
ನವರಾತ್ರಿ (Navaratri) ಹಬ್ಬದ ಸಂಭ್ರಮ ಜೋರಾಗಿದೆ. ಈ ಹಬ್ಬದ ಸಂದರ್ಭ ಕೆಲವೆಡೆ ಗೊಂಬೆ ಕೂರಿಸಿದರೆ, ಕೆಲವೆಡೆ ದೇವಿಯ ಮೂರ್ತಿ ಇಟ್ಟು ಪೂಜೆ ಮಾಡಿ ದೇವಿಯನ್ನು ಆರಾಧಿಸುತ್ತಾರೆ. ಆದರೆ ಗುಜರಾತಿನಲ್ಲಿ ನವರಾತ್ರಿಯ ದಿನಗಳಲ್ಲಿ ದುರ್ಗಾಪೂಜೆಯೊಂದಿಗೆ ರಾತ್ರಿಯ ವೇಳೆ ದಾಂಡಿಯಾ ಹಾಗೂ ಗಾರ್ಬಾ ನೃತ್ಯ ಪ್ರದರ್ಶಿಸುವುದು ಬಹಳ ವಿಶೇಷ. ಆದರೆ ಇಳಿವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹದೊಂದಿಗೆ ವೃದ್ಧ ದಂಪತಿಯ (elderly couple) ಅದ್ಭುತವಾಗಿ ದಾಂಡಿಯಾ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ವಿಶೇಷ ಹಾಗೂ ಆಕರ್ಷಕ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಿತ್ತಲ್ ಜೈನ್ (mittal.jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ನನ್ನ 70ರ ದಶಕವನ್ನು ಹೀಗೆಯೇ ಪ್ರದರ್ಶಿಸುತ್ತಿದ್ದೇನೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ವೃದ್ಧ ದಂಪತಿ ಸಾಂಪ್ರಾದಾಯಿಕ ಗಾರ್ಬಾ ಉಡುಗೆ ಧರಿಸಿ ದಾಂಡಿಯಾ ನೃತ್ಯ ಪ್ರದರ್ಶಿಸುವುದನ್ನು ಕಾಣಬಹುದು. ಇಳಿ ವಯಸ್ಸಿನಲ್ಲಿ ಈ ಜೋಡಿಯಲ್ಲಿ ಬತ್ತದ ಉತ್ಸಾಹವನ್ನು ಕಾಣಬಹುದು. ಈ ವಿಡಿಯೋ ವೃದ್ಧ ದಂಪತಿ ದಾಂಡಿಯಾ ನೃತ್ಯ ಪ್ರದರ್ಶಿಸಿರುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಅಲ್ಲೇ ಇದ್ದವರು ನೃತ್ಯ ಮಾಡಲು ಜೊತೆ ಸೇರುತ್ತಾರೆ.
ಇದನ್ನೂ ಓದಿ:Video: ಮೆಟ್ರೋದಲ್ಲಿ ಕಂಡ ಅಪರೂಪದ ದೃಶ್ಯ; ಗಂಡನ ಮಡಿಲಿನಲ್ಲಿ ವಿಶ್ರಾಂತಿ ಪಡೆದ ವೃದ್ಧೆ
ಈ ವಿಡಿಯೋ 4.2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನನಗೂ ಇಂತಹ ಎನರ್ಜಿ ಬೇಕು ಎಂದಿದ್ದಾರೆ. ಇನ್ನೊಬ್ಬರು, ಈ ಹೃದಯಕ್ಕೆ ಹತ್ತಿರವಾದ ವಿಡಿಯೋ, ಎನರ್ಜಿ ಲೆವೆಲ್ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಇವರು 80 ರ ಆಸುಪಾಸಿನವರಾಗಿದ್ದೀರಬಹುದು, ಆದರೆ ಎನರ್ಜಿ ಮಾತ್ರ ಬೆಂಕಿನೇ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ