ಸಾಮಾಜಿಕ ಮಾಧ್ಯಮಗಳು ವಿವಿಧ ರೀತಿಯ ಪ್ರಾಣಿಗಳ ವಿಡಿಯೋಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಕೆಲವೊಮ್ಮೆ ಕುದುರೆ, ಕೆಲವೊಮ್ಮೆ ಆನೆ, ಕೆಲವೊಮ್ಮೆ ಸಿಂಹ ಮತ್ತು ಇನ್ನೂ ಕೆಲವೊಮ್ಮೆ ಹುಲಿ ಇತ್ಯಾದಿಗಳ ವೀಡಿಯೊಗಳು ಆಗಾಗ್ಗೆ ವೈರಲ್ ಆಗುತ್ತವೆ. ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿನ (Social media) ವಿಡಿಯೋಗಳಲ್ಲಿ ನಾಯಿಗಳು (Dog) ಮತ್ತು ಬೆಕ್ಕುಗಳು (Cat) ಸೇರಿವೆ. ಮುಖ್ಯವಾಗಿ ಇವು ಸಾಕುಪ್ರಾಣಿಗಳಾಗಿರುವುದರಿಂದ ಆಗಾಗ್ಗೆ ಕೆಲವರು ವಿಡಿಯೋ ಮಾಡಿ ಹಂಚಿಕೊಳ್ಳುತ್ತಾರೆ. ಕೆಲವು ವಿಡಿಯೋಗಳು ತಮಾಷೆಯಾಗಿದ್ದರೆ, ಮತ್ತೆ ಕೆಲವು ವಿಡಿಯೋಗಳು ಅಚ್ಚರಿ ಹುಟ್ಟಿಸುವಂತಿರುತ್ತದೆ. ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ವಿಡಿಯೋ ಕಂಡು ಗೊಂದಲಕ್ಕೀಡಾಗಿದ್ದಾರೆ.
ವೈರಲ್ ಆದ ವಿಡಿಯೋವು ವಾಸ್ತವವಾಗಿ ನಾಯಿಯದ್ದಾಗಿದೆ. ಆದರೆ ಅದು ಬೆಕ್ಕಿನಂತೆ ಕಾಣುತ್ತದೆ. ನಾಯಿ ಹೆಚ್ಚು ಎತ್ತರವಾಗಿಯೂ ಇಲ್ಲ, ಮುಖದ ರಚನೆಯೂ ಬೆಕ್ಕಿನಂತಿದೆ. ಈ ಕಾರಣದಿಂದ ವಿಡಿಯೋ ನೋಡಿದ ಜನರು ಬೆಕ್ಕೋ ಅಥವಾ ನಾಯಿಯೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಈ ತಿಳಿ ಗೆಂಪು ಬಣ್ಣದ ನಾಯಿ ನೋಡಲು ಬೆಕ್ಕಿನಂತೆ ಕಾಣುತ್ತದೆ.
ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ತಮಾಷೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಒಂದಾದ ಟ್ವೀಟರ್ನಲ್ಲಿ @buitengebieden_ ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಇಂದು ಬೆಕ್ಕು ಅಥವಾ ನಾಯಿ? ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
Cat or a dog? pic.twitter.com/mklCF30O1y
— Buitengebieden (@buitengebieden_) January 6, 2022
ವೈರಲ್ ಆದ ವಿಡಿಯೋಗೆ ಇದುವರೆಗೆ 2 ಲಕ್ಷದ 14 ಸಾವಿರಕ್ಕೂ ಹೆಚ್ಚು ವಿವ್ಸ್ ಬಂದಿದ್ದು, 7 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಇದೇ ವೇಳೆ ಹಲವರು ತಮಾಷೆಯ ಕಾಮೆಂಟ್‌ಗಳನ್ನೂ ಮಾಡಿದ್ದಾರೆ. ನಾನು ನನ್ನ ಮನಸ್ಸನ್ನು ಬದಲಾಯಿಸುತ್ತಿದ್ದೇನೆ ಇದು ಬೆಕ್ಕು? ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಇದು ನಾಯಿ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಬೆಕ್ಕು ಅಥವಾ ನಾಯಿ ಎಂಬ ಗೊಂದಲದಲ್ಲಿಯೇ ನೆಟ್ಟಿಗರು ಈ ವಿಡಿಯೋ ವಿಕ್ಷಿಸಿದ್ದಾರೆ.
ಇದನ್ನೂ ಓದಿ:
Viral Video: ಹೆಣ್ಣು ಸಿಂಹವನ್ನು ತೋಳಲ್ಲಿ ಹೊತ್ತು ನಡೆದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್
ಕೆಸರಿನಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡ ಜೋಡಿ: ವೈರಲ್ ಆದ ಫೋಟೋಗಳು
Published On - 9:18 am, Sun, 9 January 22