
ಮನುಷ್ಯರಾದ ನಮ್ಮಲ್ಲಿ ಏನಾದರೂ ಕೊರತೆಯಿದ್ದರೆ ಅದನ್ನೇ ತಲೆಯಲ್ಲಿಟ್ಟುಕೊಂಡು ಕೊರಗುತ್ತೇವೆ. ಬದುಕಿನಲ್ಲಿ ಖುಷಿಯಿಂದ ಇರಲು ಸಾಧ್ಯವಿಲ್ಲ ಎಂದೇಳಲು ಸಾವಿರ ಕಾರಣಗಳನ್ನು ಹುಡುಕುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನ ಅಂಗವೈಕಲ್ಯತೆ ಹೊಂದಿರುವವರು ಬದುಕನ್ನು ಸ್ವೀಕರಿಸಿದ ರೀತಿ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಆದರೆ ಈ ವಿಡಿಯೋ ನೋಡಿದ ಮೇಲಂತೂ ಎಲ್ಲಾ ಸರಿಯಿದ್ದು ಬದುಕಿನಲ್ಲಿ ಖುಷಿಯಾಗದೇ ಇದ್ದರೆ ನಾವು ಯಾವ ಲೆಕ್ಕ ಎಂದೆನಿಸದೇ ಇರದು. ಹೌದು ಅಂಗವೈಕಲ್ಯತೆ ಹೊಂದಿರುವ ಆನೆಗಳು (elephants) ತಮ್ಮ ದೈಹಿಕ ಕೊರತೆಯನ್ನು ಮರೆತು ಖುಷಿಯಿಂದ ಚೆಂಡಾಟ ಆಡಿದ್ದು, ಆ ಕ್ಷಣವನ್ನು ಅನಂದಿಸಿದೆ. ಸೇವ್ ಎಲಿಫೆಂಟ್ ಫೌಂಡೇಶನ್ ಸಂಸ್ಥಾಪಕ ಚೆಕ್ ಚೈಲರ್ಟ್ (Save Elephant Foundation Founder Lek Chailert) ಈ ಅಪರೂಪದ ವಿಡಿಯೋ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
@lek chailert ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಅಂಗವೈಕಲ್ಯತೆ ಹೊಂದಿರುವ ಆನೆಗಳೆರಡು ಖುಷಿಯಿಂದಲೇ ಚೆಂಡಾಟ ಆಡುತ್ತಿರುವುದನ್ನು ನೀವಿಲ್ಲಿ ನೋಡಬಹುದು. ಸಂತೋಷದ ಜೀವನ ನಡೆಸಲು ಅಂಗವೈಕಲ್ಯ ಅಡ್ಡಿಯಾಗಲ್ಲ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಆಕರ್ಷಕ ಜೋಡಿಯಾದ ವಾನಾ ಮತ್ತು ದಾವೊ ಥಾಂಗ್ ಅವರನ್ನು ಭೇಟಿ ಮಾಡಿ.
ಅಂಗವೈಕಲ್ಯತೆ ಹೊಂದಿರುವ ಇಬ್ಬರು ಧೈರ್ಯಶಾಲಿ ಹೆಣ್ಣು ಆನೆಗಳಿವು. ವಾನಾ ಆನೆಯ ಎಡ ಹಿಂಗಾಲು ಊನಗೊಂಡಿದೆ. ದಾವೊ ಥಾಂಗ್ ಅವರ ಬಲಗಾಲು ಸರಿಯಾಗಿಲ್ಲ. ದೈಹಿಕ ಸವಾಲುಗಳ ಹೊರತಾಗಿಯೂ ಖುಷಿಯಿಂದ ಇದ್ದಾವೆ. ಸಂತೋಷ ಹಾಗೂ ಉತ್ಸಾಹದಿಂದ ಒಟ್ಟಿಗೆ ಚೆಂಡನ್ನು ಆಡಲು ಇಷ್ಟಪಡುತ್ತವೆ. ಈ ಕ್ಲಿಪ್ ನಿಮ್ಮ ಮುಖದಲ್ಲಿ ನಗುವನ್ನು ತರುತ್ತದೆ. ಪ್ರತಿದಿನ ನಿಮಗೆ ಸ್ಫೂರ್ತಿ ನೀಡುವಷ್ಟೇ ನಿಮ್ಮನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಎರಡು ಆನೆಗಳ ಒಂದೊಂದು ಕಾಲು ಸರಿಯಾಗಿಲ್ಲ, ಆದ್ರೆ ಚೆಂಡು ಕಂಡೊಡನೆ ಮೆಲ್ಲನೆ ಕಾಲಿನಿಂದ ಒದ್ದು ಆಟ ಆಡುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:Video: ಇದು ಒಡಹುಟ್ಟಿದವರ ಶುದ್ಧ ಪ್ರೀತಿ, ಮರಿ ಆನೆಗಳ ಕ್ಯೂಟ್ ಚುಂಬನ
ಈ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಈ ವಿಡಿಯೋ ಐವತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಬದುಕನ್ನು ಸ್ವೀಕರಿಸುವ ಹಾಗೂ ನ್ಯೂನತೆಯನ್ನು ಮೆಟ್ಟಿ ನಿಲ್ಲುವುದು ತಿಳಿದಿರಬೇಕು. ಆಗ ಮಾತ್ರ ಬದುಕು ರಸವತ್ತಾಗಿರಲು ಸಾಧ್ಯ ಎಂದಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ನನ್ನ ಮೊಗದಲ್ಲಿ ನಗು ತರಿಸಿತು. ಇದನ್ನು ನೋಡಲು ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಖುಷಿಯನ್ನು ಹುಡುಕಲು ಸಣ್ಣ ಸಣ್ಣ ವಿಚಾರಗಳು ಸಾಕು ಎಂದು ಮತ್ತೆ ನೆನಪಿಸಿದಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ