Viral Video: ಜಪಾನ್​; ನಾಗರಿಕ ಜಿಂಕೆಸಾರಂಗಗಳ ಅಪರೂಪದ ವಿಡಿಯೋ

|

Updated on: Jul 29, 2023 | 10:52 AM

Animals : ಪರಿಸ್ಥಿತಿ ಎಂಥವರಿಗೂ ಸಹಬಾಳ್ವೆಯನ್ನು ಕಲಿಸುತ್ತದೆ ಎನ್ನುವುದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಜಪಾನಿನ ನಾರಾದಲ್ಲಿ ಮಾತ್ರ ಇದು ನಿಜ. ಮಳೆಯಿಂದ ರಕ್ಷಣ ಪಡೆಯಲು ಈ ಜೀವಗಳು ಮನುಷ್ಯರೊಂದಿಗೆ ಇಲ್ಲಿ ತಂಗಿವೆ.

Viral Video: ಜಪಾನ್​; ನಾಗರಿಕ ಜಿಂಕೆಸಾರಂಗಗಳ ಅಪರೂಪದ ವಿಡಿಯೋ
ಮಳೆ ಬಂದದ್ದಕ್ಕೆ ಜಿಂಕೆ ಮತ್ತು ಸಾರಂಗಗಳು ಜಪಾನಿನ ನಾರಾದಲ್ಲಿ ಮನುಷ್ಯರೊಂದಿಗೆ
Follow us on

Japan : ಅಂತರ್ಜಾಲದಲ್ಲಿ ಪ್ರಾಣಿಪ್ರಿಯರ ಮನಸ್ಸನ್ನು ಕದಿಯುತ್ತಿದೆ ಈ ಸುಂದರವಾದ ವಿಡಿಯೋ. ಜಪಾನಿನ ನಾರಾದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಭಾರೀ ಮಳೆ (Rain) ಬೀಳುತ್ತಿರುವ ಪರಿಣಾಮ ಮನುಷ್ಯರೊಂದಿಗೆ ಜಿಂಕೆ, ಸಾರಂಗಗಳೂ ಸೂರಿನ ಕೆಳಗೆ ಆಶ್ರಯ ಪಡೆದಿವೆ. ಈ ಅಪರೂಪದ ದೃಶ್ಯವನ್ನು ತನ್ಸು ಯೆಗೆನ್​ ಎನ್ನುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಾಮರಸ್ಯವನ್ನು ಈ ಚಿತ್ರ ಸೂಚಿಸುತ್ತಿದ್ದು, ನೆಟ್ಟಿಗರು ಈ ಆಪ್ತವಾದ ದೃಶ್ಯ ನೋಡಿ ಬಹಳ ಖುಷಿಗೊಂಡು ಪ್ರತಿಕ್ರಿಯಿಸುತ್ತಿದ್ದಾರೆ.

ಈತನಕ ಈ ವಿಡಿಯೋ ಅನ್ನು 34 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸುಮಾರು 5 ಲಕ್ಷ ಜನರು ಲೈಕ್ ಮಾಡಿದ್ದಾರೆ. 90,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನಿಜಕ್ಕೂ ಈ ಪ್ರಾಣಿಗಳೇ ಮನುಷ್ಯರಿಗಿಂತ ಹೆಚ್ಚು ನಾಗರಿಕತೆಯನ್ನು ಅರ್ಥ ಮಾಡಿಕೊಂಡಿವೆ ಎಂದಿದ್ಧಾರೆ ಒಬ್ಬರು. ಜಿಂಕೆಗಳಿಗೂ ಹೇಗೆ ಶಿಸ್ತು ಪಾಲಿಸಬೇಕು ಎನ್ನುವುದು ಗೊತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ವೈಪರ್ ವಿಥ್ ಸ್ಟಿಕರ್​; ಈ ಕಾರ್​ನಿಂದ ಅದೆಷ್ಟು ಅಪಘಾತಗಳಾಗಿವೆಯೋ

ನಿಜಕ್ಕೂ ಇದು ನನ್ನ ಮನಸ್ಸನ್ನು ತುಂಬಿ ಬರುತ್ತಿದೆ. ಎಷ್ಟು ಶಾಂತವಾಗಿ ಚೊಕ್ಕವಾಗಿ ಅವು ವಿರಮಿಸುತ್ತಿವೆ. ನಾನೀಗ ಈ ಜಾಗದಲ್ಲಿ ಇರಬಾರದಿತ್ತಾ? ಎನ್ನಿಸುತ್ತಿದೆ ಎಂದಿದ್ದಾರೆ ಮಗದೊಬ್ಬರು. ಇಂಥ ಮಧುರಗಳಿಗೆಗಳಿಗೆ ಪ್ರತೀ ಮನುಷ್ಯನು ಸಾಕ್ಷಿಯಾಗಬೇಕು, ಸಹಬಾಳ್ವೆ ಎಂದರೆ ಏನು ಎಂದು ಅರ್ಥವಾಗುತ್ತದೆ ಎಂದಿದ್ದಾರೆ ಇನ್ನೊಬ್ಬರು. ನಾನೀಗ ಯೋಚಿಸುತ್ತಿದ್ದೇನೆ ಪ್ರತೀ ಮಳೆಗಾಲದಲ್ಲಿಯೂ ಪ್ರಾಣಿಗಳೆಲ್ಲ ಎಲ್ಲಿ ಆಶ್ರಯ ಪಡೆಯುತ್ತವೆ? ಹೀಗೆಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral : ಬಾರ್ಬಿ; ಇದೀಗ ಬರಾಕ್​ ಒಬಾಮಾ ಮತ್ತು ಜೋ ಬೈಡನ್​ಗೆ ಗುಲಾಬಿ ಜ್ವರ 

ಈ ವಿಡಿಯೋ ನನ್ನೆಲ್ಲ ಮನಸ್ಸಿನ ದುಗುಡವನ್ನೂ ಓಡಿಸಿತು. ನಾನು ಅದಕ್ಕೇ ಆಗಾಗ ಪ್ರಾಣಿಗಳ ವಿಡಿಯೋವನ್ನೇ ಹೆಚ್ಚೆಚ್ಚು ನೋಡುತ್ತೇನೆ ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 10:51 am, Sat, 29 July 23