Viral Video: ಕರಡಿಯನ್ನು ಓಡಿಸಿದ ಈತನ ರೀತಿಗೆ ‘ಡ್ಯಾಡ್ ಆಫ್​ ದಿ ಇಯರ್’ ಎಂದ ನೆಟ್ಟಿಗರು

Dog Rescue : ರಾತ್ರಿಯಾಗಿದೆ. ನಿಮ್ಮ ಮನೆಗೆ ಕರಡಿಯೊಂದು ಬರುತ್ತದೆ ಎಂದುಕೊಳ್ಳಿ. ಅದನ್ನು ಹೇಗೆ ಓಡಿಸುತ್ತೀರಿ? ಈತನಂತೂ ಹೀಗೆ ಓಡಿಸಿದ್ದಾನೆ. ವಿಡಿಯೋ ನೋಡಿ.

Viral Video: ಕರಡಿಯನ್ನು ಓಡಿಸಿದ ಈತನ ರೀತಿಗೆ ‘ಡ್ಯಾಡ್ ಆಫ್​ ದಿ ಇಯರ್’ ಎಂದ ನೆಟ್ಟಿಗರು
ಹೇಗೆ ಈತ ಕರಡಿ ಓಡಿಸಿದ್ದು?
Edited By:

Updated on: Aug 12, 2022 | 4:23 PM

Viral : ಕೆಲವೊಮ್ಮೆ ಎದುರಾಳಿಯನ್ನು ಓಡಿಸಲು ನಿಜವಾಗಿಯೂ ಹೋರಾಟಕ್ಕಿಳಿಯಬೇಕಿಲ್ಲ ಎನ್ನಿಸುತ್ತದೆ. ಸಮಯ, ಶಕ್ತಿಗಿಂತ ಯುಕ್ತಿಯೂ ಕೆಲವೊಮ್ಮೆ ಮೇಲುಗೈ ಸಾಧಿಸುತ್ತದೆಯೇನೋ. ಅದಕ್ಕೆ ಬೇಕಿರುವುದು ಸಮಯಪ್ರಜ್ಞೆ. ಈ ವಿಡಿಯೋ ನೋಡಿ. ರಾತ್ರಿಯ ಹೊತ್ತು. ಮನೆಯಾಕೆ ಫೋನಿನಲ್ಲಿ ಮಾತನಾಡುತ್ತಾ ಹೊರಬರುತ್ತಾಳೆ. ಹೊರಗೆ ಆಟವಾಡಿಕೊಂಡಿದ್ದ ಸಾಕುನಾಯಿ ಹೆದರಿ ಓಡಾಡಲಾರಂಭಿಸುತ್ತದೆ. ಈಕೆ ಗಾಬರಿಯಾಗಿ ನೋಡಿದಾಗ ನಾಯಿಯನ್ನು ಕರಡಿಯೊಂದು ಅಟ್ಟಾಡಿಸಿಕೊಂಡು ಬರುತ್ತಿರುತ್ತದೆ. ಚೀರಾಡುತ್ತ ಅಸಹಾಯಕಳಾಗಿ ಒಳಹೋಗುತ್ತಾಳೆ. ನಾಯಿಯೂ ಅವಳನ್ನು ಹಿಂಬಾಲಿಸುತ್ತದೆ. ಹೊರಗೆ ಬಂದ ಆಕೆಯ ಗಂಡ, ಜೋರಾಗಿ ಕೂಗಾಡಿ, ಚಿತ್ರವಿಚಿತ್ರ ಹಾವಭಾವದಿಂದ ಆ ಕರಡಿಯನ್ನು ಹೆದರಿಸುತ್ತಾನೆ. ಅದು ಓಡಿಹೋಗಿಬಿಡುತ್ತದೆ.

ವಿಡಿಯೋ ನೋಡಿ,

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಭಯಂಕರವೂ ಅಲ್ಲದ, ತಮಾಷೆಯೂ ಅಲ್ಲದ ವಿಚಿತ್ರ ವಿಡಿಯೋ ನೋಡಿ ನೆಟ್ಟಿಗರಿಗೂ ಅಳಲೂ ಆಗಿಲ್ಲ ನಗಲೂ ಆಗಿಲ್ಲ. ‘ಡ್ಯಾಡ್ ಆಫ್​ ದಿ ಇಯರ್’ ಎಂದು ಈತನಿಗೆ ಬಿರುದು ನೀಡಿ ಕೊನೆಗೂ ನಕ್ಕುಬಿಟ್ಟಿದ್ದಾರೆ.

ಆದರೆ ನಿಮ್ಮ ಮನೆಗೆ ಕರಡಿ ಬಂದಾಗ ಈತ ಮಾಡಿದಂತೆಯೇ ಮಾಡಿದರೆ ಕರಡಿ ಓಡುವುದೆ? ಗೊತ್ತಿಲ್ಲ. ನಿಮಗೇನು ಅನ್ನಿಸುತ್ತೆ ಇದನ್ನು ನೋಡಿದಾಗ? ಒಟ್ಟಿನಲ್ಲಿ ಹುಷಾರಾಗಿರಿ.

ಇನ್ನಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 4:16 pm, Fri, 12 August 22