Viral: ಕಡ್ಲೆಪುರಿ ಹಂಚಿದ ಹಾಗೆ ಫ್ರೀಯಾಗಿ ʼಐಪೋನ್‌ 16 ಪ್ರೋ ಮ್ಯಾಕ್ಸ್‌ʼ ಮೊಬೈಲ್‌ ಹಂಚಿದ ವ್ಯಕ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 30, 2024 | 4:43 PM

ಹೊಸ ಹೊಸ ಆವೃತ್ತಿಯ ಐಫೋನ್‌ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಇದನ್ನೆಲ್ಲಾ ನೋಡಿ ನಾನು ಯಾವಾಗಪ್ಪಾ ಈ ಫೋನ್‌ ಖರೀದಿ ಮಾಡೋದು ಅಂತ ಎಲ್ರೂ ಕಾಯ್ತಿದ್ರೆ ಇಲ್ಲೊಬ್ಬ ದುಬೈ ಕುಬೇರ ಇತ್ತೀಚಿಗಷ್ಟೇ ಮಾರುಕಟ್ಟೆಗೆ ಲಗ್ಗೆಯಿಟ್ಟ ಐಪೋನ್‌ 16 ಪ್ರೋ ಮ್ಯಾಕ್ಸ್‌ ಫೋನ್‌ಗಳನ್ನು ಖರೀದಿಸಿ, ಅದನ್ನು ಕಡ್ಲೆಪುರಿ ಹಂಚಿದ ಹಾಗೆ ಕೇಳಿದವರಿಗೆಲ್ಲಾ ಈ ಐಫೋನ್‌ ಅನ್ನು ಹಂಚಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪವಟ್ಟೆ ವೈರಲ್‌ ಆಗುತ್ತಿದೆ.

Viral: ಕಡ್ಲೆಪುರಿ ಹಂಚಿದ ಹಾಗೆ ಫ್ರೀಯಾಗಿ ʼಐಪೋನ್‌ 16 ಪ್ರೋ ಮ್ಯಾಕ್ಸ್‌ʼ ಮೊಬೈಲ್‌ ಹಂಚಿದ ವ್ಯಕ್ತಿ
ವೈರಲ್​​ ವಿಡಿಯೋ
Follow us on

ಹೊಸ ಹೊಸ ಆವೃತ್ತಿಯ ಐಫೋನ್‌ ಮಾರುಕಟ್ಟೆಗೆ ಬಂದ್ರೆ ಸಾಕು ಜನರು ಈ ಬ್ರಾಂಡೆಡ್‌ ಮೊಬೈಲ್‌ ಖರೀದಿಗಾಗಿ ಮುಗಿ ಬೀಳುತ್ತಾರೆ. ಇನ್ನೂ ಕೆಲವರು ಈ ದುಬಾರಿ ಫೋನಿನ ಬೆಲೆ ಕೇಳಿ, ಈ ಫೋನ್‌ ಖರೀದಿ ಮಾಡ್ಬೇಕಂದ್ರೆ ನನ್ನೆರಡೂ ಕಿಡ್ನಿ ಕೂಡ ಮಾರ್ಬೇಕಾಗುತ್ತದೆ ಅಂತೆಲ್ಲಾ ತಮಾಷೆ ಮಾಡುತ್ತಿರುತ್ತಾರೆ. ಅಂತದ್ರಲ್ಲಿ ಇಲ್ಲೊಬ್ಬ ಕುಬೇರ ಇದೀಗ ಕೆಲ ದಿನಗಳ ಹಿಂದೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಐಫೋನ್‌ 16 ಪ್ರೋ ಮ್ಯಾಕ್ಸ್‌ ಮೊಬೈಲ್‌ ಖರೀದಿಸಿ, ಅದನ್ನೆಲ್ಲಾ ತನ್ನ ಮರ್ಸಿಡಿಸ್‌ ಕಾರಿಗೆ ಅಂಟಿಸಿ ಕೇಳಿದವರಿಗೆ ಫ್ರೀಯಾಗಿ ಕೊಟ್ಟಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ದುಬೈನ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಯುವನಿಗೆ ಫ್ರೀಯಾಗಿ ದುಬಾರಿ ಬೆಲೆಯ ಐಪೋನ್‌ 16 ಪ್ರೋ ಮ್ಯಾಕ್ಸ್‌ ಮೊಬೈಲ್‌ ಫೋನ್‌ನನ್ನು ನೀಡಿದ್ದಾನೆ. ಅಯ್ಯೋ ದೇವ್ರೆ ನಿಜವೋ ಅಥವಾ ಮಾರ್ಕೆಟಿಂಗ್‌ ತಂತ್ರವೇ ಒಂದು ತಿಳಿಯುತ್ತಿಲ್ಲವೇ ಎಂದು ನೋಡುಗರು ತಲೆಕೆಡಿಸಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಶರ್ಗೀಲ್‌ ಖಾನ್‌ (shargeel__khan) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮರ್ಸಿಡಿಸ್‌ ಕಾರಿನ ಹಿಂಭಾಗದಲ್ಲಿ ಒಂದಷ್ಟು ʼಐಪೋನ್‌ 16 ಪ್ರೋ ಮ್ಯಾಕ್ಸ್‌ʼ ಮೊಬೈಲ್‌ ಬಾಕ್ಸ್‌ಗಳನ್ನು ಅಂಟಿಸಿರುವಂತಹ ದೃಶ್ಯವನ್ನು ಕಾಣಬಹುದು. ಈ ಕಾರಿನ ಹಿಂಬದಿಯ ಕಾರಿನಲ್ಲಿಯೇ ಕೂತಿದ್ದ ಯುವಕನೊಬ್ಬ ಈ ದುಬಾರಿ ಮೊಬೈಲ್‌ ಕಂಡು ಕಾರಿನಿಂದ ಎದ್ದು ಹೋಗಿ ಒಂದು ಮೊಬೈಲ್‌ ಎತ್ತಿಕೊಂಡು, ಕಾರಿನ ಮುಂಭಾಗಕ್ಕೆ ಬಂದು ಈ ಮೊಬೈಲ್‌ ನಾನು ತೆಗೆದುಕೊಳ್ಳಲೇ ಎಂದು ಕೇಳಿದಾಗ ಆ ವ್ಯಕ್ತಿ ಆತನಿಗೆ ಫ್ರೀಯಾಗಿಯೇ ಮೊಬೈಲ್‌ ಫೋನ್‌ ನೀಡಿದ್ದಾನೆ.

ಇದನ್ನೂ ಓದಿ: ಇದಪ್ಪಾ ಕ್ರಿಯೆಟಿವಿಟಿ ಅಂದ್ರೆ, ವೈರಲ್‌ ಆಗುತ್ತಿದೆ ಬೆಂಗಳೂರಿನ 3D ಬಿಲ್‌ಬೋರ್ಡ್‌

ಸೆಪ್ಟೆಂಬರ್‌ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಾಗೇ ನನ್ಗೂ ಒಂದು ಐಫೋನ್‌ ಕೊಡಿ ಸ್ವಾಮಿʼ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನಿಜವೇ ಅಥವಾ ಮಾರ್ಕೆಟಿಂಗ್‌ ತಂತ್ರವೇʼ ಎಂದು ಪ್ರಶ್ನೆ ಕೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ