ಮದುವೆ ಮಂಟಪದಲ್ಲಿ ಗುಟ್ಕಾ ಅಗಿಯುತ್ತಿದ್ದ ವರನನ್ನು ನೋಡಿ ಕೆನ್ನೆಗೆ ಬಾರಿಸಿದ ವಧು; ವಿಡಿಯೋ ವೈರಲ್

Viral Video: ಮದುವೆಯಾಗುವ ವರ ಮಂಟಪದಲ್ಲಿ ಗುಟ್ಕಾ ಅಗೆಯುತ್ತಿದ್ದಾನೆ ಎಂದು ತಿಳಿದ ವಧು ಕೋಪಗೊಂಡಿದ್ದಾಳೆ. ಗುಟ್ಕಾವನ್ನು ಉಗುಳಿ ಬರುವಂತೆ ಸಲಹೆ ನೀಡುತ್ತಾಳೆ.

ಮದುವೆ ಮಂಟಪದಲ್ಲಿ ಗುಟ್ಕಾ ಅಗಿಯುತ್ತಿದ್ದ ವರನನ್ನು ನೋಡಿ ಕೆನ್ನೆಗೆ ಬಾರಿಸಿದ ವಧು; ವಿಡಿಯೋ ವೈರಲ್
Follow us
TV9 Web
| Updated By: shruti hegde

Updated on:Aug 30, 2021 | 2:59 PM

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಡಿಯೋಗಳ ಮಹಾಪೂರವೇ ಹರಿದು ಬರುತ್ತಿವೆ. ಕೆಲವು ವಿಡಿಯೋಗಳು ಹೆಚ್ಚು ತಮಾಷೆಯಾಗಿರುತ್ತವೆ. ನಕ್ಕು ನಕ್ಕು ಕಣ್ಣಲ್ಲೆಲ್ಲಾ ನೀರು ತುಂಬಿಕೊಳ್ಳುವಷ್ಟು ಮಜವಾಗಿರುತ್ತದೆ. ಅಂಥಹುದೆ ವಿಡಿಯೋ ಇದಾಗಿದ್ದು ಫುಲ್ ವೈರಲ್ ಆಗಿದೆ. ಮದುವೆ ಮಂಟಪದಲ್ಲಿ ವರನನ್ನು ನೋಡಿದ ವಧು ಕೆನ್ನೆಗೆ ಬಾರಿಸಿದ್ದಾಳೆ. ಕಾರಣ ಕೇಳಿ ಕೆಲವರು ಸರಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದರೆ ಇನ್ನು ಕೆಲವರು ತಮಾಷೆ ಮಾಡಿ ನಗುತ್ತಿದ್ದಾರೆ.

ವರ ಆಗಲೇ ಮದುವೆ ಮಂಟಪದಲ್ಲಿ ಬಂದಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಬಳಿಕ ವಧು ಮಂಟಪಕ್ಕೆ ಪ್ರವೇಶಿಸುತ್ತಾಳೆ. ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ವರನ ಕೆನ್ನೆಗೆ ಬಾರಿಸಿದ್ದಾಳೆ. ವಧುವಿನ ರಿಯಾಕ್ಷನ್ ನೋಡಿ ನೆಟ್ಟಿಗರು ನಗುತ್ತಿದ್ದಾರೆ. ವಿಡಿಯೋ ಸಕತ್ ವೈರಲ್ ಆಗಿದ್ದು ಕೆಲವರು ಕಾಮೆಂಟ್ ವಿಭಾಗದಲ್ಲಿ ನಗುವಿನ ಎಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆನ್ನೆಗೆ ಬಾರಿಸುತ್ತಿದ್ದಂತೆಯೇ ವರ ಎದ್ದು ಹೋಗಿ ಗುಟ್ಕಾವನ್ನು ಉಗುಳಿ ಬರುವುದನ್ನು ನೋಡಬಹುದು. ಸುತ್ತಲಿರುವ ಜನ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ದೃಶ್ಯ ಕ್ಯಾಮಾರದಲ್ಲಿ ಸೆರೆಯಾಗಿದ್ದು ಫುಲ್ ವೈರಲ್ ಆಗಿದೆ. ದೃಶ್ಯ ನಡೆದಿರುವ ಸ್ಥಳ ಎಲ್ಲಿ ಎಂಬ ಮಾಹಿತಿ ಲಭ್ಯವಾಗಿಲ್ಲ.

ಮದುವೆಯಾಗುವ ವರ ಮಂಟಪದಲ್ಲಿ ಗುಟ್ಕಾ ಅಗೆಯುತ್ತಿದ್ದಾನೆ ಎಂದು ತಿಳಿದ ವಧು ಕೋಪಗೊಂಡಿದ್ದಾಳೆ. ಗುಟ್ಕಾವನ್ನು ಉಗುಳಿ ಬರುವಂತೆ ಸಲಹೆ ನೀಡುತ್ತಾಳೆ. ನಂತರ ವರ ಎದ್ದು ಹೋಗಿ ಅಗೆಯುತ್ತಿದ್ದ ಪಾನ್​ ಉಗುಳಿ ಬಂದಿದ್ದಾನೆ. ದೃಶ್ಯಕ್ಕೆ ಮ್ಯೂಸಿಕ್ ಹೊಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ.

ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ತಮಾಷೆಯ ವಿಡಿಯೋಗಳನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಾಮೆಂಟ್ಸ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ವರ ಇನ್ನು ಮುಂದೆ ಗುಟ್ಕಾವನ್ನು ಮುಟ್ಟುವುದೂ ಇಲ್ಲ.. ಎಂದು ಓರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಹಸುವನ್ನು ಕಾರಿನಲ್ಲಿ ಕುಳಿಸಿಕೊಂಡು ರೈಡ್ ಹೊರಟ ವ್ಯಕ್ತಿ; ವಿಡಿಯೋ ವೈರಲ್​

Viral Video: ಬೇರೊಂದು ಯುವತಿ ಜತೆ ತಿರುಗಾಡುತ್ತಿದ್ದ ಗಂಡನನ್ನು ನೋಡಿದ ಹೆಂಡತಿ ಏನು ಮಾಡ್ತಾಳೆ ನೋಡಿ! ವಿಡಿಯೋ ವೈರಲ್​

(Bride slapping groom for eating gutgka video goes viral in social media)

Published On - 12:08 pm, Sun, 29 August 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ