ಸಾಮಾಜಿಕ ಜಾಲತಾಣದಲ್ಲಿ ಅದ್ಭುತ ವಿಡಿಯೋವೊಂದು ಹರಿದಾಡುತ್ತಿದೆ. ಕ್ಯೂಟ್ ಆದ ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು ಅಪರೂಪದ ದೃಶ್ಯ ನೋಡಿದ ನೆಟ್ಟಿಗರು ಮೆಚ್ಚುಗೆ ಹೊರಹಾಕಿದ್ದಾರೆ. ಅಹಮದಾಬಾದ್ನ ಐಐಎಮ್ ಕ್ಯಾಂಪಸ್ನಲ್ಲಿ ಬಾತುಕೋಳಿ ಮರಿಗಳು ಸರತಿ ಸಾಲಿನಲ್ಲಿ ಸಾಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕ್ಯೂಟ್ ವಿಡಿಯೋ ಫುಲ್ ವೈರಲ್ ಆಗಿದೆ.
ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 27ನೇ ತಾರೀಕಿನಂದು ವಿಡಿಯೋ ಹಂಚಿಕೊಳ್ಳಲಾಗಿದ್ದು 8.4 ಸಾವಿರ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 683 ಲೈಕ್ಸ್ಗಳು ಲಭ್ಯವಾಗಿವೆ.
ವಿಡಿಯೋದಲ್ಲಿ ಗಮನಿಸುವಂತೆ ಕಪ್ಪು ಮತ್ತು ಬಿಳಿ ಬಣ್ಣದ ಬಾತುಕೋಳಿ ಕ್ಯಾಂಪಸ್ನಲ್ಲಿ ವಾಕಿಂಗ್ ಮಾಡುತ್ತಿದೆ. ಅದರ ಹಿಂದೆಯೇ ಮರಿಗಳೆಲ್ಲ ಸಾಲು ಸಾಲಾಗಿ ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ಸಾಗುತ್ತಿದೆ. ಬಾತುಕೋಳಿ ಓಡಲು ಪ್ರಾರಂಭಿಸಿದಂತೆ ಮರಿಗಳೆಲ್ಲವೂ ಅಮ್ಮನ ಹಿಂದೆಯೇ ಓಡುತ್ತಿವೆ. ಪುಟ್ಟ ಮರಿಗಳು ಪುಟ್ಟ ಹೆಜ್ಜೆಯಿಡುತ್ತಾ ಸಾಗುತ್ತಿರುವ ದೃಶ್ಯ ನೋಡಲು ಸೊಗಸಗಿದೆ.
ಅಪರೂಪದ ದೃಶ್ಯ ನೋಡಿದ ನೆಟ್ಟಿಗರು ಕ್ಯೂಟ್ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಐಐಎಮ್ನ ಆಡಳಿತ ಮಂಡಳಿಯು ಸಹ ಅಪರೂಪದ ದೃಶ್ಯವನ್ನು ತಮ್ಮ ಕ್ಯಾಂಪಸ್ನಲ್ಲಿ ನೋಡಿ ಸೊಗಸಾಗಿದೆ ಎಂಬ ಪ್ರತಿಕ್ರಿಯೆ ನೀಡಿದ್ದಾರೆ.
New residents on @IIMAhmedabad campus. ? pic.twitter.com/2xPR3RiS58
— Anish Sugathan (@anishsugathan) August 27, 2021
ಇದನ್ನೂ ಓದಿ:
ಆಮೆಯೊಂದು ಹಕ್ಕಿಯನ್ನು ಹಿಡಿದು ಕೊಂದ ದೃಶ್ಯ ಮೊಟ್ಟ ಮೊದಲ ಬಾರಿಗೆ ಸೆರೆ; ಅಪರೂಪದ ವಿಡಿಯೋ ವೈರಲ್
ಕೆಲಸ ಕಳೆದುಕೊಂಡ ಯುವಕನ ಸ್ವಂತ ಉದ್ಯಮ; ಅಪರೂಪದ ಕಡಕ್ನಾಥ್ ಕೋಳಿ ಸಾಕಣೆಯಿಂದ ಲಕ್ಷ ಲಕ್ಷ ಸಂಪಾದನೆ
(Dug walk with her ducklings in IIM ahmedabad campus viral video in social media)
Published On - 9:57 am, Sun, 29 August 21