
ಕೆಲಸ ಮಾಡುವ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು (Employees) ಬಾಸ್ ಏನ್ ಹೇಳಿದ್ರೂ ನೋ ಎನ್ನದೇ ಕೆಲಸ ಮಾಡ್ತಾರೆ. ಮುರೊತ್ತು ಕೆಲಸ ಎನ್ನುತ್ತಾ ಅದರಲ್ಲೇ ಮುಳುಗಿರುತ್ತಾರೆ. ಇಂತಹವರು ಫ್ರೆಂಡ್ ಪಾರ್ಟಿ, ಎಂಜಾಯ್‌ಮೆಂಟ್‌ಯಿಂದ ದೂರ ಇರುವುದೇ ಹೆಚ್ಚು. ಆಫೀಸಿನಲ್ಲಿ ದೀಪಾವಳಿ ಪಾರ್ಟಿಯನ್ನು (Deepavali Party) ಆಯೋಜಿಸಲಾಗಿದೆ. ಈ ವೇಳೆ ಉದ್ಯೋಗಿಯೊಬ್ಬ ಲ್ಯಾಪ್‌ಟಾಪ್ ಹಿಡಿದುಕೊಂಡು ನೃತ್ಯ ಮಾಡುತ್ತಿದ್ದು, ಎಲ್ಲರ ಗಮನ ಸೆಳೆದಿದ್ದಾನೆ.
ವೈಭವ್ ಛಾಬ್ರಾ (viabhav9497) ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಆಫೀಸ್‌ನಲ್ಲಿ ತುಂಬಾ ಕೆಲಸವಿತ್ತು, ಜೊತೆಗೆ ದೀಪಾವಳಿ ಪಾರ್ಟಿಯೂ ಇತ್ತು ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಇತರ ಉದ್ಯೋಗಿಗಳು ಆಫೀಸಿನಲ್ಲಿ ದೀಪಾವಳಿ ಸೆಲೆಬ್ರೇಶನ್ ಆನಂದಿಸುತ್ತಿರುವುದು ಕಂಡುಬರುತ್ತದೆ, ಆದರೆ ಒಬ್ಬ ಉದ್ಯೋಗಿ ತನ್ನ ಕೈಯಲ್ಲಿ ಲ್ಯಾಪ್‌ಟಾಪ್ ಹಿಡಿದುಕೊಂಡು ನೃತ್ಯ ಮಾಡುತ್ತಾ ತನ್ನ ಕೆಲಸದ ಮೇಲೆ ಕಣ್ಣಿಟ್ಟಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:Viral: ಟಾರ್ಗೆಟ್ ಮಾತ್ರ ಹೆಚ್ಚಾಗ್ತವೆ, ಸಂಬಳವಲ್ಲ; ರಿಸೈನ್ ಲೆಟರ್‌ನಲ್ಲಿ ಉದ್ಯೋಗಿ ಹೇಳಿದ್ದಿಷ್ಟೇ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರರೊಬ್ಬರು, ಕೆಲಸದ ಸ್ಥಳದಲ್ಲಿ ಇಂತಹ ಒಬ್ಬರಾದ್ರೂ ಉದ್ಯೋಗಿ ಇರಲೇಬೇಕು ಎಂದಿದ್ದಾರೆ. ಮತ್ತೊಬ್ಬರು, ನಿಷ್ಠಾವಂತ ಉದ್ಯೋಗಿ ಅಂದ್ರೆ ಇವನೇ ಇರ್ಬೇಕು ಎಂದು ಹೇಳಿದ್ದಾರೆ. ಕೆಲಸದ ಜೊತೆಗೆ ಎಲ್ಲವನ್ನು ಮ್ಯಾನೇಜ್ ಮಾಡೋದು ಗೊತ್ತಿರಬೇಕು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Sun, 19 October 25