ಒಟ್ಟಿಗೆ ಸಮಾಧಿ ಮಾಡಿದ ಜೋಡಿಯೊಂದರ 1,500 ವರ್ಷಗಳ ಹಳೆಯ ಅಸ್ಥಿಪಂಜರಗಳು ಪತ್ತೆ; ಕುತೂಹಲಕರ ವಿವರಗಳು ಇಲ್ಲಿವೆ

ಚೀನಾದಲ್ಲಿ ಪುರಾತತ್ವ ಶಾಸ್ತ್ರಜ್ಞರಿಗೆ ಜೊತೆಯಾಗಿ ಮರಣವನ್ನಪ್ಪಿದ ಜೋಡಿಗಳ ಪಳೆಯುಳಿಕೆಗಳು ಕಂಡು ಬಂದಿರುವುದು ಬಹು ಅಪರೂಪವಂತೆ. ಒಂದು ವರದಿಯ ಪ್ರಕಾರ ಇದೇ ಮೊದಲನೆಯದು. ಇದು ಉತ್ತರ ಚೀನಾದ ವೀ ರಾಜವಂಶದ ಕಾಲಘಟ್ಟದ ಪ್ರೀತಿ ಹಾಗೂ ಸಂಬಂಧದ ವ್ಯಾಖ್ಯೆಯನ್ನು ಬದಲಾಯಿಸಬಹುದೇ? ಕುತೂಹಲಕರ ವಿವರಗಳು ಇಲ್ಲಿವೆ.

ಒಟ್ಟಿಗೆ ಸಮಾಧಿ ಮಾಡಿದ ಜೋಡಿಯೊಂದರ 1,500 ವರ್ಷಗಳ ಹಳೆಯ ಅಸ್ಥಿಪಂಜರಗಳು ಪತ್ತೆ; ಕುತೂಹಲಕರ ವಿವರಗಳು ಇಲ್ಲಿವೆ
ಚೀನಾದಲ್ಲಿ ಸಿಕ್ಕಿದ ಪಳೆಯುಳಿಕೆ ಮತ್ತು ಆ ಪಳೆಯುಳಿಕೆ ಮೂಲದಲ್ಲಿ ಹೇಗಿದ್ದಿರಬಹುದು ಎಂಬ ಚಿತ್ರ (Credits: International Journal of Osteoarchaeology)
Follow us
TV9 Web
| Updated By: shivaprasad.hs

Updated on: Aug 28, 2021 | 4:10 PM

ಇತಿಹಾಸದುದ್ದಕ್ಕೂ ಜಾನಪದ, ಸಾಹಿತ್ಯ ಹಾಗೂ ಕಲೆಗಳು ತಮ್ಮ ಮೂಲಕ ಅಮರ ಪ್ರೇಮದ ಅಭಿವ್ಯಕ್ತಿಯನ್ನು ಸಾರುತ್ತಲೇ ಬಂದಿವೆ. ಆದರೆ, ಪುರಾತತ್ವ ಇಲಾಖೆಗೆ ಇದಕ್ಕೆ ಸಾಕ್ಷಿ ರೂಪದಲ್ಲಿ ನೇರವಾಗಿ ದಂಪತಿಗಳು, ಪ್ರೇಮಿಗಳು ಜೊತೆಯಲ್ಲಿರುವ ಅಸ್ತಿ ಪಂಜರಗಳು ಸಿಗುವುದು ಅಪರೂಪ. ಪ್ರಸ್ತುತ ಚೀನಾದಲ್ಲಿ 386-434 CE ಕಾಲಮಾನದ ಉತ್ತರ ವೀ ರಾಜವಂಶದ ಗಂಡು- ಹೆಣ್ಣಿನ ಅಸ್ಥಿಪಂಜರಗಳು ಕಂಡುಬಂದಿವೆ. 2020ರಲ್ಲಿ ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯವನ್ನು ಉತ್ಖನನ ಮಾಡುವಾಗ, ಕೆಲಸಗಾರರು ಅವುಗಳನ್ನು ಕಂಡುಹಿಡಿದಿದ್ದಾರೆ ಎಂದು ವಿಯಾನ್ ನ್ಯೂಸ್ ತಿಳಿಸಿದೆ.

ಈ ಅಸ್ಥಿಪಂಜರಗಳು ಪರಸ್ಪರ ಆಳವಾದ ಸಂಬಂಧ ಹೊಂದಿರುವ ದ್ಯೋತಕದಂತೆ ನಿಲುವನ್ನು ಹೊಂದಿದ್ದು, ಮಹಿಳೆಯ ಮುಖವು ಪುರುಷನ ಎದೆಗೆ ತಾಗಿಕೊಂಡಿದೆ. ಹಾಗೂ ಅವರ ಕೈಗಳು ಪರಸ್ಪರ ಬೆಸೆದಿದೆ. ಇದು ಚೀನಾದಲ್ಲಿ ದೊರೆತ ಗಂಡು- ಹೆಣ್ಣು ಜೊತೆಯಾಗಿ ಮರಣವನ್ನಪ್ಪಿದ ಮೊದಲ ಅಸ್ಥಿಪಂಜರ ಎಂದು ವರದಿಗಳು ತಿಳಿಸಿದ್ದು, ಉತ್ತರ ವೀ ರಾಜವಂಶದ ಕಾಲಘಟ್ಟದ ಪ್ರೀತಿ ಹಾಗೂ ಸಂಬಂಧದ ಕುರಿತ ಹೊಸ ಆಯಾಮವನ್ನು ತೆರೆದಿಡುವ ಸಾಧ್ಯತೆ ಇದೆ.

ಸಾಯುವ ಸಮಯದಲ್ಲಿ ಪುರುಷನಿಗೆ ಸುಮಾರು 29-35 ವರ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದ್ದು, 5 ಅಡಿ 4 ಇಂಚು ಎತ್ತರದ ನಿಲುವುಳ್ಳವನಾಗಿದ್ದಾನೆ. ಮಹಿಳೆಗೆ ಸಾಯುವ ಸಮಯದಲ್ಲಿ ಸುಮಾರು 35 ರಿಂದ 40 ವರ್ಷ ವಯಸ್ಸಾಗಿರಬಹುದು ಮತ್ತು 5’2 “ಎತ್ತರವಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅದೇ ಸಮಾಧಿಯಲ್ಲಿ ದಂಪತಿಗಳು ಹೇಗೆ ಕೊನೆಗೊಂಡರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೂ, ಇಂಟರ್ನ್ಯಾಷನಲ್ ಜರ್ನಲ್ ಆಫ್ ಆಸ್ಟಿಯೊಅರ್ಕಿಯಾಲಜಿ ಪ್ರಕಾರ, ಪತ್ನಿ ತನ್ನ ಸತ್ತ ಪತಿಯೊಂದಿಗೆ ಸಮಾಧಿ ಮಾಡಲು ತನ್ನನ್ನು ತ್ಯಾಗ ಮಾಡಿರಬಹುದು ಅಥವಾ ಬೇರೆ ಕಾರಣಗಳೂ ಇರಬಹುದು ಎನ್ನಲಾಗಿದೆ.

ಸಂಶೋಧಕರ ಪ್ರಕಾರ, ಈ ಪಳೆಯುಳಿಕೆಗಳು ಉತ್ತರ ಚೀನಾದ ಜನರ ಪ್ರೀತಿ, ಸಂಬಂಧ, ಭಾವನಾತ್ಮಕತೆ ಮೊದಲಾದವುಗಳು ಸಾಂಸ್ಕೃತಿಕ ಬದಲಾವಣೆಯಿಂದ ಹೇಗೆ ಪ್ರಭಾವಿತವಾಗಿರಬಹುದು ಎಂದು ಸೂಚಿಸುತ್ತದೆ. ‘ರಿಸರ್ಚ್​​ಗೇಟ್’ ವೆಬ್​ಸೈಟ್​ನಲ್ಲಿ ಪ್ರಕಟಿಸಿರುವಂತೆ ಚೀನಾದಲ್ಲಿ ಈ ಸಂಪ್ರದಾಯವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಪ್ರಬಾವಿತವಾಗಿರಬಹುದು ಎನ್ನಲಾಗಿದೆ.

ಇದನ್ನೂ ಓದಿ:

ವಿಶ್ವ ಅಥ್ಲೆಟಿಕ್ಸ್​ನಲ್ಲಿ ಕಂಚು ಗೆದ್ದ ಕನ್ನಡತಿ ಪ್ರಿಯಾ ಮೋಹನ್​ಗೆ ಕರ್ನಾಟಕ ಸರ್ಕಾರದಿಂದ 5 ಲಕ್ಷ ರೂ. ಪುರಸ್ಕಾರ ಘೋಷಣೆ

ಮಕ್ಕಳನ್ನು ಸವಾರಿಗೆ ಕರೆದೊಯ್ಯುತ್ತಿರುವ ತಾಯಿ ಮುಳ್ಳುಹಂದಿ; ಮುದ್ದಾದ ವಿಡಿಯೊ ನೋಡಿ

(Archaeologists Discovered 1,500-year-old Skeletons Of Couple Buried Together In Northern China)

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್