Guinness World Record: ಗಿನ್ನೆಸ್ ವಿಶ್ವ ದಾಖಲೆ ಪಡೆದುಕೊಂಡ ಈ ಶ್ವಾನದ ವಿಶೇಷತೆ ಏನು ಗೊತ್ತಾ? ಇಲ್ಲಿದೆ ವಿಡಿಯೋ

ಅಮೇರಿಕದ ಟಕ್ಸನ್‌ ಸಿಟಿಯ ಶ್ವಾನ ಒಂದು ತನ್ನ ಉದ್ದವಾದ ನಾಲಿಗೆಯ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಪಡೆದುಕೊಂಡಿದೆ. ಅಧಿಕೃತವಾಗಿ ಗಿನ್ನೆಸ್​​ ವರ್ಲ್ಡ್ ರೆಕಾರ್ಡ್ ಟ್ವಿಟರ್​​​ ಖಾತೆಯಲ್ಲಿ ಈ ಶ್ವಾನದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆ ಪೋಸ್ಟ್​ ಇಲ್ಲಿದೆ ನೋಡಿ.

Guinness World Record: ಗಿನ್ನೆಸ್ ವಿಶ್ವ ದಾಖಲೆ ಪಡೆದುಕೊಂಡ ಈ ಶ್ವಾನದ ವಿಶೇಷತೆ ಏನು ಗೊತ್ತಾ? ಇಲ್ಲಿದೆ ವಿಡಿಯೋ
ಮೂರು ವರ್ಷದ ಬಿಸ್ಬೀ ಎಂಬ ಹೆಸರಿನ ಶ್ವಾನ
Image Credit source: azfamily.com

Updated on: Mar 05, 2023 | 10:05 AM

ಅಮೇರಿಕದ ಟಕ್ಸನ್‌ ಸಿಟಿಯ ಶ್ವಾನವೊಂದು  ತನ್ನ ಉದ್ದವಾದ ನಾಲಿಗೆಯ ಮೂಲಕ ಗಿನ್ನೆಸ್ ವಿಶ್ವ ದಾಖಲೆ(Guinness World Record) ಪಡೆದುಕೊಂಡಿದೆ. ಈ ಶ್ವಾನದ ಮಾಲೀಕರಾದ ಜೇ ಮತ್ತು ಎರಿಕಾ ಜಾನ್ಸನ್ ತಾವು ಮರಿಯನ್ನು ತಂದು ಸಾಕುವಾಗಲೇ, ಇದರಲ್ಲಿ ಸ್ವಲ್ಪ ವಿಭಿನ್ನವಾಗಿದೆ ಎಂದು ಗಮನಿಸಿದ್ದಾರೆ. ಕೆಲವು ದಿನಗಳ ನಂತರ ಶ್ವಾನದ ನಾಲಿಗೆ ಸಾಕಷ್ಟು ಉದ್ದವಾಗಿರುವುದನ್ನು ಕಂಡು ಅದರ ಫೋಟೋ ತೆಗೆದು ತನ್ನ ಸ್ನೇಹಿತರು ಕುಟುಂಬದವರಿಗೆಲ್ಲಾ ಕಳುಹಿಸಿದ್ದಾರೆ. ಅಧಿಕೃತವಾಗಿ ಗಿನ್ನೆಸ್​​ ವರ್ಲ್ಡ್ ರೆಕಾರ್ಡ್ ಟ್ವಿಟರ್​​​ ಖಾತೆಯಲ್ಲಿ ಈ ಶ್ವಾನದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆ ಪೋಸ್ಟ್​ ಇಲ್ಲಿದೆ ನೋಡಿ.

ಮೂರು ವರ್ಷದ ಬಿಸ್ಬೀ ಎಂಬ ಹೆಸರಿನ ಶ್ವಾನ 3.74 ಇಂಚುಗಳಷ್ಟು ಉದ್ದದ ನಾಲಿಗೆಯನ್ನು ಹೊಂದಿದ್ದು, ವಿಶ್ವ ದಾಖಲೆಗಾಗಿ ನಾಯಿಯ ನಾಲಿಗೆಯನ್ನು ಮೂತಿಯ ತುದಿಯಿಂದ ಅಳೆಯಲಾಗಿದೆ. ಮೊದಲನೆಯದಾಗಿ, ನಾಯಿಯು ತನ್ನ ನಾಲಿಗೆಯನ್ನು ಅದರ ಮೂತಿಯಿಂದ ಸಾಧ್ಯವಾದಷ್ಟು ಹೊರಹಾಕಬೇಕು. ನಂತರ ಅಲ್ಲಿನ ಪಶುವೈದ್ಯರು ನಾಲಿಗೆಯನ್ನು ಅಳೆದ್ದಿದ್ದಾರೆ. ಬಿಸ್ಬೀಯ ನಾಲಿಗೆ ಪಾಪ್ಸಿಕಲ್ ಸ್ಟಿಕ್‌ಗಿಂತ ಉದ್ದವಾಗಿದ್ದರಿಂದ ವಿಶ್ವದ ಅತೀ ಉದ್ದನೆಯ ನಾಲಿಗೆಯನ್ನು ಹೊಂದಿರುವ ಶ್ವಾನ ಎಂದು ವಿಶ್ವ ದಾಖಲೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಲೋಹದ ಬೇಲಿ ಮುರಿದ ಮೊಸಳೆ, ಇದು ಭಯಾನಕ ದೃಶ್ಯ ಎಂದ ನೆಟ್ಟಿಗರು

ಈ ಶ್ವಾನದ ಮಾಲೀಕರಾದ ಜೇ ಮತ್ತು ಎರಿಕಾ ಜಾನ್ಸನ್ ತಾವು ಮರಿಯನ್ನು ತಂದು ಸಾಕುವಾಗಲೇ, ಇದರಲ್ಲಿ ಸ್ವಲ್ಪ ವಿಭಿನ್ನವಾಗಿದೆ ಎಂದು ಗಮನಿಸಿದ್ದಾರೆ. ಕೆಲವು ದಿನಗಳ ನಂತರ ಶ್ವಾನದ ನಾಲಿಗೆ ಸಾಕಷ್ಟು ಉದ್ದವಾಗಿರುವುದನ್ನು ಕಂಡು ಅದರ ಫೋಟೋ ತೆಗೆದು ತನ್ನ ಸ್ನೇಹಿತರು ಕುಟುಂಬದವರಿಗೆಲ್ಲಾ ಕಳುಹಿಸಿದ್ದಾರೆ. ಅವರಲ್ಲಿ ಒಬ್ಬರು ತನ್ನ ನಾಯಿಯ ನಾಲಿಗೆ ವಿಶ್ವ ದಾಖಲೆಯಾಗಬಹುದೆಂದು ಉಲ್ಲೇಖಿಸಿದ್ದಾರೆ. ಇದೀಗಾ ನಮ್ಮ ಮುಂದಿನ ಶ್ವಾನ ವಿಶ್ವ ದಾಖಲೆಯನ್ನು ಪಡೆದುಕೊಂಡಿರುವುದು ಸಾಕಷ್ಟು ಖುಷಿಯನ್ನು ತಂದು ಕೊಟ್ಟಿದೆ ಎಂದು ಮಾಲೀಕರು ಖುಷಿಯನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:05 am, Sun, 5 March 23