ತುಮ್​ ಹೀ ಆನಾ; ರೈಲಿನಲ್ಲಿ ಹಾಡುತ್ತಿರುವ ಈ ಹಿರಿಯರ ವಿಡಿಯೋ ವೈರಲ್; ಕುನಾಲ್​ ವರ್ಮಾ ಪ್ರತಿಕ್ರಿಯೆ

Viral Video : ಜುಬಿನ್​ ನೌಟಿಯಾಲ್ ಅವರ ‘ತುಮ್​ ಹೀ ಆನಾ’ ಎಂಬ ಚಿತ್ರಗೀತೆಯನ್ನು ಈ ಹಿರಿಯರು ಹಾಡಿದ್ದಾರೆ. ‘ನನ್ನ ಸಾಲುಗಳಿಗೆ ಇಷ್ಟೊಂದು ಪ್ರೀತಿಯನ್ನು ಧಾರೆ ಎರೆದಿದ್ದಕ್ಕೆ ನಿಮಗೆ ಧನ್ಯವಾದ’ ಎಂದಿದ್ದಾರೆ ಗೀತರಚನಕಾರ ಕುನಾಲ್​ ವರ್ಮಾ.

ತುಮ್​ ಹೀ ಆನಾ; ರೈಲಿನಲ್ಲಿ ಹಾಡುತ್ತಿರುವ ಈ ಹಿರಿಯರ ವಿಡಿಯೋ ವೈರಲ್; ಕುನಾಲ್​ ವರ್ಮಾ ಪ್ರತಿಕ್ರಿಯೆ
ರೈಲಿನಲ್ಲಿ ಹಾಡುತ್ತಿರುವ ಈ ಹಿರಿಯರು
Edited By:

Updated on: Dec 10, 2022 | 1:06 PM

Viral Video : ರೈಲು ತನ್ನ ಪಾಡಿಗೆ ತಾನು ಚಲಿಸುತ್ತಿರುವಾಗ ಪ್ರಯಾಣಿಕರು ತಮ್ಮ ಜಗತ್ತಿನಲ್ಲಿ ಇರುವಾಗ ಹೀಗೆ ಒಂದುಹಾಡು ತೇಲಿಬಂದರೆ ಹೇಗಿರುತ್ತದೆ? ಈ ವೃದ್ಧರು ಜುಬಿನ್​ ನೌಟಿಯಾಲ್ ಅವರ ‘ತುಮ್​ ಹೀ ಆನಾ’ ಎಂಬ ಚಿತ್ರಗೀತೆಯನ್ನು ಹಾಡಿದ್ದಾರೆ. ಅಲ್ಲಿದ್ದವರೆಲ್ಲ ಇವರೊಂದಿಗೆ ಗುನಗುನಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಅನ್ನು 1 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 14.5 ಲಕ್ಷ ಜನ ಇಷ್ಟಪಟ್ಟಿದ್ದಾರೆ.

ಈ ವಿಡಿಯೋ ಅನ್ನು ಸ್ನೇಹಾ ಗಂಗಾರಾಮ್ ಘರತ್ ಎನ್ನುವವರು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಈ ವಯಸ್ಸಿನಲ್ಲಿಯೂ ಅವರು ಹೀಗೆ ಹಾಡುತ್ತಿದ್ದಾರೆ ಎಂದರೆ ಅವರಿಗೆ ಸಂತೋಷದ ಗುಟ್ಟು ತಿಳಿದಿದೆ ಎನ್ನುತ್ತಿದ್ದಾರೆ ನೆಟ್ಟಿಗರು. 2019ರಲ್ಲಿ ಬಿಡುಗಡೆಯಾದ ಮಿಲಾಪ್​ ಝವೇರಿ ನಿರ್ದೇಶನದ ‘ಮರ​ಜಾಂವಾ’ ಸಿನೆಮಾದ ಹಾಡು ಇದಾಗಿದೆ. ಈ ಹಾಡಿನ ಸಾಹಿತ್ಯ ಬರೆದ ಕುನಾಲ್​ ವರ್ಮಾ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಸಾಲುಗಳಿಗೆ ಇಷ್ಟೊಂದು ಪ್ರೀತಿಯನ್ನು ಧಾರೆ ಎರೆದಿದ್ದಕ್ಕೆ ನಿಮಗೆ ಧನ್ಯವಾದ ಎಂದಿದ್ದಾರೆ.

ಅಜ್ಜನಿಗೆ ಹಳೆಯ ದಿನಗಳ ನೆನಪು ಕಾಡುತ್ತಿದೆ ಅನ್ನಿಸುತ್ತದೆ ಎಂದಿದ್ದಾರೆ ಒಬ್ಬರು. ಇವರಿಗೆ ಯಾವುದೋ ಹಳೆಯ ನೋವು ಬಾಧಿಸುತ್ತಿದೆ ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಬಹಳ ಚೆನ್ನಾಗಿ ಹಾಡಿದ್ದೀರಿ ಅಜ್ಜ ಎಂದು ಅನೇಕರು ಹೇಳಿದ್ದಾರೆ.

ಈ ಹಾಡನ್ನು ಕೇಳಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

 

Published On - 1:03 pm, Sat, 10 December 22