ಪಾನಿಪುರಿ, ಗೋಲ್ಗಪ್ಪ ಭಾರತದ ಅತ್ಯಂತ ಜನಪ್ರಿಯ ಬೀದಿಬದಿ ಆಹಾರವಾಗಿದೆ. ಅದ್ರಲ್ಲೂ ಈ ಪಾನಿಪುರಿ ಹೆಂಗಳೆಯರ ಆಲ್ ಟೈಮ್ ಫೇವರೆಟ್ ಸ್ಟ್ರೀಟ್ ಫುಡ್ ಅಂತಾನೇ ಹೇಳಬಹುದು. ಯಾಕಂದ್ರೆ ಸಂಜೆ ಹೊತ್ತಲ್ಲಿ ಯುವಕರು ಹೆಚ್ಚಾಗಿ ಟೀ ಸ್ಟಾಲ್ ಅಥವಾ ಫಾಸ್ಟ್ ಫುಡ್ ಶಾಪ್ಗಳಿಗೆ ಹೋದ್ರೆ, ಯುವತಿಯರು ಮಾತ್ರ ಪಾನಿಪುರಿ ವ್ಯಾಪಾರಿಯ ಬಳಿ ಹೋಗಿ ಬಯ್ಯಾ ಏಕ್ ಪ್ಲೇಟ್ ಪಾನಿಪುರಿ ದೇದೋ ಎಂದು ಹೇಳುತ್ತಾ ಬೀದಿಬದಿಯಲ್ಲಿ ನಿಂತುಕೊಂಡು ಪಾನಿಪುರಿ ಸವಿಯುತ್ತಾರೆ. ಅಲ್ಲಾ ಇವ್ರೆಲ್ಲಾ ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ನಿಂತು ಕಷ್ಟಪಟ್ಟು ಕೆಲಸ ಮಾಡ್ತಾರಲ್ವಾ, ಇವರಿಗೆ ತಮ್ಮ ಕೆಲಸಕ್ಕೆ ತಕ್ಕ ಗಳಿಗೆ, ಲಾಭ ಸಿಗುತ್ತದೆಯೇ?, ಇವರಿಗೆ ಇದಕ್ಕಿಂತ ಒಳ್ಳೆಯ ಸಂಬಳ ಸಿಗುವ ಕೆಲಸಕ್ಕೆ ಹೋಗ್ಬಹುದಲ್ವಾ ಅಂತೆಲ್ಲಾ ಹಲವರು ಹೇಳುತ್ತಿರುತ್ತಾರೆ. ಆದ್ರೆ ಈ ವಿಡಿಯೋವನ್ನು ನೋಡಿದ್ರೆ ಅಬ್ಬಬ್ಬಾ! ಪಾನಿಪುರಿ ಮಾರಾಟ ಮಾಡುವವರು ಒಂದು ದಿನಕ್ಕೆ ಇಷ್ಟೆಲ್ಲಾ ಸಂಪಾದನೆ ಮಾಡ್ತಾರಾ? ಲ್ಯಾಪ್ಟಾಪ್ ಮುಂದೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವ ಬದಲು ನಾನು ಕೂಡಾ ಒಂದು ಪಾನಿಪುರಿ ಸ್ಟಾಲ್ ತೆರೆದರೆ ಚೆನ್ನಾಗಿರುತ್ತೆ ಎಂದು ನೀವು ಖಂಡಿತವಾಗಿಯೂ ಹೇಳ್ತೀರಾ ನೋಡಿ.
ಈ ವಿಡಿಯೋವನ್ನು ವಿಜಯ್ (@vijay_vox_) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವಿಜಯ್ ಅವರು ಬೀದಿಬದಿಯಲ್ಲಿ ಪಾನಿಪುರಿ ಮಾರಾಟ ಮಾಡುವಂತಹ ವ್ಯಾಪಾರಿಯ ಬಳಿ ಹೋಗಿ, ನಿಮ್ಮ ದಿನದ ಸಂಪಾದನೆ ಎಷ್ಟು ಎಂದು ಕೇಳುತ್ತಾರೆ. ಆ ಸಂದರ್ಭದಲ್ಲಿ ಆ ಪಾನಿಪುರಿ ಮಾರಾಟಗಾರ ನಾನು ಒಂದು ದಿನದಲ್ಲಿ 2500 ರೂ. ಸಂಪಾದನೆ ಮಾಡುತ್ತೇನೆ ಎಂದು ಹೇಳುವುದನ್ನು ಕಾಣಬಹುದು. ಓಹ್ ದೇವ್ರೇ.. ಇವ್ರು ಒಂದು ದಿನಕ್ಕೆ ಇಷ್ಟೆಲ್ಲಾ ಸಂಪಾದನೆ ಮಾಡ್ತಾರ ಎಂದು ಹಲವರು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ನಿಲ್ಲೇ ಗಂಗಮ್ಮ ಅರ್ಜೆಂಟ್ ಯಾಕ್ ಮಾಡ್ತೀ ನಮ್ಮವ್ವ” ಕಂಡೆಕ್ಟರ್ ಪ್ರಯಾಣಿಕರನ್ನು ಬಸ್ಸಿಂದ ಹತ್ತಿ-ಇಳಿಸುವುದು ಹೀಗೆ
ಡಿಸೆಂಬರ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 42.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.6 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಿದ್ದಾರೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವರು ದಿನವಿಡೀ ನಿಂತುಕೊಂಡು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಇನ್ನು ಮುಂದೆ ನಾನು ಕೂಡಾ ಇದೇ ವ್ಯಾಪಾರವನ್ನು ಮಾಡುತ್ತೇನೆ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:12 pm, Tue, 12 December 23