ನಾಗಾಲ್ಯಾಂಡ್​ನಲ್ಲಿ ಸಸ್ಯಾಹಾರ ಲಭ್ಯವೆ? ಟ್ವಿಟರ್​ನಲ್ಲಿ ತರಕಾರಿಯನ್ನೆಲ್ಲ ತಂದುಸುರಿದ​ ಸಚಿವ

| Updated By: ಶ್ರೀದೇವಿ ಕಳಸದ

Updated on: Nov 14, 2022 | 6:15 PM

Veg Food in Nagaland : ನೋಡಿ ಇಲ್ಲಿ ಬೆಳೆದ ಸಾವಯವ ತರಕಾರಿ. ಆದರೂ ನಾವು ಫ್ರೆಂಚ್ ಫ್ರೈ ಹಿಂದೆ ಹೋಗುತ್ತೇವೆ ಎಂದಿದ್ದಾರೆ ನಾಗಾಲ್ಯಾಂಡ್​ ಸಚಿವರು. ಅಣ್ಣಾ, ಅಲ್ಲಿಯೇ ಕಾಯಂ ಆಗಿ ನೆಲೆಗೊಳ್ಳುವ ಮಾರ್ಗ ಯಾವುದೆಂದು ತಿಳಿಸಿ ಎಂದಿದ್ದಾರೆ ನೆಟ್ಟಿಗರು.

ನಾಗಾಲ್ಯಾಂಡ್​ನಲ್ಲಿ ಸಸ್ಯಾಹಾರ ಲಭ್ಯವೆ? ಟ್ವಿಟರ್​ನಲ್ಲಿ ತರಕಾರಿಯನ್ನೆಲ್ಲ ತಂದುಸುರಿದ​ ಸಚಿವ
Do you get veg food in Nagaland? Minister answers in new post on Twitter
Follow us on

Viral : ನಾಗಾಲ್ಯಾಂಡ್​ನ ಸಚಿವ ತೆಮ್ಜೆನ್​​ ಇಮ್ನಾ ಅಲಾಂಗ್​ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಸ್ಯಪ್ರವೃತ್ತಿಯಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ನಾಗಾಲ್ಯಾಂಡ್​ನಲ್ಲಿ ಸಸ್ಯಾಹಾರ ಲಭ್ಯವೇ ಎಂದು ಯಾರೋ ಕೇಳಿದ್ದಕ್ಕೆ ಅವರು ಕೊಟ್ಟ ತಾಜಾ ತಾಜಾ ಸಾಕ್ಷಿ ಹೇಗಿದೆ ನೋಡಿ! ಸೊಪ್ಪುಗಳು, ಸೋರೆಕಾಯಿ, ಅಣಬೆ, ಬದನೆಕಾಯಿ, ಎಳೆಬಿದಿರು, ಹಣ್ಣುಗಳು ಹೀಗೆ ಅಲ್ಲಿ ತರಕಾರಿ ಮಂಡಿಯನ್ನೇ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಇದನ್ನು ನೋಡಿ ಸುಸ್ತೋಸುಸ್ತು.

 

ತೆಮ್ಜೆನ್​ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಾಲೋವರ್​ಗಳನ್ನ ಹೇಗೆ ಕಾಯ್ದುಕೊಳ್ಳಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ. ನವೆಂಬರ್ 13ರಂದು ಇವರು ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ನಿಮ್ಮ ನಾಗಾಲ್ಯಾಂಡ್​ನಲ್ಲಿ ತರಕಾರಿ ಸಿಗುತ್ತದೆಯೆ ಎಂದು ಯಾರೋ ಕೇಳಿದ್ದಕ್ಕೆ ಅವರು ಹೀಗೆ ಟ್ವೀಟ್ ಮಾಡಿದ್ದಾರೆ, ‘ಇಷ್ಟೆಲ್ಲ ಸಾವಯವ ತರಕಾರಿ, ಹಣ್ಣು, ಸೊಪ್ಪುಗಳಿದ್ದಾಗಲೂ ನಾವು ಫ್ರೆಂಚ್ ಫ್ರೈಗೆ ಮಾರುಹೋಗುತ್ತೇವೆ. ನೋಡಿ ನಾಗಾಲ್ಯಾಂಡ್​ನ ತರಕಾರಿ’ ಎಂದಿದ್ದಾರೆ. ​

ಅಬ್ಬಾ ಎಷ್ಟು ತಾಜಾತನದಿಂದ ಇದೆಲ್ಲವೂ ಕೂಡಿದೆ. ಅಷ್ಟೊಂದು ಚೆನ್ನಾಗಿ ಬಾಳೆ ಎಲೆ ಮೇಲೆ ಹರಡಿಕೊಂಡು ಸುತ್ತಿಕೊಂಡು ಇರುವ ಈ ಎಲ್ಲವನ್ನ ನೋಡುವುದೇ ಆನಂದ ಎಂದಿದ್ದಾರೆ ಒಬ್ಬರು. ಆಸೆಯಾಗುತ್ತಿದೆ ಇದೆಲ್ಲವನ್ನು ನೋಡುತ್ತಿದ್ದರೆ ಎಂದಿದ್ದಾರೆ ಇನ್ನೊಬ್ಬರು.

ಹೌದು! ಈ ತರಕಾರಿಗಳು ರೈತರಿಂದ ನೇರ ಮಾರಾಟ ಸ್ಥಳಕ್ಕೆ ಬಂದಂಥವು ಎಂದಿದ್ದಾರೆ ಮಗದೊಬ್ಬರು. ಅಣ್ಣಾ, ದಯವಿಟ್ಟು ಝೊಮ್ಯಾಟೋ ಮೂಲಕ ಆನ್​ಲೈನ್​ ಡೆಲಿವರಿ ಮಾಡಿ. ಇಂದು ಬೆಳೆದಿದ್ದನ್ನು ನಾಳೆ ಸಿಗುವಂತೆ ಮಾಡಿ ಎನ್ನುತ್ತಿದ್ದಾರೆ ಇನ್ನೊಬ್ಬರು. ಸರ್​, ನಿಮ್ಮ ಊರಿಗೆ ಶಿಫ್ಟ್​ ಆಗಲು ಏನು ಪ್ರೊಸೀಜರ್ ಇದೆ ಎಂದು ಕೇಳಿದ್ದಾರೆ ಇನ್ನೊಬ್ಬರು. ನಿಮ್ಮನ್ನು ನಾಗಾಲ್ಯಾಂಡ್​ನಲ್ಲಿ ಎಲ್ಲಿ ಭೇಟಿ ಮಾಡಬೇಕು ಎಂದಿದ್ದಾರೆ ಯಾರೋ ಒಬ್ಬರು. ಇದೆಲ್ಲ ನೋಡಿ ಫ್ರೆಂಚ್​ ಫ್ರೈಸ್​ ಓಡಿ ಹೋಗುತ್ತದೆ ಎಂದಿದ್ದಾರೆ ಮಗದೊಬ್ಬರು.

ಏನೀಗ ನೀವು ನಾಗಾಲ್ಯಾಂಡ್​ಗೆ ಹೋಗಬೇಕು ಎಂದುಕೊಳ್ಳುತ್ತಿದ್ದೀರೋ ಹೇಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ