Viral Video: ಲಾಂಡ್ರಿ ಮಾಡುತ್ತಿರುವ ಶ್ವಾನವನ್ನು ನೋಡಿದ್ರೆ ನಿಜವಾಗಿಯೂ ಇಷ್ಟಪಡುತ್ತೀರಾ!

| Updated By: shruti hegde

Updated on: Jun 22, 2021 | 2:44 PM

ಸಾಮಾಜಿ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋ ಕ್ಲಿಪ್​ 1.5 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸೀಕ್ರೆಟ್​ಗೆ ಶ್ಲಾಘನೆ ಕೂಡಾ ವ್ಯಕ್ತವಾಗಿದೆ.

Viral Video: ಲಾಂಡ್ರಿ ಮಾಡುತ್ತಿರುವ ಶ್ವಾನವನ್ನು ನೋಡಿದ್ರೆ ನಿಜವಾಗಿಯೂ ಇಷ್ಟಪಡುತ್ತೀರಾ!
ಮನೆಗೆಲಸದಲ್ಲಿ ಸಹಾಯ ಮಾಡುತ್ತಿರುವ ಶ್ವಾನ
Follow us on

ಮನೆಯಲ್ಲಿರುವ ಸಾಕು ಪ್ರಾಣಿಗಳು ಮಾಲೀಕ ಹೇಳಿದ ಕೆಲಸವನ್ನೆಲ್ಲವನ್ನೂ ಚಾಚೂ ತಪ್ಪದೇ ಮಾಡುತ್ತದೆ. ಮನೆಯ ಕಾವಲಿನಿಂದ ಹಿಡಿದು ಮನೆಗೆಲಸಕ್ಕೆ ಸಹಾಯ ಮಾಡುವವರೆಗೆ ಶ್ವಾನ ಕರ್ತವ್ಯಬದ್ಧವಾಗಿರುತ್ತದೆ. ಇಲ್ಲೊಂದು ನಾಯಿಯೂ ಸಹ ಮನೆಯ ಮಾಲೀಕೆಗೆ ಬಟ್ಟೆ ಒಗೆಯಲು ಸಹಾಯ ಮಾಡುತ್ತಿದೆ. ನಾಯಿಯ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ನಾಯಿ ಮನುಷ್ಯರಿಗೆ ಒಳ್ಳೆಯ ಸ್ನೇಹಿತ. ಮೂಕ ಪ್ರಾಣಿಯಾದರೂ ಸಹ ಮನುಷ್ಯರ ನೋವಿಗೆ ಸ್ಪಂದಿಸುತ್ತದೆ. ಸಾಕಿದ ಮಾಲೀಕರಿಗೆ ಕೊಂಚ ನೋವಾದರೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅವುಗಳಿಗಿದೆ. ಜತೆಗೆ ಹೇಳಿದ ಮಾತನ್ನೂ ಸಹ ಚಾಚೂ ತಪ್ಪದೇ ಮಡುತ್ತವೆ. ನಾಯಿಯು ಬಟ್ಟೆ ಒಗೆಯಲು ಸಹಾಯ ಮಾಡುತ್ತಿರುವ ವಿಡಿಯೋವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ನಾಯಿಯ ಹೆಸರು ಸೀಕ್ರೆಟ್​. ಮನೆಯ ಮಾಲೀಕರಿಗೆ ಅದು ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದೆ. ವಾಷಿಂಗ್​ ಮಷಿನ್​ನಲ್ಲಿ ಬಟ್ಟೆಗಳನ್ನು ಹಾಕಲು, ವಾಶ್​ ಆದ ಬಟ್ಟೆಗಳನ್ನು ಮಷಿನ್​ನಿಂದ ತೆಗೆಯಲು, ಬಟ್ಟೆಗಳನ್ನು ಒಣ ಹಾಕಲು ಜತೆಗೆ ಒಣಗಿದ ಬಟ್ಟೆಗಳನ್ನು ವಾಡ್​ರೂಮ್​ನಲ್ಲಿ ಇರಿಸುವವರೆಗೆ ಸೀಕ್ರೆಟ್​​ (ನಾಯಿ) ಸಹಾಯ ಮಾಡುತ್ತಿದೆ.

ಸಾಮಾಜಿ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋ ಕ್ಲಿಪ್​ 1.5 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸೀಕ್ರೆಟ್​ಗೆ ಶ್ಲಾಘನೆ ಕೂಡಾ ವ್ಯಕ್ತವಾಗಿದೆ. ಬಟ್ಟೆ ಒಗೆಯಲು ಸಹಾಯ ಮಾಡುತ್ತಿರುವ ನಾಯಿಗೆ ಮೆಚ್ಚುಗೆ ವ್ಯಕ್ತವಾಗಿದೆ. ನಾನು ಸೀಕ್ರೆಟ್ನನ್ನು ಪ್ರೀತಿಸುತ್ತೇನೆ. ಇದು ವಿಶೇಷವಾದ ನಾಯಿ ಎಂದು ಇನ್​ಸ್ಟಾಗ್ರಾಂ ಬಳಕೆದಾರರು ಶೀರ್ಷಿಕೆ ನೀಡುವ ಮೂಲಕ ಪೋಸ್ಟ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ತಮ್ಮ ಮುದ್ದಿನ ಸಾಕು ನಾಯಿಯ ಸವಿ ನೆನಪಿಗೆ ಸಮಾಧಿ ಕಟ್ಟಿ ತಿಥಿ ಮಾಡಿ ಜನರಿಗೆ ಊಟ ಹಾಕಿದ ದಂಪತಿ

Viral Video: ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ! ನಿಜವಾಗಿಯೂ ಏನಾಯ್ತು ಅಲ್ಲಿ?