AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದ್ದು ಇದು ವಿಡಿಯೋ ಅಂದ್ರೆ.. ಬಲ್ ಮಜಾ ಇದೆ ನೀವೂ ನೋಡೀ

ವೈರಲ್ ವಿಡಿಯೋ: ಮಗುವಿನೊಂದಿಗೆ ಆನೆಯೊಂದು ಸಖತ್ ಡ್ಯಾನ್ಸ್ ಮಾಡಿದೆ. ಇದ್ದು ಇದು.. ವೈರಲ್ ವಿಡಿಯೋ ಅಂದ್ರೆ. ನೋಡಿದ ಮೇಲೆ ನೀವೂ ಸೋ ಸ್ವೀಟ್​ ಅಂತೀರಿ! ಮಗುವಿನ ತಾಳಕ್ಕೆ ತಕ್ಕಂತೆ ತಲೆ ಅಲ್ಲಾಡಿಸಿರುವ ಈ ಮುದ್ದಾದ ಆನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

Viral Video: ಇದ್ದು ಇದು ವಿಡಿಯೋ ಅಂದ್ರೆ.. ಬಲ್ ಮಜಾ ಇದೆ ನೀವೂ ನೋಡೀ
ಇದ್ದು ಇದು ವಿಡಿಯೋ ಅಂದ್ರೆ.. ಬಲ್ ಮಜಾ ಇದೆ ನೀವೂ ನೋಡೀ
TV9 Web
| Edited By: ಸಾಧು ಶ್ರೀನಾಥ್​|

Updated on:Aug 25, 2022 | 8:37 PM

Share

Elephant- Girl Viral Video: ಆನೆಗಳು ಮನುಷ್ಯರ ಜೊತೆ ಪ್ರೀತಿಯಿಂದ ವರ್ತಿಸುವುದನ್ನು ನಾವು ಆಗಾಗ ನೋಡುತ್ತೇವೆ.. ಆನೆಗಳು ತಮ್ಮ ಯಜಮಾನನ ಪ್ರಾಣ ಉಳಿಸುವ, ಆನೆಗಳೊಂದಿಗೆ ಮನುಷ್ಯರೂ ಅತ್ಯಂತ ಪ್ರೀತಿಯಿಂದ ವರ್ತಿಸುವ ಮತ್ತು ಕೆಲವೊಮ್ಮೆ ಮುದ್ದಾದ ಮರಿಗಳಂತೆ ವರ್ತಿಸುವ ಆನೆ-ಮನುಷ್ಯರ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಆನೆಯೊಂದು (Elephant) ಬಾಲಕಿಯೊಂದಿಗೆ (Girl) ಆಟವಾಡುವ ವಿಡಿಯೋವೊಂದು ಇದೀಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಅಂತರ್ಜಾಲ ವೇದಿಕೆಯಲ್ಲಿ ನೆಟಿಜನ್‌ಗಳನ್ನು ಆಕರ್ಷಿಸುತ್ತಿರುವ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ (Instagram) ಶೇರ್ ಮಾಡಲಾಗಿದೆ. ಅದಕ್ಕೆ “ಲವ್ ಲವ್ ಲವ್ ಲವ್ ಯು ಆನೇಸ್” ಎಂಬ ಪ್ರೀತಿಯ ಶೀರ್ಷಿಕೆಯನ್ನು ನೀಡಲಾಗಿದೆ. ವಿಡಿಯೋ ಈಗ ವೈರಲ್ ಆಗಿದ್ದು, 7.2 ಮಿಲಿಯನ್ ವೀಕ್ಷಣೆಗಳು ಮತ್ತು 456 ಸಾವಿರ ಲೈಕ್‌ಗಳನ್ನು ಪಡೆದಿದೆ.

ಈ ವೈರಲ್ ಕ್ಲಿಪ್‌ನಲ್ಲಿ, ಹುಡುಗಿಯೊಬ್ಬಳು ಆನೆ ಮತ್ತು ಅದರ ಮಾವುತನ ಮುಂದೆ ನಿಂತಿದ್ದಾಳೆ. ನಂತರ ಹುಡುಗಿ ಆನೆಯ ಮುಂದೆ ನಿಂತು ಸುಖಾಸುಮ್ಮನೆ ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ತನ್ನ ಕೈ ಮತ್ತು ಕಾಲುಗಳನ್ನು ಅಲ್ಲಾಡಿತ್ತಾಳೆ ಮತ್ತು ಸಂತೋಷದಿಂದ ನೃತ್ಯ ಮಾಡುತ್ತಾಳೆ. ಆಶ್ಚರ್ಯವೆಂದರೆ ಆ ಬಾಲಕಿ ಡ್ಯಾನ್ಸ್ ಮಾಡಿದ್ದನ್ನು ಕಂಡು ಆನೆ ಕೂಡ ಆ ನೃತ್ಯಕ್ಕೆ ತಕ್ಕಂತೆ ಒಂದಷ್ಟು ಕಾಲು-ದೇಹ ಅಲ್ಲಾಡಿಸುತ್ತಾ… ತನ್ನ ತಲೆ ಮತ್ತು ಅಗಲವಾದ ಕಿವಿಗಳನ್ನು ಚಲಿಸುತ್ತಾ ಆ ಹುಡುಗಿಯನ್ನು ಅನುಕರಿಸಲು ಪ್ರಾರಂಭಿಸಿತು. ಆನೆ ತನ್ನ ಕಿವಿಗಳನ್ನು ಸರಿಸಿ, ತಲೆಯನ್ನು ಅತ್ತ ಕಡೆ ತಿರುಗಿಸುವುದು ಸುಂದರವಾಗಿ ಕಾಣುತ್ತಿತ್ತು. ಮನಸಿಗೆ ಮುದ ನೀಡುವಂತಿತ್ತು -Cuteness Overloaded.

ತುಂಬಾ ಮುದ್ದಾಗಿದೆ! ಮನಸಿಗೆ ಮುದ ನೀಡುತ್ತದೆ

ಆ ಕ್ಷಣವನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ. ತಮಗಾದ ಸಂತೋಷವನ್ನು ಕಾಮೆಂಟ್‌ಗಳ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ಇದು ಅದ್ಭುತವಾಗಿದೆ! ಇದು ತುಂಬಾ ಸುಂದರವಾಗಿದೆ! ತುಂಬಾ ಮುದ್ದಾಗಿದೆ! ಮನಸಿಗೆ ಮುದ ನೀಡುತ್ತದೆ ಎಂದು Instagram ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Published On - 8:31 pm, Thu, 25 August 22

Follow Us
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು