Trending : ನಮ್ಮ ಭಾರತ ಬಹುಮುಖಿ ಸಂಸ್ಕೃತಿಯನ್ನು ಹೊಂದಿರುವ ದೇಶ. ವಿವಿಧ ಭಾಷೆ, ಆಚರಣೆ, ಪ್ರತೀತಿಗಳಿಂದ ಕೂಡಿದ ವೈವಿಧ್ಯಮಯ ನೆಲ. ಒಂದೊಂದು ಕಡೆ ಒಂದೊಂದು ರೀತಿಯ ಆಚರಣೆ, ಸಂಭ್ರಮ. ಇನ್ನೇನು ದೀಪಾವಳಿ ಹತ್ತಿರದಲ್ಲಿಯೇ ಇದೆ. ಎಲ್ಲೆಡೆ ಈಗಾಗಲೇ ಜೋರು ತಯಾರಿ ಶುರುವಾಗಿದೆ. ಆದರೆ ಕೇರಳದಲ್ಲಿ ಮಾತ್ರ ದೀಪಾವಳಿಯನ್ನು ಅಷ್ಟೊಂದು ವಿಜೃಂಭಣೆಯಿಂದ ಆಚರಿಸುವ ಕ್ರಮ ಇಲ್ಲ. ಕೇರಳ ದಕ್ಷಿಣ ಭಾರತದ ಭಾಗವೇ ಆಗಿದ್ದರೂ ಕೂಡ ಅಕ್ಕಪಕ್ಕದ ರಾಜ್ಯಗಳು ಆಚರಿಸಿದಷ್ಟು ಜೋರಾದ ಸಂಭ್ರಮ ಅಲ್ಲಿರುವುದಿಲ್ಲ. ಇದಕ್ಕೆ ಇದರದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದೆ. ಕೇರಳ ದ್ರಾವಿಡ ಸಂಸ್ಕೃತಿಯನ್ನು ಹೊಂದಿರುವುದೇ ಇದಕ್ಕೆ ಕಾರಣ.
ದಕ್ಷಿಣ ಭಾರತವು ದ್ರಾವಿಡ ಸಂಸ್ಕೃತಿಯನ್ನು ಅನುಮೋದಿಸಿದರೆ, ಉತ್ತರ ಭಾರತವು ವೈದಿಕ ಸಂಸ್ಕೃತಿಯಿಂದ ಪೋಷಿತವಾಗಿದೆ. ಕೇರಳವನ್ನು ಅಸುರ ರಾಜನಾದ ಮಹಾಬಲಿಯು ಆಳಿದನೆಂಬ ಪ್ರತೀತಿ ಪುರಾಣಗಳಲ್ಲಿದೆ. ಹಾಗಾಗಿ ಮಹಾಬಲಿಯ ನೆನಪಿಗಾಗಿ ಕೇರಳದಲ್ಲಿ ಆಚರಿಸುವ ಸಂಭ್ರಮದ ಮತ್ತು ದೊಡ್ಡ ಹಬ್ಬ ಓಣಂ. ಇನ್ನು ಉತ್ತರಭಾರತದಲ್ಲಿ ದೀಪಾವಳಿಯು, ರಾಮನು ರಾವಣನ ವಿರುದ್ಧ ವಿಜಯ ಸಾಧಿಸಿದುದನ್ನು ಸಾಂಕೇತಿಸುತ್ತದೆ. ಆದ್ದರಿಂದ ರಾಕ್ಷಸನ ಹತ್ಯೆಯನ್ನು ಮಲಯಾಳಿಗಳು ಸಂಭ್ರಮಿಸಲಾರರು ಹಾಗೆಯೇ ರಾಮನ ಪುನರಾಗಮನವನ್ನೂ ಸ್ವಾಗತಿಸಲಾರರು. ಆದರೆ ಕೃಷ್ಣನ ಆರಾಧಕರಾದ ಮಲಯಾಳಿಗಳು ಕೃಷ್ಣನು ನರಕಾಸುರನನ್ನು ವಧೆ ಮಾಡಿದ ಎನ್ನುವುದನ್ನು ಮಾತ್ರ ಒಪ್ಪುತ್ತಾರೆ.
ಕೇರಳವು ಹಿಂದೂ, ಕ್ರಿಶ್ಚಿಯನ್, ಮುಸ್ಲಿಮ್ ಮತ್ತು ಇತರೇ ಸಮುದಾಯದವರಿಂದ ಮಿಳಿತಗೊಂಡು ಬಹುಮುಖಿ ಸಂಸ್ಕೃತಿಯಿಂದ ರೂಪುಗೊಂಡಿದೆ. ಆ ಕಾರಣದಿಂದಾಗಿ ಇಲ್ಲಿಯ ಆಚರಣೆಗಳಿಗೆ ಅದರದೇ ಆದ ಹಿನ್ನೆಲೆ, ಮಹತ್ವ ಮತ್ತು ವೈಶಿಷ್ಟ್ಯ ಇದೆ. ಆದ್ದರಿಂದಲೇ ಉತ್ತರ ಭಾರತದಲ್ಲಿ ಆಚರಿಸುವ ಹಬ್ಬಗಳೆಲ್ಲವನ್ನೂ ಇಲ್ಲಿ ಅಷ್ಟೇ ಸಂಭ್ರಮದಿಂದ ಆಚರಿಸುವ ಕ್ರಮ ಇಲ್ಲ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:55 pm, Thu, 20 October 22