‘ಟೋಲ್​ ಕಟ್ಟಿ’ ಆನೆಗಳ ಸಿಹಿಯಾದ ವಿನಂತಿ, ಶರಣಾದ ಸಹೃದಯಿ ಡ್ರೈವರ್

| Updated By: ಶ್ರೀದೇವಿ ಕಳಸದ

Updated on: Oct 21, 2022 | 12:14 PM

Toll Tax : ಆನೆಗಳ ದಾರಿಗೆ ಅಡ್ಡಬಂದವರೇ ನಿಲ್ಲಬೇಕು. ಬಂದಿದ್ದಕ್ಕೆ ಅವರು ಹೀಗೆ ಟ್ಯಾಕ್ಸ್​ ವಸೂಲಿ ಮಾಡಿಯೇ ಕಳಿಸುವುದು. ಅದರಲ್ಲೂ ಅವರಿಗೆ ಪ್ರಿಯವಾದ ಆಹಾರವಿದ್ದರೆ ಕೇಳಿಯಾರೇ? ನೋಡಿ ಈ ವಿಡಿಯೋ.

‘ಟೋಲ್​ ಕಟ್ಟಿ’ ಆನೆಗಳ ಸಿಹಿಯಾದ ವಿನಂತಿ, ಶರಣಾದ ಸಹೃದಯಿ ಡ್ರೈವರ್
Elephants stop truck carrying sugarcane to take toll tax
Follow us on

Viral Video : ಒಂದೂರಿನಿಂದ ಇನ್ನೊಂದೂರಿಗೆ ಅಥವಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಾಗ ಟೋಲ್​ಗಳಲ್ಲಿ ನಿಗದಿತ ತೆರಿಗೆಯನ್ನು ಪ್ರತಿಯೊಬ್ಬ ಪ್ರಯಾಣಿಕರೂ ಕಟ್ಟಬೇಕಿರುವುದು ನಿಯಮ. ಅದರಲ್ಲೂ ಸರಕು ಸಾಗಣೆ ಸಂಬಂಧಿಸಿದ ವಾಹನ ಮತ್ತು ಟ್ರಕ್​ಗಳು ಸ್ವಲ್ಪ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಈ ಎಲ್ಲ ವ್ಯವಸ್ಥೆಯನ್ನು ನಿರ್ವಹಿಸಲು ನಿರ್ವಹಿಸಲು ಸುಸಜ್ಜಿತವಾದ ಸಿಬ್ಬಂದಿಯನ್ನು ಪ್ರತೀ ಟೋಲ್​ಗಳಲ್ಲಿಯೂ ನೇಮಿಸಲಾಗಿರುತ್ತದೆ. ಆದರೆ ಇದೀವ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆನೆಗಳು ಸ್ವಯಂನೇಮಕಗೊಂಡಿವೆ. ತಮಗೆ ಬೇಕಾದ ಸಿಹಿಯಾದ ಟೋಲ್​ ಅನ್ನು ತಾವಾಗಿಯೇ ಸಂಗ್ರಹಿಸಿಕೊಳ್ಳುತ್ತಿವೆ.

ಐಎಫ್​ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಆನೆಗಳ ದಾರಿಯಲ್ಲಿ ಈ ಕಬ್ಬಿನ ಟ್ರಕ್​ ಅಡ್ಡಬಂದಿದೆ. ಕಬ್ಬು ಮೊದಲೇ ಆನೆಗಳಿಗೆ ಪ್ರಿಯವಾದ ಆಹಾರ. ಸುಮ್ಮನೆ ಬಿಟ್ಟಾವೆಯೇ!? ಅಡ್ಡಗಟ್ಟಿ ಕಬ್ಬನ್ನು ಹಿರಿದೆಳೆದು ಮನಸಾ ತಿಂದಿವೆ. ಅಂತೂ ಹೀಗೆ ಟೋಲ್​ ತೆರಿಗೆಯನ್ನು ಸಂಗ್ರಹಿಸುವಲ್ಲಿ ಆನೆಗಳು ಯಶಸ್ವಿಯಾಗಿವೆ.

ಈ ತನಕ ಈ ವಿಡಿಯೋ ಅನ್ನು ಸುಮಾರು 74,000 ಜನರು ನೋಡಿದ್ದಾರೆ. 3,300 ಜನರು ಇಷ್ಟಪಟ್ಟಿದ್ದಾರೆ. ‘ಲಾರಿ ಡ್ರೈವರ್​ ಸಹೃದಯಿಯಾಗಿದ್ದಾರೆ, ಏನಾದರೂ ಬಹುಮಾನ ಕೊಡಬೇಕು ಅವರಿಗೆ’ ಎಂದಿದ್ದಾರೆ ಒಬ್ಬರು. ‘ಸರ್, ಈ ಕಬ್ಬಿಗೆ ಸುಮ್ಮನೆ ಚೂರು ಫ್ಲೇವರ್ ಸೇರಿಸಿದೆವು’ ಎಂದು ರೀಟ್ವೀಟ್​ ಮಾಡಿದ್ದಾರೆ ಇನ್ನೂ ಒಬ್ಬರು. ‘GST ಎಂದರೆ ಗಜರಾಜ ಟ್ಯಾಕ್ಸ್​’ ಎಂದಿದ್ದಾರೆ ಮತ್ತೂ ಒಬ್ಬರು. ‘ERT – Elephant Road Tax’ ಹೀಗೆಂದಿದ್ದಾರೆ ಮಗದೊಬ್ಬರು. ‘ಇವರು ಹೀಗೆ ಟ್ರಕ್​ ನಿಲ್ಲಿಸಿರುವುದು ಯಾಕೆ? ವನ್ಯಜೀವಿಗಳಿಗೆ ಹೀಗೆ ಆಹಾರ ಕೊಡುವುದು ಅಪರಾಧ’ ಎಂದು ಒಬ್ಬರು ನ್ಯಾಯ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ‘ಇದು ಮುದ್ದಾದ ತೆರಿಗೆ’ ಎಂದಿದ್ದಾರೆ ಹೀಗೊಬ್ಬರು. ‘ಅವರು ಟ್ಯಾಕ್ಸ್​ ಡಿಪಾರ್ಟ್​ಮೆಂಟ್​ನವರು ಅಲ್ಲ, ಫುಡ್​ ಇನ್​ಸ್ಪೆಕ್ಟರ್’ ಎಂದಿದ್ದಾರೆ. ಒಟ್ಟು 249 ಜನರು ಈ ಪೋಸ್ಟ್​ ರೀಟ್ವೀಟ್​ ಮಾಡಿದ್ದಾರೆ.

ಎಂಥ ಸಿಹಿಯಾದ ತೆರಿಗೆ ಇದಲ್ವಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:13 pm, Fri, 21 October 22