ಗರುಡ ಪುರಾಣದಲ್ಲಿ ಬರುವ ಈ ಸಪ್ತ ಸುಪ್ತ ವಿಷಯ ಪಾಲಿಸಿದರೆ ನಿಮಗೆಂದಿಗೂ ಸೋಲು ಉಂಟಾಗುವುದಿಲ್ಲ
garuda purana: ಶತ್ರುಗಳಲ್ಲಿ ಕೆಲವರು ಸಾಮಾನ್ಯರು ಮತ್ತು ಕೆಲವರು ಅಪಾಯಕಾರಿ ಇರುತ್ತಾರೆ. ಆಗ ಅಂತಹ ಶತ್ರುಗಳನ್ನು ಜಾಣತನದಿಂದ ತಪ್ಪಿಸಿಕೊಳ್ಳಬೇಕು ಇಲ್ಲದಿದ್ದರೆ ಅವರು ನಿಮಗೆ ಯಾವಾಗ, ಎಲ್ಲಿ ಮತ್ತು ಹೇಗೆ ಹಾನಿ ಮಾಡುತ್ತಾರೆ ಎಂಬುದರ ಬಗ್ಗೆ ಯಾವುದೇ ಅಂದಾಜು/ ಸುಳಿವು ಸಹ ನಿಮಗೆ ಸಿಗುವುದಿಲ್ಲ.
ಪ್ರತಿಯೊಬ್ಬರೂ ಗರುಡ ಪುರಾಣದ (garuda purana) ಬಗ್ಗೆ ತಿಳಿದಿರಬೇಕು. ಗರುಡ ಪುರಾಣದಲ್ಲಿ ಸ್ವರ್ಗ, ನರಕ, ಪಾಪ ಮತ್ತು ಪುಣ್ಯಕ್ಕಿಂತ ಹೆಚ್ಚಿನವುಗಳಿವೆ. ಇದು ಜ್ಞಾನ, ವಿಜ್ಞಾನ, ನೀತಿ, ನಿಯಮಗಳು ಮತ್ತು ಧರ್ಮದ ಬಗ್ಗೆ ಮಾತನಾಡುತ್ತದೆ. ಗರುಡ ಪುರಾಣದಲ್ಲಿ ಒಂದು ಕಡೆ ಸಾವಿನ ರಹಸ್ಯವಿದ್ದರೆ ಇನ್ನೊಂದು ಕಡೆ ಜೀವನದ ರಹಸ್ಯ ಅಡಗಿದೆ. ಗರುಡ ಪುರಾಣದಿಂದ ನಮಗೆ ಅನೇಕ ರೀತಿಯ ಉಪದೇಶಗಳು ಸಿಗುತ್ತವೆ. ಗರುಡ ಪುರಾಣದಲ್ಲಿ ಸಾವಿನ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಈ ಪುರಾಣವು ವಿಷ್ಣುವಿನ ಭಕ್ತಿ ಮತ್ತು ಜ್ಞಾನವನ್ನು (sanatan dharm) ಆಧರಿಸಿದೆ. ಪ್ರತಿಯೊಬ್ಬ ವ್ಯಕ್ತಿಯು ಈ ಪುರಾಣವನ್ನು ಓದಬೇಕು. ಗರುಡ ಪುರಾಣವು ಹಿಂದೂ ಧರ್ಮದ (Hinduism) ಪ್ರಸಿದ್ಧ ಧಾರ್ಮಿಕ ಗ್ರಂಥಗಳಲ್ಲಿ ಒಂದಾಗಿದೆ. ಇದನ್ನು 18 ಪುರಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಗರುಡ ಪುರಾಣದಲ್ಲಿ ನಮ್ಮ ಜೀವನದ ಹಲವು ನಿಗೂಢ ವಿಷಯಗಳನ್ನು ಹೇಳಲಾಗಿದೆ. ಒಬ್ಬ ವ್ಯಕ್ತಿಯು ತಿಳಿದಿರಬೇಕಾದ ಆಸಕ್ತಿಕರ ವಿಷಯಗಳೂ ಇದರಲ್ಲಿವೆ (Death, Life)
ಸಂಯಮ ಮತ್ತು ಜಾಗರೂಕತೆ: ಜೀವನವೆಂದ ಮೇಲೆ ಮಿತ್ರರೂ ಇರುತ್ತಾರೆ, ಶತ್ರುಗಳೂ ಇರುತ್ತಾರೆ. ಶತ್ರುಗಳಿಲ್ಲದವನು ತನ್ನ ಜೀವನದಲ್ಲಿ ಏನನ್ನೂ ಮಾಡುತ್ತಿಲ್ಲ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯಾರಿಗೆ ಆಗಲಿ ಯಾವುದೇ ಸ್ನೇಹಿತರಿಲ್ಲ ಎಂದರೆ ಅದರರ್ಥ ಉದ್ದೇಶಪೂರ್ವಕವಾಗಿ ನಾವು ಶತ್ರುಗಳನ್ನು ಹೊಂದಬೇಕು ಎಂದಲ್ಲ. ನಾವು ನಮ್ಮದೇ ಆದ ರೀತಿಯಲ್ಲಿ ಬದುಕುತ್ತಿದ್ದರೂ ಶತ್ರುಗಳು ಇರುವುದು ಸಹಜ.
ಶತ್ರುಗಳಲ್ಲಿ ಕೆಲವರು ಸಾಮಾನ್ಯರು ಮತ್ತು ಕೆಲವರು ಅಪಾಯಕಾರಿ ಇರುತ್ತಾರೆ. ಅಂದರೆ ಶತ್ರುವನ್ನು ಹೃದಯಕ್ಕೆ ತೆಗೆದುಕೊಂಡಿದ್ದೇ ಆದರೆ ಜೀವನವನ್ನು ಲಘುವಾಗಿ ತೆಗೆದುಕೊಳ್ಳಬಾರದು. ಆಗ ಅಂತಹ ಶತ್ರುಗಳನ್ನು ಜಾಣತನದಿಂದ ತಪ್ಪಿಸಿಕೊಳ್ಳಬೇಕು ಇಲ್ಲದಿದ್ದರೆ ಅವರು ನಿಮಗೆ ಯಾವಾಗ, ಎಲ್ಲಿ ಮತ್ತು ಹೇಗೆ ಹಾನಿ ಮಾಡುತ್ತಾರೆ ಎಂಬುದರ ಬಗ್ಗೆ ಯಾವುದೇ ಅಂದಾಜು/ ಸುಳಿವು ಸಹ ನಿಮಗೆ ಸಿಗುವುದಿಲ್ಲ.
ಶತ್ರುಗಳನ್ನು ಎದುರಿಸಲು ಜಾಗರೂಕತೆ ಮತ್ತು ಜಾಣ್ಮೆಯನ್ನು ಆಶ್ರಯಿಸಬೇಕು ಎಂದು ಗರುಡ ಪುರಾಣದ ನೀತಿಸಾರದಲ್ಲಿ ಹೇಳಲಾಗಿದೆ. ಶತ್ರುಗಳು ನಿರಂತರವಾಗಿ ನಮಗೆ ಹಾನಿ ಮಾಡಲು ಪ್ರಯತ್ನಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಚಾಕಚಕ್ಯತೆ ತೋರದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದುದರಿಂದ ಶತ್ರುಗಳಿಗೆ ತಕ್ಕಂತೆ ನೀತಿಯನ್ನು ಉಪಯೋಗಿಸಿ ಹತೋಟಿಯಲ್ಲಿಟ್ಟುಕೊಳ್ಳಬೇಕು.
ಧರಿಸುವ ಬಟ್ಟೆ ಶುದ್ಧ ಮತ್ತು ಪರಿಮಳಯುಕ್ತವಾಗಿರಬೇಕು: ನೀವು ಶ್ರೀಮಂತ ಅಥವಾ ಅದೃಷ್ಟಶಾಲಿಯಾಗಲು ಬಯಸಿದರೆ, ನೀವು ಸ್ವಚ್ಛ, ಸುಂದರ ಮತ್ತು ಪರಿಮಳಯುಕ್ತ ಬಟ್ಟೆಗಳನ್ನು ಧರಿಸುವುದು ಮುಖ್ಯ. ಗರುಡ ಪುರಾಣದ ಪ್ರಕಾರ, ಕೊಳಕು ಬಟ್ಟೆಗಳನ್ನು ಧರಿಸಿದವರ ಅದೃಷ್ಟವು ತನ್ನಿಂತಾನೆ ನಾಶವಾಗುತ್ತದೆ.
ಕೊಳಕು ಬಟ್ಟೆ ತೊಟ್ಟವರಿರುವ ಮನೆಗೆ ಲಕ್ಷ್ಮಿ ಬರುವುದಿಲ್ಲ. ಇದರಿಂದ ಅದೃಷ್ಟವೂ ಆ ಮನೆಯಿಂದ ದೂರವಾಗುತ್ತದೆ ಮತ್ತು ಅಲ್ಲಿ ಬಡತನ ನೆಲೆಸುತ್ತದೆ. ಸಂಪತ್ತು ಮತ್ತು ಎಲ್ಲಾ ಸೌಕರ್ಯಗಳಿಂದ ಆಶೀರ್ವದಿಸಲ್ಪಟ್ಟ ಜನರು, ಆದರೆ ಇನ್ನೂ ಕೊಳಕು ಬಟ್ಟೆಗಳನ್ನು ಧರಿಸುತ್ತಾರೆ, ಅವರ ಸಂಪತ್ತು ಕ್ರಮೇಣ ನಾಶವಾಗುತ್ತದೆ ಎಂದು ಗಮನಿಸಬಹುದು. ಆದುದರಿಂದ ಮಹಾಲಕ್ಷ್ಮಿಯ ಆಶೀರ್ವಾದವು ನಮ್ಮ ಮೇಲೆ ಉಳಿಯುವಂತೆ ಆಗಬೇಕೆಂದರೆ ಶುಭ್ರವಾದ ಮತ್ತು ಸುವಾಸನೆಯ ವಸ್ತ್ರಗಳನ್ನು ಧರಿಸಬೇಕು.
ಅಭ್ಯಾಸದ ಮೂಲಕ ಜ್ಞಾನ ಸಂರಕ್ಷಣೆಯಾಗಬೇಕು: ಪ್ರಶ್ನೆ ಎಷ್ಟೇ ಕಠಿಣವಾಗಿರಲಿ ಅದು ಜ್ಞಾನ, ಬುದ್ಧಿವಂತಿಕೆ ಅಥವಾ ನೆನಪಿಡುವ ಯಾವುದಾದರೂ ಇರಲಿ, ಅದನ್ನು ಅಭ್ಯಾಸದಿಂದ ಮಾತ್ರ ಸಂರಕ್ಷಿಸಬಹುದು. ಅಭ್ಯಾಸವನ್ನು ಮುಂದುವರಿಸುವ ಮೂಲಕ ಯಾರೇ ಆಗಲಿ ನಿರ್ದಿಷ್ಟ ಜ್ಞಾನದಲ್ಲಿ ಪ್ರಾವೀಣ್ಯತೆಯನ್ನು ಪಡೆಯುತ್ತಾನೆ. ಅದನ್ನು ಎಂದಿಗೂ ಮರೆಯುವುದಿಲ್ಲ.
ಕಾಲಕಾಲಕ್ಕೆ ಆಗಾಗ್ಗೆ ಅಭ್ಯಾಸ ಮಾಡುವ ಮೂಲಕ ಜಡಮತಿಯೂ ಸುಜ್ಞಾನಿ ಆಗಬಹುದು. ನಿರಂತರ ಅಭ್ಯಾಸದಿಂದ ಮೂರ್ಖ ವ್ಯಕ್ತಿಯೂ ಬುದ್ಧಿವಂತನಾಗಬಹುದು.
ಅಭ್ಯಾಸವಿಲ್ಲದೆ ಜ್ಞಾನ ನಾಶವಾಗುತ್ತದೆ. ಕಾಲಕಾಲಕ್ಕೆ ಜ್ಞಾನ ಅಥವಾ ಬುದ್ಧಿವಂತಿಕೆಯನ್ನು ಅಭ್ಯಾಸ ಮಾಡದಿದ್ದರೆ, ಅದು ಮರೆತುಹೋಗುತ್ತದೆ. ಗರುಡ ಪುರಾಣದ ಪ್ರಕಾರ ನಾವು ಏನನ್ನು ಓದಿದರೂ ಅದನ್ನು ಒಮ್ಮೆ ಅಭ್ಯಾಸ ಮಾಡಬೇಕು ಎಂಬುದನ್ನು ಎಚ್ಚರಿಸುತ್ತದೆ, ನೆನಪಿಸುತ್ತದೆ. ಆದ್ದರಿಂದ ಅಂತಹ ಜ್ಞಾನವು ನಮ್ಮ ಮೆದುಳಿನಲ್ಲಿ ಚೆನ್ನಾಗಿ ಕ್ರೋಢೀಕರಿಸಲ್ಪಡುತ್ತದೆ.
ಆರೋಗ್ಯಕರ ದೇಹ: ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಮಾತ್ರ ಯಾರೇ ಆಗಲಿ ನಿರೋಗಿ ದೇಹವನ್ನು ಹೊಂದಬಹುದಾಗಿದೆ. ವ್ಯಕ್ತಿಯು ಸಂತುಲಿತ ಆಹಾರದಿಂದ ಆರೋಗ್ಯವನ್ನು ಪಡೆಯುತ್ತಾನೆ ಮತ್ತು ಆಹಾರ ವ್ಯತ್ಯಯದಿಂದ ಯಾರೇ ಆಗಲಿ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಆಹಾರವು ನಮ್ಮ ದೇಹದ ಮೂಲಮಂತ್ರವಾಗಿದೆ.
ನಾವು ಅಸಮತೋಲಿತ ಆಹಾರವನ್ನು ಸೇವಿಸುವುದರಿಂದ ಬಹಳಷ್ಟು ರೋಗಗಳು ನಮ್ಮನ್ನು ಕಾಡುತ್ತವೆ. ಇದರಿಂದಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ನಾವು ಯಾವಾಗಲೂ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಅಂತಹ ಆಹಾರದಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹವು ಆಹಾರದಿಂದ ಪೂರ್ಣ ಶಕ್ತಿಯನ್ನು ಪಡೆಯುತ್ತದೆ. ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ ಮತ್ತು ಈ ಕಾರಣದಿಂದಾಗಿ ನಾವು ರೋಗಗಳಿಂದ ರಕ್ಷಿಸಲ್ಪಡುತ್ತೇವೆ.
ಏಕಾದಶಿ ಉಪವಾಸ: ಏಕಾದಶಿ ಉಪವಾಸವನ್ನು ಧರ್ಮಗ್ರಂಥಗಳು ಮತ್ತು ಪುರಾಣಗಳಲ್ಲಿ ಅತ್ಯುತ್ತಮವೆಂದು ವಿವರಿಸಲಾಗಿದೆ. ಇದರ ಮಹಿಮೆಯನ್ನು ಗರುಡನಲ್ಲಿ ವಿಸ್ತಾರವಾಗಿ ವಿವರಿಸಲಾಗಿದೆ. ಏಕಾದಶಿ ಉಪವಾಸವನ್ನು ಆಚರಿಸುವ ವ್ಯಕ್ತಿಯು ಎಲ್ಲಾ ತೊಂದರೆಗಳಿಂದ ಸುರಕ್ಷಿತವಾಗಿರುತ್ತಾನೆ. ಆ ಉಪವಾಸದ ಲಾಭವನ್ನು ಅವನು ಖಂಡಿತವಾಗಿ ಪಡೆಯುತ್ತಾನೆ.
ಏಕಾದಶಿ ಉಪವಾಸವನ್ನು ಆಚರಿಸಲು ಕೆಲವು ನಿಯಮಗಳಿವೆ. ನಿಯಮಾನುಸಾರ ಈ ಉಪವಾಸವನ್ನು ಆಚರಿಸಬೇಕು. ಈ ದಿನ ಹಣ್ಣುಗಳನ್ನು ಮಾತ್ರ ತೆಗೆದುಕೊಳ್ಳಬೇಕು. ಯಾವುದೇ ರೀತಿಯ ವ್ಯಸನಕ್ಕೆ ಒಳಗಾಗಬಾರದು, ಆಗ ಮಾತ್ರ ಈ ಉಪವಾಸವು ಫಲಿತಾಂಶವನ್ನು ನೀಡುತ್ತದೆ. ಜ್ಯೋತಿಷಿಗಳ ಪ್ರಕಾರ ಉಪವಾಸ ಮಾಡುವುದರಿಂದ ಚಂದ್ರನ ಯಾವುದೇ ಕೆಟ್ಟ ಪರಿಣಾಮ ನಿವಾರಣೆಯಾಗುತ್ತದೆ.
ತುಳಸಿಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ: ಆದಾಗ್ಯೂ, ಗರುಡ ಪುರಾಣವನ್ನು ಹೊರತುಪಡಿಸಿ, ತುಳಸಿಯ ಮಹತ್ವವನ್ನು ಇತರ ಅನೇಕ ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ. ತುಳಸಿಯನ್ನು ಮನೆಯಲ್ಲಿ ಇಡುವುದರಿಂದ ಎಲ್ಲಾ ರೀತಿಯ ಕಾಯಿಲೆಗಳಿಂದ ಪರಿಹಾರ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ವ್ಯಕ್ತಿ ಯಾವುದೇ ಕಾಯಿಲೆಯಿಂದ ಬಳಲುವುದಿಲ್ಲ.
ನಿಮ್ಮ ಮನೆಯಲ್ಲಿ ತುಳಸಿ ಗಿಡಕ್ಕೆ ಜಾಗ ಮತ್ತು ನೀರು ಕೊಡುವುದರಿಂದ ಮುಚ್ಚಿಹೋಗಿರುವ ದಾರಿಗಳು ತೆರೆದುಕೊಳ್ಳುತ್ತವೆ. ಇವುಗಳನ್ನು ದೇವರ ನೈವೇದ್ಯವಾಗಿ ಸೇವಿಸುವುದರಿಂದ ಶಾರೀರಿಕ ಮತ್ತು ಮಾನಸಿಕ ಎಲ್ಲಾ ಅಸ್ವಸ್ಥತೆಗಳು ಗುಣವಾಗುತ್ತವೆ. ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ದೇವಸ್ಥಾನ ಮತ್ತು ಧರ್ಮವನ್ನು ಗೌರವಿಸಿ: ಯಾವುದೇ ದೇವರು, ದೇವತೆ ಅಥವಾ ಧರ್ಮವನ್ನು ಅವಮಾನಿಸಿದವರು ಜೀವನದಲ್ಲಿ ಒಂದು ದಿನ ಪಶ್ಚಾತ್ತಾಪ ಪಡಬೇಕು ಮತ್ತು ನರಕಕ್ಕೆ ಹೋಗಬೇಕಾಗುತ್ತದೆ. ಗರುಡ ಪುರಾಣದಲ್ಲಿ ಅಂತಹ ಜನರ ಬಗ್ಗೆ ಬಹಳಷ್ಟು ಬರೆಯಲಾಗಿದೆ.
ಗರುಡ ಪುರಾಣದ ಪ್ರಕಾರ ಪವಿತ್ರ ಸ್ಥಳಗಳಲ್ಲಿ (ದೇವಾಲಯಗಳು ಇತ್ಯಾದಿಗಳಲ್ಲಿ) ಕೊಳಕು ಕೆಲಸ ಮಾಡುವವರು, ಒಳ್ಳೆಯ ಜನರನ್ನು ವಂಚಿಸುವವರು, ಯಾರನ್ನಾದರೂ ತಮ್ಮ ಪರವಾಗಿ ದುರುಪಯೋಗಪಡಿಸಿಕೊಳ್ಳುವವರು ಮತ್ತು ದುರ್ಬಳಕೆ ಮಾಡುವವರು, ಧರ್ಮ, ವೇದಗಳು, ಪುರಾಣಗಳು ಮತ್ತು ಶಾಸ್ತ್ರಗಳ ಅಸ್ತಿತ್ವವನ್ನು ಪ್ರಶ್ನಿಸುವವರನ್ನು ನರಕದಿಂದ ಯಾರೂ ರಕ್ಷಿಸಲು ಸಾಧ್ಯವಿಲ್ಲ.
Published On - 6:06 am, Fri, 8 March 24