Video: ಪುಟ್ಟ ಮಗುವಿಗೆ ತಾಯಿ ಕಥೆ ಹೇಳುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ

ಮಕ್ಕಳಿಗೆ ಕಥೆ ಅಂದ್ರೆ ಇಷ್ಟ. ಹೀಗಾಗಿ ಮನೆಯಲ್ಲಿ ಅಜ್ಜ ಅಜ್ಜಿಯಿದ್ರೆ ತಮ್ಮ ಮೊಮ್ಮಕ್ಕಳಿಗೆ ರಾಜಕುಮಾರನ ಕಥೆ ಹೇಳುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಭಳು ತಾಯಿಯೂ ತನ್ನ ಮಗುವಿಗೆ ಕಥೆಯನ್ನು ಹೇಳುತ್ತಿದ್ದು, ಈ ವೇಳೆ ಮನೆಯ ಶ್ವಾನವೊಂದು ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಪುಟ್ಟ ಮಗುವಿಗೆ ತಾಯಿ ಕಥೆ ಹೇಳುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ
ವೈರಲ್‌ ವಿಡಿಯೋ

Updated on: Oct 09, 2025 | 10:28 AM

ನಾವೆಲ್ಲಾ ಸಣ್ಣವರಿದಿದ್ದಾಗ ಮನೆಯಲ್ಲಿ ಅಜ್ಜ ಅಜ್ಜಿಯನ್ನು ಹೇಳುತ್ತಿದ್ದ ಕಥೆಯನ್ನು (Story) ಕೇಳಿ ಖುಷಿ ಪಡುತ್ತಿದ್ದೆವು. ಆದರೆ ಈಗಿನ ಕಾಲದ ಮಕ್ಕಳಿಗೆ ಮೊಬೈಲ್ ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಇಲ್ಲೊಬ್ಬಳು ಮಹಿಳೆ ತನ್ನ ಮಗುವಿಗೆ ಕಥೆಯನ್ನು ಹೇಳುತ್ತಿದ್ದು, ಮನೆಯ ಶ್ವಾನ (dog) ಕೂಡ ಕಥೆ ಕೇಳಲು ಸೇರಿಕೊಂಡಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.

@renegadethegooddog ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಡೆಲೈನ್ ನಿಕೋಲಾ ಎಡ್ವರ್ಡ್ಸ್ ಎಂಬ ಮಹಿಳೆ “ಯು ಅಂಡ್ ಮಿ” ಕಥೆಯನ್ನು ಓದುವುದರೊಂದಿಗೆ ಈ ವಿಡಿಯೋವು ಪ್ರಾರಂಭವಾಗುತ್ತದೆ. ಮನೆಯ ಮುದ್ದಿನ ಶ್ವಾನ ರೆನೆಗೇಡ್ ಹಾಗೂ ಪುಟ್ಟ ಕಂದಮ್ಮ ಈ ಮಹಿಳೆಯ ಮಡಿಲಿನಲ್ಲಿ ಕುಳಿತುಕೊಂಡಿರುವುದನ್ನು ಕಾಣಬಹುದು. ಮಹಿಳೆಯೂ ಪ್ರತಿಯೊಂದು ಸಾಲುಗಳನ್ನು ಓದುತ್ತಾ ಹೋದಂತೆ ಪುಟದ ಪ್ರತಿ ತಿರುವಿನಲ್ಲೂ ಶ್ವಾನ ರೆನೆಗೇಡ್‌ ಬಾಲ ಅಲ್ಲಾಡಿಸುತ್ತಾ ಪ್ರತಿಕ್ರಿಯೆ ನೀಡುವುದನ್ನು ನೋಡಬಹುದು. ಕೊನೆಯ ಸಾಲನ್ನು ಡೆಲೈನ್ ಹೇಳುತ್ತಿದ್ದಂತೆ ರೆನೆಗೇಡ್ ನಿಧಾನವಾಗಿ ತನ್ನ ತಲೆಯನ್ನು ಪುಸ್ತಕದತ್ತ ನೋಡುತ್ತದೆ.

ಇದನ್ನೂ ಓದಿ
ಬೆಂಗಳೂರು ಏರ್‌ಪೋರ್ಟ್‌ನ ಪ್ರಯಾಣಿಕರ ಸೀಟಿನಲ್ಲೇ ನಿದ್ರೆಗೆ ಜಾರಿದ ಶ್ವಾನ
18 ಅಡಿ ಎತ್ತರದ ಗೋಡೆ ಹಾರಿದ ಭಾರತೀಯ ಶ್ವಾನ
28 ಗೋಲ್ಡನ್‌ ರಿಟ್ರೈವರ್ ಶ್ವಾನಗಳ ಜತೆ ಬೆಂಗಳೂರಿನ ಮಹಿಳೆಯ ವಾಕಿಂಗ್
ನೀರಿಗೆ ಬೀಳುತ್ತಿದ್ದ ಕಂದಮ್ಮನನ್ನು ರಕ್ಷಿಸಿದ ಶ್ವಾನ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ; ಬೆಂಗಳೂರು ಏರ್‌ಪೋರ್ಟ್‌ನ ಪ್ರಯಾಣಿಕರ ಸೀಟಿನಲ್ಲೇ ನಿದ್ರೆಗೆ ಜಾರಿದ ಶ್ವಾನ

ಈ ವಿಡಿಯೋ ಇಪ್ಪತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ನನ್ನ ಹೃದಯವು ಕರಗಿತು ಎಂದಿದ್ದಾರೆ. ಮತ್ತೊಬ್ಬರು ಪ್ರತಿಯೊಂದು ಸಾಲನ್ನು ಎಷ್ಟು ಮುದ್ದಾಗಿ ಈ ಶ್ವಾನವು ಆಲಿಸುತ್ತಿದೆ. ಈ ದೃಶ್ಯವನ್ನು ನೋಡಲು ಖುಷಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಪ್ರತಿಯೊಂದು ಕಥಾ ಸಮಯ ಶ್ವಾನವನ್ನು ಒಳಗೊಂಡಿರುತ್ತದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ