Viral Video: ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳನ್ನು ಆಟಿಕೆಯಂತೆ ಎತ್ತಿ ಬಿಸಾಡಿದ ಆನೆ; ಬೆಚ್ಚಿ ಬಿದ್ದ ಜನ

ಸಾಮಾಜಿಕ ಜಾಲತಾಣದಲ್ಲಿ ಆನೆಗಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದರಲ್ಲಿ ಬಹುತೇಕ ಆನೆಗಳ ತುಂಟಾಟ, ಜೀವನ ಕ್ರಮ, ಅವುಗಳ ಒಗ್ಗಟ್ಟು ಇಂತಹ ಭಾವನಾತ್ಮಕ ದೃಶ್ಯಗಳೇ ಇರುತ್ತವೆ. ಆಗೊಮ್ಮೆ ಈಗೊಮ್ಮೆ ಈ ಆನೆಗಳು ಸಿಟ್ಟಿಗೆದ್ದು, ರಂಪಾಟ ಮಾಡುವ ದೃಶ್ಯವೂ ವೈರಲ್ ಆಗುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮದವೇರಿದ ಆನೆಯೊಂದು ನೋಡನೋಡುತ್ತಿದ್ದಂತೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಎತ್ತಿ ಬಿಸಾಡಿದೆ. ಗಜರಾಜನ ಆರ್ಭಟವನ್ನು ಕಂಡು ನೋಡಗರು ಭಯಬೀತರಾಗಿದ್ದಾರೆ.

Viral Video: ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳನ್ನು ಆಟಿಕೆಯಂತೆ ಎತ್ತಿ ಬಿಸಾಡಿದ ಆನೆ; ಬೆಚ್ಚಿ ಬಿದ್ದ ಜನ
Edited By:

Updated on: Mar 17, 2024 | 4:59 PM

ಆನೆಗಳನ್ನು ಬುದ್ಧಿವಂತ ಪ್ರಾಣಿಗಳು ಎಂದು ಕರೆಯಲಾಗುತ್ತದೆ. ಅವುಗಳು ನಮ್ಮಂತೆಯೇ ಆಲೋಚಿಸುವ ಹಾಗೂ ಇತರರ ಭಾವನೆಗಳನ್ನು ಅರ್ಥೈಸುವ ಸಾಮರ್ಥ್ಯವನ್ನು ಹೊಂದಿವೆ. ಅಷ್ಟೇ ಅಲ್ಲದೆ ಆನೆಗಳು ಶಾಂತ ಸ್ವಭಾವದ ಪ್ರಾಣಿಗಳು ಕೂಡಾ ಹೌದು. ಸಾಮಾನ್ಯವಾಗಿ ಅವುಗಳು ಯಾರ ಮೇಲೂ ಆಕ್ರಮಣ ಮಾಡುವುದಿಲ್ಲ, ತಮ್ಮ ಪಾಡಿಗೆ ಇರುತ್ತವೆ. ಒಂದು ವೇಳೆ ಇವುಗಳಿಗೆ ಏನಾದ್ರೂ ಸಿಟ್ಟು ಬಂದ್ರೆ ಅಥವಾ ಮದವೇರಿದರೆ ಮನುಷ್ಯರನ್ನು ಮಾತ್ರವಲ್ಲ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಎಸೆದು ರಂಪಾಟ ನಡೆಸುತ್ತವೆ. ಹೀಗೆ ಮದವೇರಿದ ಆನೆಗಳು ದಾಂಧಲೆ ನಡೆಸುವಂತಹ ದೃಶ್ಯಗಳು ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿರುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ಹರಿದಾಡುತ್ತಿದ್ದು, ಮದವೇರಿದ ಆನೆಯೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಎತ್ತಿ ಬಿಸಾಡಿ ರಂಪಾಟ ನಡೆಸಿದೆ. ಗಜರಾಜದ ಆರ್ಭಟವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಈ ಘಟನೆಯು ಕೇರಳದಲ್ಲಿ ನಡೆದಿದ್ದು, ದೇವಸ್ಥಾನದ ಉತ್ಸವದ ವೇಳೆ ಮೆರವಣಿಗೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕೋಪಗೊಂಡ ಆನೆಯೊಂದು ರಸ್ತೆ ಬದಿ ಸಾಲಾಗಿ ನಿಲ್ಲಿಸಿದ್ದ ವಾಹನಗಳನ್ನೆಲ್ಲಾ ಎತ್ತಿ ಬಿಸಾಡಿದೆ. ಈ ವಿಡಿಯೋವನ್ನು @monuz__cr7 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಮದವೇರಿದ ಆನೆಯೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ ಮಾಡಿ, ವಾಹನಗಳನ್ನು ಜಖಂಗೊಳಿಸಿರುವ ದೃಶ್ಯವನ್ನು ಕಾಣಬಹುದು. ವ್ಯಕ್ತಿಗಳಿಬ್ಬರು ಆನೆಯ ಮೇಲೆ ಕುಳಿತು ಮೆರವಣಿಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕೋಪಗೊಂಡಂತಹ ಆ ಆನೆ ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ ಮಾಡುತ್ತದೆ. ಮೊದಲಿಗೆ ಬೈಕ್ ಒಂದನ್ನು ತನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿ, ನಂತರ ಅಲ್ಲಿ ನಿಲ್ಲಿಸಿದ್ದಂತಹ ಎರಡು ಆಟೋಗಳನ್ನು ಎತ್ತಿ ಬಿಸಾಡಿ ಸಂಪೂರ್ಣವಾಗಿ ದ್ವಂಸ ಮಾಡಿದೆ.

ಇದನ್ನೂ ಓದಿ: ನಾಲ್ಕು ಇಂಚಿನ ಬಾಲದೊಂದಿಗೆ ಜನಿಸಿದ ಮಗು; ಬೆರಗಾದ ವೈದ್ಯ ಲೋಕ 

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 18.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆನೆಗಳು ಇಷ್ಟು ಬಲಶಾಲಿಯಾಗಿರುತ್ತವೆ ಎಂಬುದನ್ನು ನಾನೆಂದು ನೋಡಿರಲಿಲ್ಲʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾವೆಲ್ಲರೂ ಈ ದೃಶ್ಯವನ್ನು ಕಂಡು ಮೋಜು ಮಾಡುತ್ತಿದ್ದೇವೆ. ಪಾಪ ಆ ಆಟೋ ಚಾಲಕನ ಮನಸ್ಸಿಗೆ ಎಷ್ಟು ನೋವಾಗಿರಬೇಡʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪುಟ್ಟ ಮಕ್ಕಳು ಆಟಿಕೆಗಳನ್ನು ಎಸೆಯುವಂತೆ ಈ ಆನೆ ವಾಹನಗಳನ್ನು ಬಿಸಾಡುತ್ತಿದೆಯಲ್ವಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಹಲವರು ಗಜರಾಜನ ಆರ್ಭಟವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ