Viral Video : ಈಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ವ್ಯಕ್ತಿ ಎರಡೂ ಕಾಲುಗಳನ್ನು ಒಂದೇಕಡೆ ಇಳಿಬಿಟ್ಟು ಹೆಲ್ಮೆಟ್ ಹಾಕಿಕೊಳ್ಳದೆ ಬೈಕ್ ಓಡಿಸುತ್ತಿದ್ದಾನೆ. ಲಕ್ಷಾಂತರ ಜನರು ತನ್ನ ಈ ವಿಡಿಯೋ ನೋಡಿ ಬೆನ್ನುತಟ್ಟುತ್ತಾರೆ ಎಂದು ಕನಸು ಕಾಣುತ್ತಿದ್ದ ಈತನಿಗೆ ಛತ್ತೀಸಗಡದ ಪೊಲೀಸರು ರೂ. 4,200 ದಂಡ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಈ ವಿಷಯವನ್ನು ದುರ್ಗದ ಪೊಲೀಸರು ತಮ್ಮ ಅಧೀಕೃತ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈತನ ಸ್ಟಂಟ್ ಮಹಾತ್ಮೆ ಮತ್ತು ದಂಡಪುರಾಣವನ್ನು ಈತನಕ 2 ಲಕ್ಷಕ್ಕೂ ಅಧಿಕ ನೆಟ್ಟಿಗರು ನೋಡಿದ್ದಾರೆ!
▪️स्टंटबाज, मोडिफाइड साइलेंसर, रैश ड्राइविंग करने वालों के विरुद्ध लगातार दुर्ग पुलिस के द्वारा कार्यवाही की जा रही है।
▪️ कृपया यातायात के नियमों का पालन करें।
▪️यातायात पुलिस व्हाट्सएप हेल्पलाइन नंबर 94791-92029।@SadakSuraksha#trafficpolicedurg #Durgpolice pic.twitter.com/5KBTs0ED2R
— Durg Police (@PoliceDurg) September 24, 2022
ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ತಕ್ಕ ಶಿಕ್ಷೆಯಾಗಿದೆ ಎಂದು ಕೆಲವರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಬಹಳ ಅದ್ಭುತವಾದ ಸ್ಟಂಟ್ ಹೀಗೇ ಮುಂದುವರಿಯಲಿ ಎಂದು ಬೆನ್ನುತಟ್ಟಿದ್ದಾರೆ.
ತನ್ನ ಈ ಸಾಹಸಮಯ ವಿಡಿಯೋ ವೈರಲ್ ಆಗಿ ತಾನು ಖ್ಯಾತಿಗೆ ಬರುತ್ತೇನೆ ಎಂದು ಬೈಕ್ ಮೇಲೆ ಹಗಲುಗನಸು ಕಾಣುತ್ತಿದ್ದ ವ್ಯಕ್ತಿಗೆ ಅಂತೂ ಪೊಲೀಸರು ಸರಿಯಾಗಿ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಪೊಲೀಸರು ಈತನನ್ನು ಸಂಪರ್ಕಿಸಿದಾಗ ಬಹುಮಾನ ಕೊಡುತ್ತಾರೆಂದು ಊಹಿಸಿದ್ದನೋ ಏನೋ!
ಒಬ್ಬರ ಸಾಹಸ ಇನ್ನೊಬ್ಬರಿಗೆ ಅಪಾಯ ತರದಂತಿರಬೇಕು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ