ಮಹಾಮಾರಿ ಕೊರೊನಾ ಕಾಲದಲ್ಲಿ ಅಂದರೆ ಎರಡು ವರ್ಷಗಳ ಹಿಂದೆ ಡೋಲೋ 650ಯ ಅಂಬಾಸಿಡರ್ ಎಂಬಂತೆ ಕರ್ನಾಟಕದ ತುಂಬಾ ಬಿಂಬಿಸಲ್ಪಟ್ಟ ಮೈಸೂರಿನ ಶಶಿರೇಖಾ ಇದೀಗಾ ಸಿನಿಮಾದಲ್ಲಿ ಹಿರೋಯಿನ್ ಆಗಿ ನಟಿಸಲಿದ್ದಾರೆ ಎಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ‘ಎಂತದ್ದು ಇಲ್ಲಾ ಸರ್ ಬಿಸಿ ರಾಗಿ ಹಿಟ್ಟು, ಡೋಲೋ 650 ಮಾತ್ರೆ’ ಎಂಬ ಡೈಲಾಗ್ ಮೂಲಕ ಕರ್ನಾಟಕದಲ್ಲಿ ಸಖತ್ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡಿದ್ದ ಶಶಿರೇಖಾ. ಇದೀಗಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಶಶಿರೇಖಾ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ವಿಭಿನ್ನವಾದ ವಿಡಿಯೋಗಳ ಮೂಲಕವೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1ಲಕ್ಷದ 75ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಿಯಕರನನ್ನು ವಶೀಕರಣ ಮಾಡಲು ಹೋಗಿ 8 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಯುವತಿ
ಸದ್ಯ ಶಶಿರೇಖಾ ಸಿನಿಮಾ ಹೀರೋಯಿನ್ ಆಗುತ್ತಿರುವ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. TOXIC CAPTAIN ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗಿದೆ. ಒಂದೇ ದಿನದಲ್ಲಿ ವಿಡಿಯೋ ಮೂರು ಸಾವಿರಕ್ಕೂ ಹೆಚ್ಚಿನ ಲೈಕುಗಳನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಹಾಸ್ಯಸ್ಪದ ಕಾಮೆಂಟ್ ಗಳನ್ನು ಕೂಡ ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ