ಹಾವಿನ ವಿಷದ ವೈರಲ್ ವೀಡಿಯೋ: ಹಾವು ಎಂಬ ಪದ ಕಿವಿಗೆ ಬಿದ್ದರೆ ಹಲವರಿಗೆ ದೇಹಕ್ಕೆ ಕಂಟಕ ಬಂದಂತೆ ಭಯವಾಗುತ್ತದೆ. ಹಾವು ಎಂದರೆ ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಭಯವೋ ಭಯ. ಹಾವಿನ ವಿಷದಿಂದಾಗಿ (Snake Venom) ಕಚ್ಚಿಸಿಕೊಂಡವರು ಪ್ರಾಣ ಕಳೆದುಕೊಳ್ಳುತ್ತಾರೆ. ಹಾಗಾಗಿ ಎಲ್ಲರಿಗೂ ಹಾವುಗಳೆಂದರೆ ಭಯ. ಹಾವು ಯಾರಿಗಾದರೂ ಕಚ್ಚಿದರೆ ಅವರ ಜೀವ ಉಳಿಸುವುದು ತುಂಬಾ ಕಷ್ಟ. ಹಾಗಾದರೆ ಹಾವಿನ ವಿಷ ನಮ್ಮ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ಸದ್ಯ ವೈರಲ್ ವಿಡಿಯೋವೊಂದು ಈ ಬಗ್ಗೆ ಹೇಳುತ್ತದೆ. ಹಾವಿನ ವಿಷವು ರಕ್ತದ (Blood) ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ವೈರಲ್ ವೀಡಿಯೊ (Trending Viral Video ) ತೋರಿಸುತ್ತದೆ. ಈ ವಿಡಿಯೋ ನೋಡಿದ ನಂತರ ನೀವೂ ಬೆರಗಾಗುತ್ತೀರಿ. ವೀಡಿಯೊವನ್ನು ನೋಡಿದ ನಂತರ ನಖಶಿಖಾಂತ ಬೆವರುವುದು ಸಹಜ.
ಈ ವೈರಲ್ ವೀಡಿಯೊದಲ್ಲಿ ಒಂದು ಪ್ರಯೋಗವನ್ನು ತೋರಿಸಲಾಗಿದೆ. ಈ ಪ್ರಯೋಗವು ಹಾವು ಮಾನವ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುತ್ತದೆ. ಈ ವೈರಲ್ ವೀಡಿಯೊದಲ್ಲಿ ತಜ್ಞರ ಸಹಾಯದಿಂದ ಗಾಜಿನ ಪಾತ್ರೆಯಲ್ಲಿ ಹಾವಿನ ವಿಷ ಸುರಿಯುತ್ತಿರುವುದನ್ನು ನೀವು ನೋಡುತ್ತೀರಿ. ಮನುಷ್ಯ ಹಾವಿನ ವಿಷವನ್ನು ಒಂದೇ ಸಮನೆ ಸುರಿಯುತ್ತಾನೆ. ಗಾಜಿನ ಪಾತ್ರೆಯು ಮೊದಲೇ ರಕ್ತದಿಂದ ತುಂಬಿರುತ್ತೆ. ಆ ರಕ್ತದಲ್ಲಿ ಹಾವಿನ ವಿಷದ ಹನಿಗಳು ಸೇರುವುದನ್ನು ನಾವು ನೋಡುತ್ತೇವೆ. ಆಗ ರಕ್ತ ಹೆಪ್ಪುಗಟ್ಟಿ ದಪ್ಪವಾಗುವುದನ್ನು ನಾವು ನೋಡಬಹುದು. ಒಂದು ಹನಿ ವಿಷವು ನಿಮ್ಮ ರಕ್ತದ ಮೇಲೆ ಎಷ್ಟು ಆಳವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ವೀಡಿಯೊದಲ್ಲಿ ನೋಡಿ.
Effect of snake venom on blood! pic.twitter.com/QDUC9I2vtg
— Learn Something (@cooltechtipz) March 7, 2024
ಈ ವೀಡಿಯೊವನ್ನು X ಖಾತೆ cooltechtipz ಹಂಚಿಕೊಂಡಿದೆ. ಈ ವೀಡಿಯೊದ ಶೀರ್ಷಿಕೆಯು “ರಕ್ತದ ಮೇಲೆ ಹಾವಿನ ವಿಷದ ಪರಿಣಾಮ” ಎಂದು ಓದುತ್ತದೆ. ಅನೇಕ ಬಳಕೆದಾರರು ವೀಡಿಯೊ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರನು ಅದನ್ನು ವೀಕ್ಷಿಸಲು ಭಯಾನಕವಾಗಿದೆ ಎಂದು ಬರೆದರೆ, ಇನ್ನೊಬ್ಬ ಬಳಕೆದಾರರು ರಕ್ತದ ಕೇಕ್ಗಳನ್ನು ವಿಷದಿಂದ ಹೆಪ್ಪುಗಟ್ಟಿದ ರಕ್ತದಿಂದ ಬದಲಾಯಿಸಿದ್ದಾರೆ ಎಂದು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರ, “ಬಾಪ್ ರೇ, ಹಾವು ಕಚ್ಚಿದಾಗ ರಕ್ತ ಹೆಪ್ಪುಗಟ್ಟುತ್ತದೆಯೇ..? ಎಂದು ಆಘಾತದಿಂದ ಬರೆದಿದ್ದಾರೆ. ಈ ವೀಡಿಯೋ ನೋಡಿದ ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೋ ನೋಡಿ ಕೆಲವರು ಅಚ್ಚರಿಗೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Fri, 8 March 24