ಹುಲಿಗಳು ಕಾಡಿನ ಅತ್ಯಂತ ಅಪಾಯಕಾರಿ ಪರಭಕ್ಷಕ ಪ್ರಾಣಿಗಳು. ಅವುಗಳು ಕಾಡಿನ ಇತರ ಪ್ರಾಣಿಗಳನ್ನು ತನ್ನ ಆಹಾರಕ್ಕಾಗಿ ಬೇಟೆಯಾಡುತ್ತವೆ. ಇಂತಹ ಧೈರ್ಯಶಾಲಿ ಪ್ರಾಣಿ ಆನೆಗಳೊಂದಿಗೆ ಸೆನೆಸಾಡಲು ಹೋಗುವುದಿಲ್ಲ. ಹುಲಿಗಳು ಗಜರಾಜನಿಗೆ ಭಯಪಟ್ಟು ಅವುಗಳಿಂದ ಆದಷ್ಟು ದೂರವಿರುತ್ತವೆ. ಹೀಗೆ ಹುಲಿ, ಸಿಂಹಗಳಂತಹ ಬಲಶಾಲಿ ಪ್ರಾಣಿಗಳು ಆನೆಗೆ ಭಯಪಡುವಂತಹ ಹಾಗೂ ಪ್ರಾಣಿ ಸಾಮ್ರಾಜ್ಯದ ಇನ್ನಿತರ ಕುತೂಹಲಕಾರಿ ವೀಡಿಯೋಗಳನ್ನು ಭಾರತೀಯ ಅರಣ್ಯ ಅಧಿಕಾರಿ ಸುಸಾಂತ ನಂದಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಇದೇ ರೀತಿಯಲ್ಲಿ ಕೆರೆಯ ಬಳಿ ನೀರು ಕುಡಿಯಲು ಬಂದ ಹುಲಿಯನ್ನು ಗಜರಾಜ ಅಟ್ಟಾಡಿಸಿಕೊಂಡು ಹೋಗುವ ವೀಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ.
ವೈರಲ್ ವೀಡಿಯೋವನ್ನು ಭಾರತೀಯ ಅರಣ್ಯ ಅಧಿಕಾರಿ ಸುಸಾಂತ ನಂದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಹುಲಿಗಳು ಮತ್ತು ಆನೆಗಳು ಕಾಡಿನಲ್ಲಿ ಪರಸ್ಪರ ಹೊಂದಿಕೊಂಡು ಜೀವಿಸುತ್ತವೆ. ಆದರೆ ಕೆಲವೊಮ್ಮೆ ದೈತ್ಯ ಆನೆ ರಾಜ ಯಾರೆಂಬುದನ್ನು ತೋರಿಸುತ್ತದೆ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಹಾಗೂ ಹಿನ್ನೆಲೆಯಲ್ಲಿ ವೀಡಿಯೋ ಚಿತ್ರೀಕರಣ ಮಾಡುತ್ತಾ ಪ್ರವಾಸಿಗರು ಮಾತನಾಡುವುದನ್ನು ಕೇಳಬಹುದು. ಇಂತಹ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಮೊಬೈಲ್ ನಿಷೇಧಿಸಬೇಕೆ? ಎಂದು ಕೇಳಿದ್ದಾರೆ.
Tigers and elephants tolerate each other fairly well in the wild.
But at times gentle giant shows who the boss is?You can hear mobile calls in the background. Disgusting. Should mobiles be banned in side the Protected areas ? pic.twitter.com/7xWQAsfmbB
— Susanta Nanda (@susantananda3) June 13, 2023
ಇದನ್ನೂ ಓದಿ:Viral Video: ನನ್ನದೊಂದು ಅಳಿಲು ಸೇವೆ ಎಂದು ಮನೆ ಮಾಲೀಕನ ಜೊತೆಗೆ ಗೋವಿಗೆ ಹುಲ್ಲು ತಂದ ಶ್ವಾನ
ವೀಡಿಯೋದಲ್ಲಿ ಸಣ್ಣ ಕೆರೆಯೊಂದರ ಬಳಿ ಆನೆಯೊಂದು ನೀರು ಕುಡಿಯುತ್ತಾ ನಿಂತಿರುತ್ತದೆ. ಇತ್ತ ಕಡೆ ಕಾಡಿನಲ್ಲಿ ಬೇಟೆಯಾಡಿ ಸುಸ್ತಾಗಿ ಬಾಯಾರಿಕೆ ನೀಗಿಸಿಕೊಳ್ಳಲು ಹುಲಿ ಅದೇ ಕರೆಯ ಬಳಿಗೆ ಬರುತ್ತದೆ. ಆನೆಯನ್ನು ಕಂಡು ತುಸು ಮೆಲ್ಲನೆ ಹೆಜ್ಜೆಯನ್ನಿಡುತ್ತಾ ಹುಲಿರಾಯ ಬರುತ್ತೆ. ಆದರೆ ಹುಲಿ ಬರುವುದನ್ನು ಆನೆ ಮೊದಲೇ ಗಮನಿಸಿದೆ. ನಾನಿರುವ ಸ್ಥಳದಲ್ಲಿ ನೀನು ನೀರು ಕುಡಿಯುತ್ತೀಯಾ ಎಂದು ಕೋಪಗೊಂಡ ಗಜರಾಜ ಹುಲಿಯನ್ನು ಓಡಿಸಿಕೊಂಡು ಹೋಗುವ ದೃಶ್ಯಾವಳಿಯನ್ನು ಕಾಣಬಹುದು.
ಟ್ವಿಟರ್ನಲ್ಲಿ ಜೂನ್ 13ರಂದು ಹಂಚಿಕೊಳ್ಳಲಾದ ಈ ವೀಡಿಯೊ 49.9 ಸಾವಿರ ವೀಕ್ಷಣೆಗಳನ್ನು ಹಾಗೂ 1.3 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಈ ವೀಡಿಯೊವನ್ನು ನೋಡಿ ಅನೇಕರು ಕಮೆಂಟ್ಸ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಪ್ರಕೃತಿಯು ಶಕ್ತಿಯ ಸಮತೋಲನವನ್ನು ಚೆನ್ನಾಗಿ ನಿರ್ವಹಿಸುತ್ತಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ವಾಹನಗಳು ಕಾಡು ಪ್ರಾಣಿಗಳಿಗೆ ತುಂಬಾ ಹತ್ತಿರದಲ್ಲಿರುವಂತಿದೆ, ಹಾಗಾಗಿ ಪ್ರಾಣಿಗಳಿಗೆ ತೊಂದರೆಯಾಗದಂತೆ ಆದಷ್ಟು ಅಂತರವನ್ನು ಕಾಪಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ. ಇನ್ನೂ ಅನೇಕರು ಸುಸಾಂತ ನಂದ ಅವರು ಕೇಳಿದ ಪ್ರಶ್ನೆಗೆ ಹೌದು ಅರಣ್ಯದಲ್ಲಿ ಪ್ರವಾಸಿಗರು ಮೊಬೈಲ್ ಬಳಕೆ ಮಾಡುವುದನ್ನು ನಿಷೇಧಿಸಬೇಕು. ಕನಿಷ್ಟ ಪಕ್ಷ ಪ್ರವಾಸಿಗರು ಇಂತಹ ಸ್ಥಳದಲ್ಲಿ ಮೊಬೈಲ್ನ್ನು ಫೈಟ್ ಮೋಡ್ನಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ