ಕೆಲಸ ಕಳೆದುಕೊಂಡ ಯುವಕನ ಸ್ವಂತ ಉದ್ಯಮ; ಅಪರೂಪದ ಕಡಕ್​ನಾಥ್ ಕೋಳಿ ಸಾಕಣೆಯಿಂದ ಲಕ್ಷ ಲಕ್ಷ ಸಂಪಾದನೆ

ಕಡಕ್​ನಾಥ್ ಕೋಳಿ ಮಾಂಸವು ಕೊಬ್ಬಿನಾಂಶದಿಂದ ಮುಕ್ತವಾಗಿದೆ. ಅತ್ಯಧಿಕ ರೋಗನಿರೋಧಕ ಶಕ್ತಿ ಹೊಂದಿದೆ. ಇವುಗಳನ್ನು ಔಷಧ ತಯಾರಿಕೆಗೂ ಬಳಸುತ್ತಾರೆ.

ಕೆಲಸ ಕಳೆದುಕೊಂಡ ಯುವಕನ ಸ್ವಂತ ಉದ್ಯಮ; ಅಪರೂಪದ ಕಡಕ್​ನಾಥ್ ಕೋಳಿ ಸಾಕಣೆಯಿಂದ ಲಕ್ಷ ಲಕ್ಷ ಸಂಪಾದನೆ
ಅಪರೂಪದ ಖಡಕ್ ಕೋಳಿ
Follow us
TV9 Web
| Updated By: preethi shettigar

Updated on:Aug 23, 2021 | 3:39 PM

ಬೀದರ್: ಕೊರೊನಾದಿಂದ ಜಾರಿಗೆ ತಂದ ಲಾಕ್​ಡೌನ್​ ಅದೆಷ್ಟೋ ಜನರ ಬದುಕಿನ ಸ್ಥಿತಿಗತಿಯನ್ನೇ ಬದಲಾಯಿಸಿದೆ. ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಅದೆಷ್ಟೋ ಮಂದಿ ಮತ್ತೆ ಹಳ್ಳಿಗಳತ್ತ ಮರಳುವಂತಾಗಿದೆ. ಬೀದರ್ ಜಿಲ್ಲೆಯ ಯುವಕನೊರ್ವನ ಪರಿಸ್ಥಿತಿಯು ಕೂಡ ಇಂತಹದ್ದೇ ಗಿದೆ. ಖಾಸಗಿ ಕಂಪನಿಯಲ್ಲಿ ಚೆನ್ನಾಗಿ ದುಡಿದು ಬದುಕು ಕಟ್ಟಿಕೊಂಡಿದ್ದ. ಆದರೆ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು ಆತ ಮನೆಗೆ ಬಂದಿದ್ದಾನೆ. ಒಂದಿಷ್ಟು ದಿನಾ ಮನೆಯಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತುಕೊಂಡಿದ್ದು ಉಂಟು. ಆದರೆ ಚಲ ಬಿಡದ ಈ ಯುವಕ ಕೋಳಿ ಸಾಕಾಣಿಕೆ ಮಾಡುವ ಯೋಜನೆ ಮಾಡಿದ್ದಾನೆ. ಈಗ ಈ  ಕೋಳಿ ಸಾಕಾಣಿಕೆಯಿಂದ ಲಾಭ ಬರುತ್ತಿದ್ದು ಅದರಿಂದಲೇ ಸುಂದರ ಜೀವನ ಸಾಗಿಸುತ್ತಿದ್ದಾನೆ.

ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದ ಕೆಲವು ಬುಡಕಟ್ಟು ಪ್ರದೇಶದ ಆದಿವಾಸಿ ಜನಾಂಗದವರು ಮಾತ್ರ ಸಾಕುತ್ತಿದ್ದ ಕಡಕ್​ನಾಥ್ ಕೋಳಿಗಳಿಗ ಗಡೀ ಜಿಲ್ಲೆ ಬೀದರ್​ಗೂ ಬಂದಿದೆ. ಇಲ್ಲಿನ ಯುವಕ ತಮ್ಮ ಮನೆಯಂಗಳದ ಚಿಕ್ಕ ಚಿಕ್ಕ ಜಾಗದಲ್ಲಿ ಈ ಕಡಕ್​ನಾಥ್ ಕುಕ್ಕುಟಳನ್ನು ಸಾಕುತ್ತಿದ್ದು, ಲಾಭ ಗಳಿಸುತ್ತಿದ್ದಾನೆ. ಬಹಳ ಅಪರೂಪದ ಹಲವು ಆರೋಗ್ಯಕರ ಗುಣಗಳುಳ್ಳ ಈ ಕೋಳಿಗಳನ್ನು ಬೀದರ್​ನ ಪ್ರತಾಪ್ ನಗರದ ಕಮಲಾಕರ್ ತಡಕಲ್ ಎಂಬ ಯುವಕ ದೂರದ ಮಧ್ಯಪ್ರದೇಶದ ಜಾಗ್ವಾರ್ ಜಿಲ್ಲೆಯಿಂದ ತಂದಿದ್ದಾನೆ.

50 ಕಡಕ್​ನಾಥ್ ಕೋಳಿ ಮರಿಗಳನ್ನು ತಂದಿದ್ದು, ತಮ್ಮ ಮನೆಯ ಪಕ್ಕದಲ್ಲಿಯೇ ನೂರು ಅಡಿ ಉದ್ದದ ಶಡ್​ನಲ್ಲಿ ಕೋಳಿ ಮರಿಗಳನ್ನು ಸಾಕಿದ್ದಾನೆ. ಈಗ 50 ಇದ್ದ ಕೋಳಿ ಮರಿಗಳು 500ಕ್ಕೂ ಹೆಚ್ಚಾಗಿದ್ದು, ಅದರಲ್ಲಿ ಇನ್ನೂರು ಕೋಳಿಗಳನ್ನು ಕೆಜಿಗೆ ಒಂದು ಸಾವಿರದಂತೆ ಮಾರಾಟ ಮಾಡಲಾಗುತ್ತಿದೆ. ಆ ಮೂಲಕ ಈವರೆಗೆ ಮೂರುವರೆ ಲಕ್ಷದಷ್ಟು ಹಣ ಗಳಿಸಿದ್ದಾನೆ.

ಇನ್ನೂ ಒಂದು ಕೋಳಿ ಕನಿಷ್ಠವೆಂದರೂ ಆರು ತಿಂಗಳುಗಳ ಕಾಲ ಸಾಕಿದರೆ ಒಂದು ಕೋಳಿ ಎರಡರಿಂದ ಎರಡುವರೆ ಕೆಜಿಯಷ್ಟು ತೂಕ ಬರುತ್ತದೆ. ಮಾರುಕಟ್ಟೆಯಲ್ಲಿ ಎರಡು ಕೆಜಿ ತೂಕದ ಒಂದು ಕಡಕ್​ನಾಥ್ ಕೋಳಿ 1500 ರೂ. ಮಾರಾಟವಾಗುತ್ತದೆ. ಜತೆಗೆ ಇದರ ಮೊಟ್ಟೆಯೂ ಕೂಡಾ ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಹೀಗಾಗಿ ಖಡಕ್ ನಾತ್ ಕೋಳಿ ಸಾಕಾಣಿಕೆಯಿಂದ ನಷ್ಟವಿಲ್ಲ ಎಂದು ಕೋಳಿ ಸಾಕಾಣಿಕೆದಾರ ಕಮಲಾಕರ್ ತಿಳಿಸಿದ್ದಾರೆ.

ಮಧ್ಯಪ್ರದೇಶದಿಂದ ತಂದ ಕೋಳಿ ಮರಿಗೆ, ಒಂದಕ್ಕೆ  220 ರೂಪಾಯಿ ಕೊಟ್ಟಿದ್ದು, ಒಟ್ಟು 50 ಮರಿಗಳನ್ನು ತಂದಿದ್ದಾರೆ. 10 ತಿಂಗಳ ಹಿಂದೆ ತಂದಿದ್ದ ಕೋಳಿ ಮರಿಗಳು ಈಗ ದೊಡ್ಡದಾಗಿ ಮೊಟ್ಟೆಯಿಡಲು ಶುರುಮಾಡಿದೆ. ಈ ಮೊಟ್ಟೆಯನ್ನು ದೇಶಿ ಕೋಳಿಯಿಂದ ಮರಿ ಮಾಡಿಸಿ ಈಗ 500ಕ್ಕೂ ಹೆಚ್ಚು ಕೋಳಿಗಳು ಇವರ ಬಳಿ ಇವೆ.

ಕಡಕ್​ನಾಥ್ ಕೋಳಿಗಳನ್ನು ಸಾಕುವುದಕ್ಕೂ ಮುನ್ನ ಈ ಯುವಕ ಅವುಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾನೆ. ಇಂಟರ್​ನೆಟ್​ ಹಾಗೂ ವಿವಿಧ ಸಾಮಾಜಿಕ ಜಾಲತಾಣದ ಮೂಲಕ ಕಡಕ್​ನಾಥ್ ಕೋಳಿ ಸಾಕಾಣಿಕೆ ಅವುಗಳ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಈಗ ಕೋಳಿ ಸಾಕಾಣಿಕೆ ಆಂಭಿಸಿದ್ದಾರೆ.

ಕಡಕ್​ನಾಥ್ ಕೋಳಿ ಮಾಂಸವು ಕೊಬ್ಬಿನಾಂಶದಿಂದ ಮುಕ್ತವಾಗಿದೆ. ಅತ್ಯಧಿಕ ರೋಗ ನಿರೋಧಕ ಶಕ್ತಿ ಹೊಂದಿದೆ. ಇವುಗಳನ್ನು ಔಷಧ ತಯಾರಿಕೆಗೂ ಬಳಸುತ್ತಾರೆ. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು, ನರ ದೌರ್ಬಲ್ಯಕ್ಕೆ, ಅಧಿಕ ರಕ್ತದೊತ್ತಡ, ಹೃದ್ರೋಗ, ನರರೋಗ, ಪಾರ್ಶ್ವವಾಯು, ಹೀಗೇ ನಾನಾ ರೋಗದಿಂದ ಬಳಲುತ್ತಿರುವವರು ಈ ಕೋಳಿಯ ಮಾಂಸವನ್ನು ಸೇವಿಸಿದರೆ ರೋಗ ಗುಣವಾಗುತ್ತದೆಂದು ಹೇಳಲಾಗುತ್ತದೆ.

ಈ ಕೋಳಿಗಳನ್ನು ನಾಟಿ ಕೋಳಿಗಳ ಹಾಗೆಯೇ ಸಾಕಬೇಕು. ನಾಟಿ ಕೋಳಿಯ ಹಾಗೆನೇ ರೋಗಗಳು ಕೂಡಾ ಈ ಕೋಳಿಗಳಿಗೆ ಬರುವುದು ವಿರಳ. ಹೀಗಾಗಿ ಈ ಕೋಳಿಗಳನ್ನು ಸಾಕುವುದು ಕಷ್ಟವೇನಲ್ಲ. ಆರಂಭದಲ್ಲಿ ಎಳೆಯ ಮರಿಗಳಿಗೆ ಕೆಲ ಕಂಪನಿಗಳು ತಯಾರಿಸಿರುವ ಸಿದ್ಧ ಆಹಾರವನ್ನು ನೀಡಲಾಗುತ್ತದೆ. ಹಸಿ ತರಕಾರಿ, ಟೊಮ್ಯಾಟೋ, ಮೊಳಕೆಯೊಡೆದ ಗೋವಿನ ಜೋಳ, ಗೋಧಿ, ರಾಗಿ, ಜೋಳ ಇತ್ಯಾದಿಗಳನ್ನು ಮಿಕ್ಸ್ ಮಾಡಿ ಸಂಜೆ ಹೊತ್ತು ಮಾತ್ರ ಕೊಡುತ್ತಾರೆ. ಉಳಿದಂತೆ ಇವು ಹೊಲದಲ್ಲಿ ಸಾಮಾನ್ಯ ಕೋಳಿಗಳಂತೆ ಅಡ್ಡಾಡಿ ಮಣ್ಣು ಕೆದಕಿ ಹುಳ ಹುಪ್ಪಟೆ ತಿನ್ನುತ್ತವೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ: ಕೊಡಗಿನಲ್ಲಿ ಸಿಎಂ ಆದೇಶಕ್ಕೆ ಡೋಂಟ್ ಕೇರ್; ವೀಕೆಂಡ್ ಕರ್ಫ್ಯೂ ನಡುವೆ ಬೆಳಗಾವಿಯಲ್ಲಿ ನಾಟಿ ಕೋಳಿಗೆ ಮುಗಿಬಿದ್ದ ಜನ

ಕೋಲಾರ: ಕುಕ್ಕುಟೋದ್ಯಮಕ್ಕೆ ಕೊರೊನಾ ಮೂರನೇ ಅಲೆಯ ಭೀತಿ; ಕೋಳಿ ಫಾರಂ ಮಾಲೀಕರಲ್ಲಿ ಹೆಚ್ಚಿದ ಆತಂಕ

Published On - 9:55 am, Mon, 23 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ