Video Viral: ಬೆಂಗಳೂರಿನಲ್ಲಿದೆ ಪರಿಸರ ಸ್ನೇಹಿ ಜ್ಯೂಸ್‌ ಸೆಂಟರ್​​​​; ಸೈಕಲ್‌ ಬಳಸಿ ಜ್ಯೂಸ್‌ ತಯಾರಿಕೆ

ಸೈಕಲ್‌ ಹಿಂದೆ ಮಿಕ್ಸರ್‌ ಜಾರ್‌ವೊಂದನ್ನ ಅಳವಡಿಸಲಾಗಿದ್ದು, ಅದರಲ್ಲಿ ಹಣ್ಣುಗಳನ್ನಿರಿಸಿ ಪೆಡಲ್‌ ಮಾಡಿದರೆ ಜ್ಯೂಸ್‌ ತಯಾರಾಗುತ್ತದೆ. ಇದಲ್ಲದೇ ಹಣ್ಣಿನ ಜ್ಯೂಸ್​​ ಅನ್ನು ಹಣ್ಣಿನ ತಿರುಳಿನಲ್ಲೇ ಸುರಿದು ಸರ್ವ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Video Viral: ಬೆಂಗಳೂರಿನಲ್ಲಿದೆ ಪರಿಸರ ಸ್ನೇಹಿ ಜ್ಯೂಸ್‌ ಸೆಂಟರ್​​​​; ಸೈಕಲ್‌ ಬಳಸಿ ಜ್ಯೂಸ್‌ ತಯಾರಿಕೆ
Eat Raja
Follow us
ಅಕ್ಷತಾ ವರ್ಕಾಡಿ
|

Updated on: Apr 19, 2024 | 4:05 PM

ಬೆಂಗಳೂರಿನ ಪರಿಸರ ಸ್ನೇಹಿ ‘ಈಟ್‌ ರಾಜ’ (Eat Raja) ಜ್ಯೂಸ್‌ ಅಂಗಡಿ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಇಲ್ಲಿ ಸೈಕಲ್‌ ಬಳಸಿ ಜ್ಯೂಸ್‌ ತಯಾರಿಸಲಾಗುತ್ತದೆ. ಇದಲ್ಲದೇ ಯಾವುದೇ ರೀತಿಯ ಗಾಜಿನ ಗ್ಲಾಸ್‌, ಪ್ಲಾಸ್ಟಿಕ್ ಗ್ಲಾಸ್‌ ಹಾಗೂ ಪ್ಲಾಸ್ಟಿಕ್​ ಸ್ಟ್ರಾಗಳ ಬಳಕೆಯಿಲ್ಲ. ಬದಲಾಗಿ ಜ್ಯೂಸ್​​ ತಯಾರಿಸಿದ ಹಣ್ಣಿನ ತಿರುಳಿನಿಂದಲೇ ಜ್ಯೂಸ್​​ ಸರ್ವ್ ಮಾಡಿಕೊಡಲಾಗುತ್ತದೆ. ಈ ಪರಿಸರ ಸ್ನೇಹಿ ಜ್ಯೂಸ್‌ ಸೆಂಟರ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿದೆ.

@ontheground.with.sai ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈ ಪರಿಸರ ಸ್ನೇಹಿ ಜ್ಯೂಸ್‌ ಅಂಗಡಿಯ ವಿಡಿಯೋ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗುತ್ತಿದೆ. ವಿಡಿಯೋದಲ್ಲಿ ಸೈಕಲ್‌ ಹಿಂದೆ ಮಿಕ್ಸರ್‌ ಜಾರ್‌ವೊಂದನ್ನ ಅಳವಡಿಸಲಾಗಿದ್ದು, ಅದರಲ್ಲಿ ಹಣ್ಣುಗಳನ್ನಿರಿಸಿ ಪೆಡಲ್‌ ಮಾಡಿದರೆ ಜ್ಯೂಸ್‌ ತಯಾರಾಗುತ್ತದೆ. ಇದಲ್ಲದೇ ಹಣ್ಣಿನ ಜ್ಯೂಸ್​​ ಅನ್ನು ಹಣ್ಣಿನ ತಿರುಳಿನಲ್ಲೇ ಸುರಿದು ಸರ್ವ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಈ ವೈರಲ್​​ ಜೀನ್ಸ್​​ ಪ್ಯಾಂಟ್​ ಕಂಡು ‘ಬೇಸಿಗೆಗೆ ಹೇಳಿ ಮಾಡಿಸಿದ ಜೀನ್ಸ್’​​ ಎಂದ ನೆಟ್ಟಿಗರು

ಸದ್ಯ ಏಪ್ರಿಲ್​​ 17ರಂದು ಹಂಚಿಕೊಂಡಿರುವ ಈ ವಿಡಿಯೋ ಎರಡೇ ದಿನದಲ್ಲಿ 3ಲಕ್ಷದ 67ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೇ 31ಸಾವಿರಕ್ಕೂ ಹೆಚ್ಚಿನ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಬೆಂಗಳೂರಿನ ಪರಿಸರ ಸ್ನೇಹಿ ಜ್ಯೂಸ್​ ಸೆಂಟರ್​ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ