಳನ್ನು ಪರಿಶೀಲಿಸುತ್ತಿದ್ದಾಗ ನಾಯಿಯೊಂದು ಹೊರಬಂದಿತು. ಕೋಸ್ಟ್ ಗಾರ್ಡ್ ಸದಸ್ಯರ ಸಮಯ ಪ್ರಜ್ಞೆಯಿಂದ ಶ್ವಾನದ ಜೀವ ಉಳಿದಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ: ‘
ಇದನ್ನೂ ಓದಿ: ಗಂಡನ ಬೆವರಿನ ವಾಸನೆ ತಡೆಯಲಾರದೆ ವಿಚ್ಛೇದನ ನೀಡಿದ ಪತ್ನಿ
ಸದ್ಯ ಶ್ವಾನವನ್ನು ರಕ್ಷಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಫೋಟೋ ಒಂದರಲ್ಲಿ ಶ್ವಾನದ ರಕ್ಷಣೆಯ ನಂತರ ಕ್ಯಾಮೆರಾಗೆ ಪೋಸ್ ನೀಡಿರುವುದನ್ನು ಕಾಣಬಹುದು. ಫೆಬ್ರವರಿ 1 ರಂದು ಫೇಸ್‌ಬುಕ್ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಅಂದಿನಿಂದ ಅನೇಕ ಶ್ವಾನ ಪ್ರೇಮಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಈ ಬಗ್ಗೆ ಹಲವು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ