China: ಚೀನಾದ ಮೃಗಾಲಯವೊಂದಕ್ಕೆ ಆನೆಯನ್ನು (Elephant) ನೋಡಲು ಈ ಪುಟ್ಟ ಮಗು ತನ್ನ ಪೋಷಕರೊಂದಿಗೆ ಹೋಗಿದೆ. ಈ ದೊಡ್ಡ ಆನೆಯನ್ನು ಮೈಮರೆತು ನೋಡುವಾಗ ಅದರ ಪುಟ್ಟ ಪಾದದ ಚಪ್ಪಲಿ ಕೆಳಗೆ ಬಿದ್ದಿದೆ. ಆಗ ಆನೆ ಕಾಳಜಿಯಿಂದ ಮಗುವಿನ ಚಪ್ಪಲಿಯನ್ನು ಸೊಂಡಿಲಿಂದ ಎತ್ತಿ ಅದರ ಪುಟ್ಟ ಕೈಗೆ ಇತ್ತಿದೆ. ಇದು ಹಳೆಯ ವಿಡಿಯೋ. ಮತ್ತೀಗ ವೈರಲ್ ಆಗುತ್ತಿದೆ. ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಸೆ. 28ರಂದು Xನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈತನಕ ಸುಮಾರು 49,000 ಜನರು ನೋಡಿದ್ದಾರೆ. ಅನೇಕರು ‘ಸೌಮ್ಯ ಮನಸಿನ ದೈತ್ಯ’ನನ್ನು ಕೊಂಡಾಡಿದ್ದಾರೆ. ಆನೆಯು ಬುದ್ಧಿವಂತ ಮತ್ತು ಸೂಕ್ಷ್ಮ ಮನಸಿನ ಪ್ರಾಣಿ ಎಂದಿದ್ದಾರೆ.
ಇದನ್ನೂ ಓದಿ : Viral Video: ಅಮೆರಿಕ: ‘ಅಂತ್ಯಕ್ರಿಯೆ’ ಪರಿಕಲ್ಪನೆಯಡಿ ಪ್ರೆಗ್ನೆನ್ಸಿ ಶೂಟ್ ಮಾಡಿಸಿಕೊಂಡ ಮಹಿಳೆ
ಈ ಆನೆಗಳ ಮಿದುಳಲ್ಲಿ ಬುದ್ಧಿವಂತಿಕೆ ಮತ್ತು ಹೃದಯದಲ್ಲಿ ಪ್ರೀತಿ ತುಂಬಿರುತ್ತದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈ ಆನೆ ತುಂಬಾ ಮುದ್ದಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಶಾಂತ, ದೈತ್ಯಜೀವಿಯನ್ನು ನಾನು ಸದಾ ಪ್ರೀತಿಸುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ಅದು ತನ್ನ ಸೊಂಡಿಲನ್ನು ಗ್ರಿಲ್ಗೆ ಸುತ್ತಿದುದರ ಅರ್ಥ ಯಾರಿಗಾದರೂ ಆಯಿತೇ? ಎಂದು ಕೇಳಿದ್ದಾರೆ ಮಗದೊಬ್ಬರು.
He is confined. But not his spirits & compassion 😊😊
Returns the shoe of a child which accidentally fell in its enclosure.
(Free wild from cages) pic.twitter.com/odJyfIjM9Y— Susanta Nanda (@susantananda3) September 28, 2023
ನಿಜಕ್ಕೂ ಇದು ಬಹಳ ಆಪ್ತವಾದ ವಿಡಿಯೋ, ಇದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ ಎಂದು ಅನೇಕರು ಹೇಳಿದ್ಧಾರೆ. ಇದರ ಸೌಮ್ಯತನ ಇದರ ಮೇಲೆ ಮತ್ತಷ್ಟು ಗೌರವವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈಗಲೇ ಈ ಆನೆಯನ್ನು ತಬ್ಬಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಈ ಆನೆ ನನಗೆ ಬೇಕು ನಾನು ಸಾಕಿಕೊಳ್ಳುತ್ತೇನೆ ಎಂದು ಪ್ರೀತಿಗರೆದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ‘ಒಂದು ಕಾಲು ಕಳೆದುಕೊಂಡ ನನ್ನೊಂದಿಗೆ ವರ್ಷಾ ಕಲ್ಲಿನಂತೆ ನಿಂತಳು’
ನಾನು ಅದೆಷ್ಟು ಬಾರಿ ಈ ವಿಡಿಯೋ ನೋಡಿದೆನೋ ಕಾಣೆ ಎಂದಿದ್ದಾರೆ ಒಬ್ಬರು. ದೈತ್ಯದ ಶಾಂತ ಮತ್ತು ಕಾಳಜಿ, ಹಾಗೆಯೇ ಆ ಪುಟ್ಟ ಕೈಗಳು, ಪುಟ್ಟ ಚಪ್ಪಲಿ ಆಹಾ… ಸ್ವರ್ಗ ಎಂದಿದ್ದಾರೆ ಇನ್ನೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:31 pm, Fri, 29 September 23